ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 28.

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 28
ವೇಂಕಟೇಶ್ವರನು ಕೊರವಂಜಿ ವೇಷದಲ್ಲಿ ಅರಮನೆಗೆ ಬಂದು ಧರಣೀದೇವಿಗೆ ಶಾಸ್ತ್ರ ಹೇಳಿದ್ದನ್ನು ಕೇಳಿದೆವು. ನಂತರ
ಧರಣೀದೇವಿಯು ವಕುಳಾದೇವಿಯನ್ನು ಭೇಟಿಯಾಗಿ ತನ್ನ ಪರಿಚಯ ಮಾಡಿಕೊಂಡು, ಶ್ರೀನಿವಾಸ ನನ್ನು ಕೃಷ್ಣ ಎಂದು ಕರೆಯುವುದಾಗಿಯು, ದೇವಕಿ ವಸುದೇವರ ಪುತ್ರನೆಂದು ಅವನದು ವಸಿಷ್ಟ ಗೋತ್ರ, ಶ್ರವಣ ನಕ್ಷತ್ರ ವೆಂದು ಹೇಳುತ್ತಾಳೆ. ಮತ್ತು ಉದ್ಯಾನವನದಲ್ಲಿ ನಡೆದ ಸಂಗತಿಯನ್ನು ವಿವರಿಸಿ ಅವನಿಗೆ ಪದ್ಮಾವತಿಯನ್ನು ಕೊಟ್ಟು ವಿವಾಹ ಮಾಡಬೇಕೆಂದು ಕೇಳುತ್ತಾಳೆ.
ಧರಣೀದೇವಿ ಎಲ್ಲ ವಿಷಯವನ್ನು ಆಕಾಶರಾಜನಿಗೆ ತಿಳಿಸಲು ರಾಜನು ಸಂತೋಷದಿಂದ ಪದ್ಮಾವತಿ ಯನ್ನು ಕರೆಸಿ ವಿಷಯಗಳನ್ನು ತಿಳಿಸುತ್ತಾನೆ ಇದರಿಂದ ಪದ್ಮಾವತಿ ಮುಖ ಪದ್ಮದಂತೆ ಅರಳಿ ನಾಚುತ್ತಾ ಹೊಗುತ್ತಾಳೆ. ಆಕಾಶರಾಜನು ತನ್ನ ಮಗನಿಗೆ ಬೃಹಸ್ಪತಿಯನ್ನು ಕರೆತರಲು ಹೇಳಲು ಬೃಹಸ್ಪತಿಯು ಭೂಲೋಕದಲ್ಲಿ ಶುಕದೇವನು ಇದಕ್ಕೆ ಸರಿಯೆಂದು ಸಲಹೆ ನೀಡುತ್ತಾನೆ. ಆಕಾಶರಾಜನು ತನ್ನ ತಮ್ಮ ತೋಂಡಮಾನಿಗೆ ಶುಕದೇವನನ್ನು ಕರೆತರಲು ಹೇಳುತ್ತಾನೆ. ಶುಕದೇವನು ವಿಷಯ ಕೇಳಿ ಸಂತೋಷಗೊಂಡು ಶುಭ ಕಾರ್ಯಕ್ಕೆ ತಡವೇಕೆ ಎಂದ ತಕ್ಷಣ ತೋಂಡಮಾನನ ಜೊತೆ ನಾರಯಣ ಪುರಕ್ಕೆ ಬರುತ್ತಾರೆ. ವೆಂಕಟೇಶ್ವರ ಕಲ್ಯಾಣ ಮಾಡಿಸುವುದು ತನ್ನ ಭಾಗ್ಯವೆಂದೂ ವೆಂಕಟೇಶ್ವರ ನಿಗೆ ಕನ್ಯಾದಾನ ಮಾಡುವುದು ಆಕಾಶರಾಜನ ಭಾಗ್ಯವೂ ಎನ್ನುತ್ತಾರೆ ಶುಕ ದೇವರು.
ಶುಕದೇವರು ಜಾತಕ ಹೊಂದಿಸಿ ಉಳಿದ ಮದುವೆ ತಯಾರಿ ವಧು ವರನ ಕಡೆಯವರು ಮಾತಾಡಿಕೊಳ್ಳ ಬೇಕೆಂದು ತಿಳಿಸಿದಾಗ ಆಕಾಶರಾಜನು ತನಗೆ ಏನು ಮಾಡಬೇಕೆಂಬ ನಿರ್ದೇಶನ ನೀಡಬೇಕೆಂದು ಕೇಳಲು ಶುಕದೇವನು ರಾಜನಿಗೆ ಒಂದು ಆಹ್ವಾನ ಪತ್ರ ಬರೆದು ಶ್ರೀನಿವಾಸ ನಿಗೆ ಬರೆದು ಕಳುಹಿಸಲು ಹೇಳುತ್ತಾರೆ.
ಆಕಾಶರಾಜನ ಮುದ್ರೆಯೊಂದಿಗೆ ಆ ಪತ್ರವನ್ನು ಶ್ರೀನಿವಾಸ ನಿಗೆ ತಲುಪಿಸಲು ಶುಕದೇವನು ವಕುಳಾದೇವಿಯೊಂದಿಗೆ ಹೋಗುತ್ತಾನೆ.
ವಕುಳಾದೇವಿ ಸಂತೋಷ ದಿಂದ ಶ್ರೀನಿವಾಸ ನಿಗೆ ಹೋದ ಕೆಲಸ ಸಫಲವಾಯಿತೆನ್ನಲು ಶುಕದೇವನು ಶ್ರೀನಿವಾಸ ನಿಗೆ ನಮಸ್ಕರಿಸಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ. ಪದ್ಮಾವತಿ ಸದಾ ಶ್ರೀನಿವಾಸ ನನ್ನೆ ಸ್ಮರಿಸುತ್ತಿರುವುದಾಗಿ ಅವನಲ್ಲೇ ಲೀನವಾಗಿರುವುದಾಗಿ ಹೇಳಿದ್ದಾಳೆಂದು ಹೇಳಲು ತಿಳಿಸಿದ್ದಾಳೆಂದು ಹೇಳಿದಾಗ ಶ್ರೀನಿವಾಸನು ದೇವತೆಗಳೊಂದಿಗೆ ಬಂದು ಅವಳನ್ನು ವರಿಸುವುದಾಗಿ ಹೇಳಲು ಹೇಳಿ ಆಕಾಶರಾಜನಿಗೆ ಪ್ರತ್ಯುತ್ತರ ಪತ್ರವನ್ನು ಕಳುಹಿಸುತ್ತಾನೆ.
ಮದುವೆ ನಿಶ್ಚಯದಂತಹ ಪವಿತ್ರ ಕಥೆಯನ್ನು ಶ್ರೀ ಸ್ವಾಮೀಜಿ ಯವರಿಂದಲೇ ಕೇಳಿ ತಿಳಿಯೋಣ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share