ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 22

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 22
ನಿನ್ನೆ ಚೋಳರಾಜನ ಶಾಪ ವಿಮೋಚನೆ ಹೇಗೆ ಎಂದು ಶ್ರೀ ನಿವಾಸನು ತಿಳಿಸಿದನು. ಮುಂದೆ…..
ತನ್ನ ಅಹಂಕಾರದಿಂದ ಈ ಸ್ಥಿತಿಗೆ ಬಂದಿದ್ದಾಗ್ಯೂ, ಅದರಿಂದ ಹೊರಬರಲು ಹರಿ ಸ್ಮರಣೆ ಮಾಡುತಿರಲು ನಿರ್ಧರಿಸುತ್ತಾನೆ.
ಮನುಷ್ಯನ ಶರೀರ ತೆಗೆದುಕೊಂಡಿರುವುದರಿಂದ ಮನುಷ್ಯನಂತೆ ನೋವು ಅನುಭವಿಸುವುದಾಗಿ ನಿರ್ಧರಿಸಿ ತನ್ನ ನೋವಿಗಾಗಿ ಬೃಹಸ್ಪತಿಯನ್ನು ಕರೆದ. ಬೃಹಸ್ಪತಿಯು ಹರಿಯ ದರ್ಶನ ಮಾಡಬೇಕೆಂದುಕೊಳ್ಳುತ್ತಿದ್ದಂತೆ ಹರಿಯು ನೆನೆಸಿಕೊಂಡ. ಬೃಹಸ್ಪತಿಯು ಶ್ರೀ ಹರಿಯ ತಲೆಯ ಗಾಯವನ್ನು ನೋಡಿ ಗಾಬರಿಗೊಂಡನು. ಶ್ರೀ ಹರಿಯು ಹಿಂದೆ ನರಸಿಂಹಾವತಾರದಲ್ಲಿ ಹಿರಣ್ಯಕಶುಪುವನ್ನು ಬಗೆದಾದ ತನ್ನ ಉಗುರುಗಳಿಗಾದ ಗಾಯಕ್ಕೆ ಅವದುಂಬರದ ಎಲೆ ಮತ್ತು ಎಕ್ಕದ ಹಾಲನ್ನು ಹಾಕಿಕೊಂಡಿದ್ದನ್ನು ಜ್ಞಾಪಿಸಿದನು.
ಸ್ವಾಮಿಯು ಆಗ ತನ್ನ ಮುಂಚಿನ ಅವತಾರಗಳನ್ನು ಮೆಲಕು ಹಾಕಿದನು. ಸಪ್ತಗಿರಿಯು ಅಯೋಧ್ಯೆ, ಬೃಂದಾವನ ಆಗಿ ಬಿಟ್ಟಿತ್ತು. ಗಾಯದ ನೋವಿನಿಂದ ಸ್ವಾಮಿಗೆ ನಿದ್ದೆ ಬಂದು ಬಂದು ಹೋಗುತ್ತಿತ್ತು. ಆ ನೋವನ್ನು ತಾಳಲಾರದೆ ಹುತ್ತದಿಂದ ಹೊರಗೆ ಬಂದು ಗಿಡ ಮೂಲಿಕೆಗಳನ್ನು ಹುಡುಕುತ್ತಲಿದ್ದಾಗ ಜೋರಾದ ಹೆಜ್ಜೆಯ ಶಬ್ಧ ಬಂದಿತು. ಯಾರೆಂದು ನೋಡಿದಾಗ ವರಾಹ ಸ್ವಾಮಿಯು ವೃಷಭ ವನ್ನು ಸಂಹರಿಸಿ ಬರುತ್ತಿರುವುದನ್ನು ನೋಡುತ್ತಾನೆ ಶ್ರೀ ಹರಿಯು.
ಸಪ್ತಗಿರ ಗಿಡಮರಗಳೆಲ್ಲಾ ಶ್ರೀ ಹರಿಯ ಸ್ಪರ್ಶದಿಂದ ಮೂಲಿಕೆಯಾಯಿತು ಎಂದು ಹೇಳುತ್ತಾ ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ಶ್ರೀ ನಿವಾಸನನ್ನು ಈ ರೀತಿ ಹಾಡಿ ಹೊಗಳಿದ್ದಾರೆ.
” ಗೋವಿಂದ ಗೋಪಾಲ ಬಾಲಾ ಗೋವಿಂದ
ನಿನ್ನಿಂದ ಜಗವೆಲ್ಲ ಆನಂದ “
ಎಂದು. ಮತ್ತೆ ನೆನಪಿಸುತ್ತಿದ್ದೇವೆ ನಾಳೆಯಿಂದ ಶ್ರಾವಣ ಮಾಸ ಆರಂಭ. ತಪ್ಪದೇ ನೋಡಿ ಶೇರ್ ಮಾಡಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share