ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 14

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 14
ಭೃಗುವು ಭೂಲೋಕದ ಮುನಿಗಳಿಗೆ ತಮ್ಮ ಅನುಭವವನ್ನು ಹೇಳಲು ಮುಂದುವರೆಸಿದರು.
ಶ್ರೀಮನ್ನಾರಯಣನೇ ಆದಿ. ರೂಪ ಇರುವವನು, ಇಲ್ಲದಿರುವವನು. ಅವನು ಸರ್ವಾಂತರ್ಯಾಮಿ. ಅವನು ಆದಿ ಅನಂತನು. ಲಕ್ಷ್ಮೀಯಪ ಅವನಲ್ಲೆ ನೆಲೆಸಿದ್ದಾಳೆ. ಹಾಗಾಗಿ ಮಹಾ ವಿಷ್ಣುವನ್ನೆ ಪ್ರಧಾನ ದೇವತೆಯಾಗಿ ಸ್ವೀಕರಿಸಬೇಕು ಎಂದು ಭೃಗುವು ಸೂಚಿಸುತ್ತಾರೆ.
ಮುನಿಗಳೆಲ್ಲರೂ ಇದಕ್ಕೆ ಸಮ್ಮತಿಸಿ ಶ್ರೀ ಹರಿಯ ಕೀರ್ತನೆ ಮಾಡಿ ಯಜ್ಞವನ್ನು ಮುಂದುವರೆಸಿ ಅದನ್ನು ಶ್ರೀ ಹರಿಗೆ ಧಾರೆ ಎರೆಯುತ್ತಾರೆ.
ಇದರಿಂದ ವಿಷ್ಣು ಸಂತುಷ್ಟನಾಗುತ್ತಾನೆ. ಆದರೆ ಲಕ್ಷ್ಮಿಯು ಬೇಸರಗೊಳ್ಳುತ್ತಾಳೆ. ಭೃಗು ಹರಿಯನ್ನು ಒದ್ದರೂ, ಹರಿಯುವ ಅವನ ಪಾದವನ್ನೆ ತೊಳೆದದ್ದರಿಂದ ಲಕ್ಷ್ಮೀ ಬೇಸರಗೊಂಡಿದ್ದಳು. ಹೀಗೇಕಾಯಿತು ಎಂಬುದನ್ನು ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ. ತಪ್ಪದೇ ನೋಡಿ, ಶೇರ್ ಮಾಡಿ.
ಇನ್ನು ಇಂದು ಶ್ರೀ ಸ್ವಾಮೀಜಿ ಯವರು ರಚಿಸಿರುವ ವಿಶೇಷ ಕೀರ್ತನೆ
” ತಂದೆ ತಾಯಿ ಪಾಂಡುರಂಗ
ಬಂಧು ಗುರುವು ಪಾಂಡುರಂಗ”
ಈಭಜನೆಯನ್ನು ಉಣಬಡಿಸಿದ್ದಾರೆ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ