ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-17

909
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 17
ಲಕ್ಷ್ಮೀ ದೇವಿಯು ಕರವೀರ ಪುರ ಸೇರಿದ್ದನ್ನು ತಿಳಿದುಕೊಂಡೆವು. ನಂತರ ಏನಾಯಿತು?
ಮುನಿ ಜನಗಳು ಮಾತಾ ಪಿತೃಗಳನ್ನು ಧ್ಯಾನಿಸುತ್ತಿದ್ದರು. ಸ್ವಾಮಿಯ ಆಗಮನಕ್ಕೆ ತಕ್ಕ ತಯಾರಿ ನಡೆಸಲು ತಾಯಿಯು ಮುಂಚಿತವಾಗಿಯೇ ಭೂಲೋಕಕ್ಕೆ ಬಂದು ಬಿಟ್ಟಳು. ಸ್ವಾಮಿಯು ಕಡೆಯದಾಗಿ ಲಕ್ಷ್ಮೀ ದೇವಿಯನ್ನು ನೋಡಿದ್ದು ವೈಕುಂಠದಿಂದ ಭೂಲೋಕದ ಬೆಟ್ಟದ ಮೇಲೆ ಧುಮುಕಿದಾಗ. ನಂತರ ಅವಳ ವೇಗಕ್ಕೆ ಹೋಗಲಾರದಾಯಿತು ಸ್ವಾಮಿಗೆ. ಸ್ವಾಮಿಯು ಬೆಟ್ಟದ ಮೇಲೆ ಪಾದಸ್ಪರ್ಶ ಮಾಡಿದ. ಲಕ್ಷ್ಮಿ ಪಾದ ಸ್ಪರ್ಶ ದಿಂದಲೆ ಬೆಟ್ಟಕ್ಕೆ ವೈಕುಂಠದ ಕಳೆ ಬಂದಿತ್ತುವಈಗ ಸ್ವಾಮಿಯ ಆಗಮನದಿಂದ ಆ ಕಳೆ ಮತ್ತಷ್ಟು ಹೆಚ್ಚಾಯಿತು. ಸ್ವಾಮಿಯ ಹಿಂದೆ ದೇವತೆಗಳು ಬಂದು ಅಲ್ಲಿ ನೆಲೆಸಿದರು. ದೇವತೆಗಳೆಲ್ಲರೂ
” ಗೋವಿಂದ ಬಾರೊ ಬಾರೋ
ಗೋಪಾಲ ಬಾರೊ ಬಾರೋ “
ಎಂದು ಹಾಡುತ್ತಾ ಸ್ವಾಮಿಯನ್ನು ಬರಮಾಡಿಕೊಂಡರು ಎಂದು ಶ್ರೀ ಸ್ವಾಮೀಜಿಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share