ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-11

1016
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 11
ಬ್ರಹ್ಮ ಲೋಕ, ಕೈಲಾಸಕ್ಕೆ ಭೃಗು ಮಹರ್ಷಿ ಭೇಟಿ ನೀಡಿದ್ದರ ಬಗ್ಗೆ ಕೇಳಿಕೊಂಡೆವು. ಮುಂದೇನಾಯಿತು ಇಂದು ನೋಡೋಣ.
ಈಶ್ವರನಿಗೆ ಭೃಗು ಮಹರ್ಷಿಯು ಸಗುಣ, ನಿರ್ಗುಣ, ಬಿಂದುರೂಪ ತಾಳಲಿ ಎಂದು ಶಾಪವನ್ನು ಕೊಟ್ಟು ಬಿಟ್ಟರು. ಆದ್ದರಿಂದ ಪೂಜೆ ಅಭಿಶೇಕಾದಿಗಳು ಶಿವಲಿಂಗಕ್ಕೆ, ಅಲಂಕಾರಗಳು ನಟರಾಜನಿಗೆ.
ಇದರಿಂದ ವೀರಭದ್ರ, ಬೈರವಾದಿ ದೇವತೆಗಳು ಕೋಪಗೊಂಡಾಗ ಶಿವನು ಕರುಣಾದೃಷ್ಟಿಯಿಂದ ಅವರನ್ನೆಲ್ಲಾ ಸಮಾಧಾನ ಪಡಿಸುತ್ತಾನೆ.
ಈಶ್ವರನಿಗೆ ಶಾಪವಿತ್ತು ವೈಕುಂಠದೆಡೆಗೆ ಹೊರಡುತ್ತಾರೆ ಭೃಗು ಮಹರ್ಷಿ.ವೈಕುಂಠದ ವರ್ಣನೆ ಶ್ರೀ ಸ್ವಾಮೀಜಿ ಯವರ ವಿವರಣೆಯಿಂದ ಕೇಳುವುದೇ ಬಲು ಚಂದ.
ಬ್ರಹ್ಮ ಲೋಕದಲ್ಲಿ ಎಲ್ಲರೂ ಅವರ ಪಾಡಿಗೆ ಅವರಿದ್ದರು, ಕೈಲಾಸದಲ್ಲಿ ಎಲ್ಲರೂ ಈಶ್ವರನಮತೆ ಉಗ್ರವಾಗಿದ್ದರು. ಆದರೆ ವೈಕುಂಠದಲ್ಲಿ ಎಲ್ಲರೂ ನಿಜವಾದ ಆನಂದಮಯವಾಗಿದ್ದರು. ವೈಕುಂಠವು ಆನಂದ ನಿಲಯ.
ಇಂತಹ ಆನಂದ ನಿಲಯದಲ್ಲೂ ಭೃಗು ಮಹರ್ಷಿಗೆ ಕೋಪ ಏತಕ್ಕೆ ಬಂದಿತು? ಏನಾಯಿತು ವೈಕುಂಠದಲ್ಲಿ ಎಂದು ತಿಳಿಯಲು ತಪ್ಪದೇ ಇಂದಿನ ಸಂಚಿಕೆಯನ್ನು ನೋಡಿ.
ಇಂದಿನ ಸಂಚಿಕೆಯ ಮತ್ತೊಂದು ವಿಶೇಷ ಎಂದರೆ ಶ್ರೀ ಸ್ವಾಮೀಜಿ ಯವರು ಹಾಡಿರುವ ಹರಿ ಕೀರ್ತನೆ
” ಹರಿಯೇ ನಿನ್ನ ಮಾಯೆ ಅರಿಯೆ
ಕರಿರಾಜ ಪೊರೆದ ದೊರೆಯೇ “
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share