ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 24

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 24

ವಕುಳಾದೇವಿ ಶ್ರೀನಿವಾಸ ಸಮಾಗಮದ ಬಗ್ಗೆ ಕೇಳಿದೆವು ನಿನ್ನೆಯ ದಿನ. ಇಂದು
ಸುವೀರನು ರಾಜನಾಗಿ ಆಕಾಶ ಹಾಗೂ ತೋಂಡಮಾನ ಎಂಬ ಇಬ್ಬರು ಪುತ್ರರನ್ನು ಪಡೆಯುತ್ತಾನೆ. ಇಬ್ಬರು ಅತೀವ ಪರಾಕ್ರಮಿಗಳು ಮತ್ತು ಹರಿ ಭಕ್ತರು. ಆಕಾಶನು ತೋಂಡರಾಜ್ಯವನ್ನು ಪರಿಪಾಲಿಸುತ್ತಿರುತ್ತಾನೆ ಆದರೆ ಸಂತಾನ ಕೃಪೆ ಹೊಂದಿರಲಿಲ್ಲ. ಪಂಡಿತರನ್ನು ವಿಚಾರಿಸಲು ಯಾಗವನ್ನು ಮಾಡಲು ಸೂಚಿಸುತ್ತಾರೆ. ಯಾಗಾರಂಭದಲ್ಲಿ ಭೂಮಿ ಪೂಜೆ ಮಾಡುವಾಗ ಒಂದು ಕಾಂತಿಯುಕ್ತ ಪದ್ಮವು ಕಾಣುತ್ತದೆ. ರಾಜನು ಹತ್ತಿರ ಹೋಗಿ ನೋಡಲಾಗಿ ಲಕ್ಷ್ಮೀ ಕಳೆಯುಳ್ಳ ಮುದ್ದಾದ ಹೆಣ್ಣು ಮಗುವು ಕಂಡುಬರುತ್ತದೆ. ರಾಜನಿಗೆ ಅಪಾರವಾದ ಸಂತೋಷ ವಾಗಿ ಅದನ್ನು ರಾಣ ಕೈಗೆ ಕೊಟ್ಟು ಪೋಷಿಸಲು ಹೇಳುತ್ತಾನೆ. ಈ ಮಗು ಪದ್ಮದಲ್ಲಿ ದೊರೆತದ್ದರಿಂದ ಪದ್ಮಾವತಿ ಎಂದು ನಾಮಕರಣ ಮಾಡುತ್ತಾನೆ. ಮಗು ಬಂದ ಗಳಿಗೆ ರಾಣಿಯು ಗರ್ಭಧರಿಸಿ ಮಗು ಒಂದಕ್ಕೆ ಜನ್ಮ ನೀಡುತ್ತಾಳೆ. ಪದ್ಮಾವತಿ ದೊಡ್ಡವಳಾದಂತೆ ರಾಜನಿಗೆ ಅವಳಿಗೆ ತಕ್ಕ ವರನನ್ನು ಹುಡುಕಬಯಸುತ್ತಾನೆ.
ಒಮ್ಮೆ ಪದ್ಮಾವತಿ ತನ್ನ ಸ್ನೇಹಿತರೊಡನೆ ವಿಹಾರಕ್ಕೆ ತೆರಳಿದಾದ ಅವರೆಲ್ಲಾ ಪದ್ಮಾವತಿಗೆ ಹಾಸ್ಯ ಮಾಡುತ್ತಾರೆ, ವಿವಾಹವಾಗುವ ವಯಸ್ಸು ಈಗಲೂ ಆಟವೇ ಎಂದು ಆಗ ಅವಳು ಹುಸಿಮುನಿಸು ತೋರಿಸಿ ಅವರನ್ನು ಹೋಗುವಂತೆ ಹೇಳುತ್ತಾಳೆ. ಅವರೆಲ್ಲಾ ಹೋದಾಗ ನಾಚಿ ಕುಳಿತಿದ್ದಾಗ ವೃದ್ಧ ಮುನಿಯೊಬ್ಬರು ಬರುತ್ತಾರೆ. ಪದ್ಮಾವತಿ ಯನ್ನು ಕೈತೊರಿಸಲು ಕೇಳಿದಾಗ ಭಯಗೊಳ್ಳುತ್ತಾಳೆ. ವೃದ್ಧ ತಪಸ್ವಿಯು ತನ್ನನ್ನು ನೋಡಿ ಭಯಪಡಬಾರದೆಂದು ಸಮಾಧಾನ ಮಾಡಿ ಅವಳ ಕೈ ನೋಡುತ್ತಿದ್ದಂತೆ ಅಚ್ಚರಿ ಹಾಗೂ ಸಂತೋಷ ಗೊಂಡು ಇಂತಹ ಹಸ್ತಮುದ್ರಿಕೆ ನೋಡೆ ಇಲ್ಲವೆಂದು, ಅವಳಿಗೆ ಸಿಗುವ ವರನು ಅಪ್ರತಿಮನು ಸಾಕ್ಷಾತ್ ಪದ್ಮನಾಭನೆ ಅವಳ ಪತಿಯಾಗುವನೆಂದು ಹೇಳುತ್ತಾನೆ. ಅವನು ಹತ್ತಿರದಲ್ಲೇ ಇರುವುದಾಗಿಯೂ ತಿಳಿಸುತ್ತಾನೆ. ಇಷ್ಟು ಹೇಳಿ ವೃದ್ಧ ತಪಸ್ವೀ ವೇಷದಲ್ಲಿದ್ದ ನಾರದರು ಮಾಯವಾಗುತ್ತಾರೆ.
ನಂತರ ಪದ್ಮಾವತಿ ಗೆಳತಿಯರೊಡನೆ ಹೂತೋಟಕ್ಕೆ ಹೋದಾಗ ಕೆಲ ದುಂಬಿಗಳು ಪದ್ಮಾವತಿಯ ಸುತ್ತ ಸುತ್ತುತ್ತಿರುತ್ತದೆ.
ಇತ್ತ ಒಂದು ದುಂಬಿ ಶ್ರೀನಿವಾಸನ ಮೇಲೆ ಕುಳಿತು ಅವನ ದಮನ ಹರಿಸಿ ಅಲ್ಲಿದ್ದ ಇತರ ಪ್ರಾಣಿಗಳೊಡನೆ ಓಡಲು ಶುರು ಮಾಡುತ್ತವೆ. ಶ್ರೀನಿವಾಸನು ಅವುಗಳ ಹೋಗುತ್ತಿರುವಾಗ ಕುದುರೆಯೊಂದು ಸಿಕ್ಕಿ ಅದರ ಮೇಲೆ ಕುಳಿತು ಆ ಪ್ರಾಣಿಗಳನ್ನು ಹಿಂಬಾಲಿಸುತ್ತಾನೆ. ಪ್ರಾಣಿಗಳು ಬಲಕ್ಕೆ ತಿರುಗಿತಂತಾಗಿ ಮಾಯವಾಗುತ್ತದೆ. ಇವನು ಬಲಕ್ಕೆ ತಿರುಗಿ ಹೋದಾಗ ಮದಗಜವೊಂದು ಕಾಣುತ್ತದೆ. ಶ್ರೀನಿವಾಸನನ್ನು ನೋಡಿ ಅದೂ ಬಲಕ್ಕೆ ತಿರುಗಿ ಓಡಲು ಪ್ರಾರಂಭಿಸುತ್ತದೆ. ಅಲ್ಲಿದ್ದ ಮರದ ರೆಂಬೆಗಳೆಲ್ಲ ನೆಟ್ಟಗೆ ನಿಂತು ಶ್ರೀನಿವಾಸ ನಿಗೆ ದಾರಿ ಮಾಡಿಕೊಟ್ಟಿತು. ಶ್ರೀನಿವಾಸನ ಗಮನ ಆನೆಯ ಮೇಲಷ್ಟೆ ಇತ್ತು. ಪಕ್ಕದಲ್ಲೇ ಇದ್ದ ಜಗನ್ಮಾತೆ ಪದ್ಮಾವತಿ ಕಾಣಿಸಲೇ ಇಲ್ಲ. ಶ್ರೀನಿವಾಸನು ಪದ್ಮಾವತಿ ಬಳಿ ಹೋಗುವಂತೆ ಮಾಡಲು ಪ್ರಕೃತಿಯು ಯಶಸ್ವಿಯಾಗಿತ್ತು. ಶ್ರೀನಿವಾಸನು ಆನೆಗೆ ಬಾಣ ಬಿಡಲು ಪ್ರಯತ್ನಸಿದಾಗ ಆನೆಯು ಬಲಕ್ಕೆ ಬಾಗಿದಾಗ ಅಲ್ಲೊಂದು ಸುಂದರ ಉದ್ಯಾನವನ ಕಾಣುತ್ತದೆ.
ತುಂಬಾ ಸ್ವಾರಸ್ಯಕರವಾಗಿದೆ ಅಲ್ವ ಕಥೆ. ಇದನ್ನು ಶ್ರೀ ಸ್ವಾಮೀಜಿ ಯವರ ಬಾಯಲ್ಲೆ ಕೇಳಬೇಕು. ಎಲ್ಲರೂ ತಪ್ಪದೆ ನೋಡಿ ಮತ್ತೆ ಶೇರ್ ಮಾಡಿ.

( ಸಶೇಷ )
*ಭಾಲರಾ
ಬೆಂಗಳೂರು

ಜೈಗುರುದತ್ತ.


Share