ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 15
ನಿನ್ನೆ ಸಂಚಿಕೆಯಲ್ಲಿ ಲಕ್ಷ್ಮೀ ದೇವಿಯು ಬೇಸರಗೊಂಡಿದ್ದಳು. ಇಂದು
ಪರಮಾತ್ಮನು ಶಿಕ್ಷೆಯನ್ನು ಕೊಟ್ಟು ಶಿಕ್ಷಣವನ್ನು ಕೊಡುತ್ತಾನೆ. ಅವನು ಕರುಣಾಮಯಿ. ಎಲ್ಲರನ್ನು ಎಲ್ವನ್ನೂ ಭರಿಸುತ್ತಾನೆ. ಭೃಗುವು ಹರಿಯನ್ನು ಕಾಲಿನಿಂದ ಒದ್ದರೂ ಅವನನ್ನೂ ಭರಿಸುತ್ತಾನೆ.
ತಂದೆಯಾಗಿ ಶ್ರೀ ಹರಿ ಮಾಡಿದ್ದೇನೋ ಸರಿ ಇರಬಹುದು, ಮಗನಾಗಿ ಭೃಗು ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಎಂಬ ಅನುಮಾನ ಹುಟ್ಟುತ್ತದೆ.
ಅದಕ್ಕುತ್ತರವಾಗಿ ಕೂರ್ಮಾವತಾರದಲ್ಲಿ ದೇವತೆಗಳು ತಪ್ಪು ಮಾಡಲಿಲ್ಲವ? ವರಾಹ ಅವತಾರದಲ್ಲಿ ಲೋಕಕಲ್ಯಾಣಾರ್ಥ ಯಾವ ರೂಪವನ್ನು ಎತ್ತಿದ ಶ್ರೀ ಹರಿ? ಅದನ್ನು ಭರಿಸಲಿಲ್ಲವ ಸ್ವಾಮಿಯು? ಭಕ್ತರ ಚರ್ಯೆ ಹೇಗೇ ಇದ್ದರೂ ಸ್ವಾಮಿಯ ಚರ್ಯೆ ಮಾತ್ರ ಸಮರ್ಥವೆ. ಭಕ್ತನಿಗೋಸ್ಕರ ಕಂಬದಿಂದ ಹೊರಗೆ ಬರಲಿಲ್ಲವೆ? ಅರ್ಧ ಮನುಷ್ಯ ಅರ್ಧ ಪ್ರಾಣಿಯಾಗಿ ನರಸಿಂಹಾವತಾರ ತೆಗೆದುಕೊಳ್ಳಲಿಲ್ಲವೇ ಸ್ವಾಮಿ? ತನ್ನ ಜಾಗವನ್ನು ತಾನೇ ಪಡೆಯಲು ವಾಮನಾವತಾರದಲ್ಲಿ ಶ್ರೀ ಹರಿಯನ್ನು ಕುಳ್ಳನಾಗಿ ಮಾಡಲಿಲ್ಲವೇನು? ತಪಸ್ಸು ಮಾಡಿಕೊಂಡಿರಬೇಕಿದ್ದ ಪರಶುರಾಮನು ಬಿಲ್ಲು ಹಿಡಿಯಲಿಲ್ಲವೇನು? ರಾಮನ ಅವತಾರದಲ್ಲಿ ಮಾನವನಾಗಿ ಹುಟ್ಟಿ ಕಾಡು ಮೇಡು ಅಲಿಯಲಿಲ್ಲವೇನು?
ಭೃಗು ಮಾಡಿದ್ದು ತಪ್ಪಾದರೆ ಇಷ್ಟೆಲ್ಲಾ ಅವತಾರಗಳೆತ್ತಲು ಕಾರಣರಾದವರೆಲ್ಲಾ ಹೇಗೆ ಸರಿ?
ಹೀಗೆ ಚಮತ್ಕಾರವಾಗಿ ಶ್ರೀ ಸ್ವಾಮೀಜಿ ಯವರು ವಿಷ್ಣುವಿನ ಬೇರೆ ಬೇರೆ ಅವತಾರಗಳಲ್ಲಿ ಲೋಕ ಕಲ್ಯಾಣಾರ್ಥ ಏನೆಲ್ಲ ಕಷ್ಟಗಳನ್ನು ಅನುಭವಿಸಿದ ಎಂಬುದನ್ನು ವರ್ಣಿಸಿದ್ದಾರೆ ಇಂದಿನ ಸಂಚಿಕೆಯಲ್ಲಿ.
ಮಾಮೂಲಾಗಿ ತಪ್ಪದೇ ವೀಕ್ಷಿಸಿ ಶೇರ್ ಮಾಡಿ.
( ಸಶೇಷ )
@ ಭಾಲರಾ
ಬೆಂಗಳೂರು
ಜೈಗುರುದತ್ತ.