ಮೈಸೂರು ಪತ್ರಿಕೆ ಆಧ್ಯಾತ್ಮಿಕ ಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-13

687
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 13
ನಿನ್ನೆ ಭೃಗು ಮಹರ್ಷಿ ವೈಕುಂಠದಲ್ಲಿ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಭೂಲೋಕಕ್ಕೆ ವಾಪಸ್ಸಾಗಿದ್ದನ್ನು ಕೇಳಿದೆವು. ಋಷಿ ಮುನಿಗಳಿಗೆ ಏನು ಹೇಳಿದರೆಂದು ಇಂದು ತಿಳಿದುಕೊಳ್ಳೋಣ.
ಭೂಲೋಕದಲ್ಲಿ ಭೃಗುವು ಶಾಂತಚಿತ್ತರಾಗಿರುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಹೋಗಿದ್ದ ಕೆಲಸ ಏನಾಯಿತೆಂದು ಕೇಳಿದಾಗ ಭೃಗುವು ಈ ರೀತಿ ಹೇಳುವರು.
ಪರಂಬ್ರಹ್ಮನು ಜ್ಞಾನ ಸ್ವರೂಪಿ ಹಾಗಾಗಿ ಮಾತನಾಜಲಿಲ್ಲ, ಕೋಪಿಷ್ಟನಾದರೂ ಶಿವನು ತನ್ನನ್ನು ನೋಡಿ ಶಾಂತ ಚಿತ್ತನಾಗಿದ್ದನು. ಇವರಿಬ್ಬರಿಗೂ ಶಾಪ ಕೊಟ್ಟರೂ ಇಬ್ಬರೂ ತಿರುಗಿ ನನ್ನನ್ನು ಶಪಿಸಲಿಲ್ಲ. ಇನ್ನು ವೈಕುಂಠದ ಬಗ್ಗೆ ಏನು ಹೇಳಲಿ, ಶ್ರೀ ಹರಿಯು ಮಲಗಿದ್ದಾನೆಂದು ಅವನನ್ನೇ ಒದ್ದೆ ಆದರೆ ಅವನು ನನ್ನ ಪಾದದ ಸೇವೆಯನ್ನೆ ಮಾಡಿದ. ಅವನು ಸಕಲ ಗೋಳಗಳನ್ನು ತನ್ನಲ್ಲಿಟ್ಟುಕೊಂಡಿರುವ ಅನಂತ ಶಯನ ಎಂಬುದರಿವಾಯಿತು ನಂತರ. ಆಗ ನನಗೆ ಜ್ಞಾನೋದಯವಾಯಿತು. ಬ್ರಹ್ಮ ಮಹೇಶ್ವರರು ಶ್ರೀ ಹರಿಯಲ್ಲೆ ನನಗೆ ದರ್ಶನ ಕೊಟ್ಟರು.
ಭೃಗುವಿಗೆ ಹೇಗೆ ತ್ರಿಮೂರ್ತಿಗಳ ದರ್ಶನ ವಾಯಿತು ಎಂಬುದನ್ನು ಶ್ರೀ ಸ್ವಾಮೀಜಿಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ. ಬನ್ನಿ ನೋಡೋಣ ಮತ್ತು ಇತರರೊಂದಿಗೂ ಶೇರ್ ಮಾಡೋಣ.
ಈ ಸಂದರ್ಭ ವಿವರಿಸುವಂತಹ ಕಬೀರರ ರಚನೆಯನ್ನು ಅಮೋಘವಾಗಿ ಹೇಳಿ ಅರ್ಥ ಕೂಡ ಹೇಳಿದ್ದಾರೆ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share