ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 20

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 20
ನಿನ್ನೆ ಗೋರೂಪ ಬ್ರಹ್ಮ ವಿಷ್ಣು ವಿಗೆ ಹಾಲಿನ ಅಭಿಷೇಕ ಮಾಡಿದ್ದನ್ನು ಕೇಳಿದೆವು. ಮುಂದೇನಾಯಿತು ನೋಡೋಣ.
ಗೋಪಾಲಕನು ದಿನನಿತ್ಯ ಹಸುಗಳನ್ನು ಮೇಯಿಸಲು ಕರೆತಂದಾಗ ದಿನನಿತ್ಯ ಹಾಲು ಕೊಡುತಿತ್ತು. ಶ್ರೀ ಹರಿಗೆ. ಒಮ್ಮೆ ರಾಣಿಯು ತನ್ನ ಮಗನಿಗೆ ಅದೇ ಹಸುವಿನ ಹಾಲು ಕೊಡುವಂತೆ ಚಿನ್ನದ ಬಿಂದಿಗೆ ಕೊಡುತ್ತಾಳೆ ಆದರೆ ಅವನಿಗೆ ಹಾಲು ಸಿಗುವುದಿಲ್ಲ, ಯಾರೋ ತನ್ನ ಸಹಾಯಕರು ಕರೆದಿರಬೇಕೆುಂದುಕೊಂಡ, ಆದರೆ ಮತ್ತೆ ಹೀಗೆ ಆದಾಗ ರಾಣಿಯು ಕೋಪಗೊಂಡು ತನಗೆ ಆ ಹಸುವಿನ ಹಾಲು ಬೇಕೆ ಬೇಕೆಂದು ಹಠ ಹಿಡಿಯುತ್ತಾಳೆ. ಆಗ ಗೋಪಾಲಕನು ಅವಮಾನಿತನಾಗಿ ಹಾಲು ಎಲ್ಲಿ ಎಂದು ತಿಳಿಯಲು ಹಸುವಿಗೆ ತಿಳಿಯದಂತೆ ಹಿಂಬಾಲಿಸುತ್ತಾನೆ. ಅಲ್ಲಿ ಹಸುವು( ಬ್ರಹ್ಮ ) ಮೈಮರೆತು ಹಾಲಭಿಷೇಕ ಮಾಡುತ್ತಿರುತ್ತದೆ. ಹಾಗಾಗೇ ವೆಂಕಟೇಶ್ವರ ದೇವಾಲಯದಲ್ಲಿ ಮೊದಲು ಬ್ರಹ್ಮೋತ್ಸವ ಮಾಡುವುದು. ಇದನ್ನು ನೋಡಿದ ಗೋಪಾಲಕನು ಕೋಪಗೊಂಡು ಕೊಡಲಿಯನ್ನು ಮೇಲೆತ್ತುತ್ತಾನೆ. ಮೈಮರೆತ ಹಸುವನ್ನು ರಕ್ಷಿಸಲು ಹರಿಯು ಹುತ್ತದಿಂದ ಎದ್ದು ನಿಲ್ಲುತ್ತಾನೆ, ಕೊಡಲಿಯ ಪೆಟ್ಟು ಶ್ರೀ ಹರಿಯ ತಲೆಗೆ ತಗುಲಿ ರಕ್ತ ಚಿಮ್ಮುತ್ತದೆ. ಈ ದೃಶ್ಯ ನೋಡಿದ ಗೋಪಾಲಕನು ಭಯದಿಂದ ಪ್ರಾಣ ಬಿಡುತ್ತಾನೆ. ಹಸುವು ಹರಿಯ ಪೆಟ್ಟನ್ನು ನೋಡಿ ನೊಂದು ಗೋಮಾಳಕ್ಕೆ ವಾಪಸ್ಸಾಗಿ ಅಲ್ಲಿ ಅಳಲು ಶುರುಮಾಡುತ್ತದೆ.
ಇದನ್ನು ನೋಡಿ ಅಚ್ಚರಿಗೊಂಡು ಏನೆಂದು ಯೋಚಿಸುತ್ತಿದ್ದಾಗ ಅವರೆಲ್ಲರನ್ನು ಮತ್ತೆ ಹುತ್ತದ ಬಳಿ ಕರೆದು ಕೊಂಡು ಬರುತ್ತದೆ. ಎಂತಹ ಕಥೆ ನಿಜವಾಗಿಯೂ ಇದನ್ನು ಶ್ರೀ ಸ್ವಾಮೀಜಿ ಯವರ ಬಾಯಿಯಿಂದಲೇ ತಪ್ಪದೇ ಕೇಳಿ ಶೇರ್ ಮಾಡಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.