ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 26

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 26
ನಿನ್ನೆ ಶ್ರೀನಿವಾಸ ಪದ್ಮಾವತಿ ಸಮಾಗಮನವಾಯಿತು. ಅತಿ ಮುಖ್ಯ ಗಟ್ಟದಲ್ಲಿದ್ದೆವು. ಮತ್ತೆ ಮುಂದೇನಾಯಿತು ನೋಡಲೇಬೇಕು ಮತ್ತೆ….
ವಕುಳಾದೇವಿ ಪದ್ಮಾವತಿಯ ಪೂರ್ವ ಜನ್ಮದ ವೃತ್ತಾಂತ ಏನೆಂದು ಕೇಳಲು ಹರಿಯು ಈ ರೀತಿ ಹೇಳಿದನು.
ಪೂರ್ವಜನ್ಮದಲ್ಲಿ ತನ್ನನ್ನು ಪತಿಯಾಗಿ ಪಡೆಯಲು ತಪ್ಪಸ್ಸು ಮಾಡಿದ್ದ ವೇದವತಿ. ರಾವಣನು ತನ್ನನ್ನು ವರಿಸಲೆಂದು ಕೇಳಿದಾಗ ಶ್ರೀ ಹರಿ ಒಬ್ಬನೇ ತನ್ನ ಪತಿಯೆಂದು ಹೇಳಿ ಅಗ್ನಿ ಪ್ರವೇಶಿಸಿದಳು. ಅಗ್ನಿ ಬಳಿ ಸುರಕ್ಷಿತವಾಗಿದ್ದಳು. ತಾನು ಶ್ರೀ ರಾಮನಾಗಿದ್ದಾಗ ಜಿಂಕೆ ಎಂಬ ಮಾಯೆಯಲ್ಲಿ ಸಿಲುಕಿಕೊಂಡಾಗ ರಾವಣನು ಸೀತೆಯನ್ನು ಅಪಹರಿಸಿದಾಗ ರಾವಣನ ಲಂಕೆಯಲ್ಲಿದ್ದದ್ದು ವೇದವತಿಯೆ. ಸೀತೆ ಅಗ್ನಿ ಪ್ರವೇಶಿಸಿ ಹೊರ ಬಂದಾಗ ಸೀತೆಯೊಡನೆ ವೇದವತಿಯು ಹೊರಬಂದಳು. ಅಗ್ನಿಯು ತನ್ನನ್ನು ಅಂದರೆ ರಾಮನಿಗೆ ವೇದವತಿ ವಿವಾಹವಾಗಲು ಕೇಳಿದಾಗ ಈ ಅವತಾರದಲ್ಲಿ ಏಕ ಪತ್ನಿ ವ್ರಥಸ್ಥನೆಂದು ಮುಂದಿನ ಜನ್ಮದಲ್ಲಿ ವಿವಾಹವಾಗುವುದಾಗಿಯೂ ಅಲ್ಲಿಯ ತನಕ ಬ್ರಹ್ಮ ಲೋಕದಲ್ಲಿರಲು ಸೂಚಿಸಿದ್ದೆ, ಆ ವೇದವತಿಯೇ ಪದ್ಮಾವತಿ ಎಂದು ಪದ್ಮಾವತಿಯ ವೃತ್ತಾಂತವನ್ನು ಹೇಳಿದನು.
ಇದನ್ನು ಕೇಳಿದ ವಕುಳಾದೇವಿ ತಕ್ಷಣ ಅಲ್ಲಿಂದ ಹೊರಟು ಶಿವಾಲಯಕ್ಕೆ ಹೊರಟಳು. ಶಿವನನ್ನು ತನ್ನ ಕೆಲಸ ಸುಸೂತ್ರವಾಗಿ ನಡೆಯುವಂತೆ ಪ್ರಾರ್ಥಿಸಿದಳು. ನಂತರ ಅಲ್ಲಿ ನೆರೆದಿದ್ದ ಸ್ತ್ರೀಗಳ್ಯಾರು ಎಂದು ಕೇಳಲು ಅವರುಗಳು ಪದ್ಮಾವತಿಯ ಸಖಿಗಳೆಂದು ಹಿಂದಿನ ದಿನ ಉದ್ಯಾನವನದಲ್ಲಿ ನಡೆದ ಕಥೆಯನ್ನು ವಿವರಿಸಿ ಅದಾದ ಮೇಲೆ ಪಪದ್ಮಾವತಿ ಮೂರ್ಚೆ ಹೋಗಿದ್ದಾಗ್ಯೂ ರಾಜನು ದೈವಘ್ನ್ಯರನ್ನು ಕರೆಸಿ ಕಾರಣ ಕೇಳಿದಾಗ ಪದ್ಮಾವತಿಗೆ ಏನಾಗಿಲ್ಲವೆಂದು ಅವಳು ಒಬ್ಬ ಪುರುಷನನ್ನು ಕಂಡಿದ್ದಾಳೆ ಅವನೊಂದಿಗೆ ವಿವಾಹವಾಗುವುದಾಗಿಯೂ ತಿಳಿಸಿದರು. ಅದಕ್ಕಾಗಿ ಒಂದು ಶಾಂತಿಯನ್ನು ಮಾಡಬೇಕಾಗಿಯೂ ತಿಳಿಸಿದರು. ದೇವಾಲಯದಲ್ಲಿ ವರನ ಕಡೆಯ ಒಬ್ಬ ಮಹಿಳೆಯಿಂದ ಒಳ್ಳೆಯದಾಗುತ್ತದೆಂದು ತಿಳಸಿದ್ದಾರೆ. ಅದಕ್ಕಾಗಿ ಅವರೆಲ್ಲಾ ದೇವಾಲಯಕ್ಕೆ ಬಂದಿರುವುದಾಗಿ ತಿಳಿಸಿದರು.
ಮತ್ತೆ ಅವರುಗಳು ವಕುಳಾದೇವಿ ಯಾರೆಂದು ಕೇಳಲು ತಾನು ಒಂದು ಮುಖ್ಯ ಹಾಗೂ ಉನ್ನತ ಕೆಲಸಕ್ಕಾಗಿ ಧರಣೀ ದೇವಿ ಮಹಾರಾಣಿಯನ್ನು ಭೇಟಿಮಾಡಿಸಬೇಕೆಂದು ಕೇಳಿದಾಗ ಅವರುಗಳು ಒಪ್ಪಿದರು.
ಶುಭಕ್ಕೆ ಮುನ್ನ ಶಿವನ ದರ್ಶನ ಮಾಡಬೇಕೆಂದು ಹೇಳುತ್ತಾ ಶ್ರೀ ಸ್ವಾಮೀಜಿ ಯವರು ಈ ರೀತಿ ಭಜಿಸಿದರು ಇಂದಿನ ಸಂಚಿಕೆಯಲ್ಲಿ.
” ಶಂಕರನೇ ಶಂಕರನೇ ಹೇ ಶಂಭೋ “
ಇಂದಿನ ಕಥೆ ಮತ್ತು ಭಜನೆಯನ್ನು ಕೇಳಿ ನಾವೆಲ್ಲಾ ಪುನೀತರಾದೆವು ಮತ್ತೆ ನಮ್ಮ ಬಂಧು ಬಾಂಧವರೂ ಕೇಳಿ ಪುಣ್ಯ ಪಡೆಯುವಂತೆ ಪ್ರೇರೇಪಿಸೋಣ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share