ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 29

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 29
ನಿನ್ನೆ ಆಕಾಶರಾಜ ಹಾಗೂ ಶ್ರೀನಿವಾಸನು ಮದುವೆಯ ನಿಶ್ಚಯ ಪತ್ರವನ್ನು ಬದಲಿಸಿಕೊಂಡರು.
ಇಂದಿನ ಸಂಚಿಕೆಯಲ್ಲಿ ಶ್ರೀ ಸ್ವಾಮೀಜಿ ಯವರು ಮದುವೆಯ ಸಡಗರ ಸಂಭ್ರಮ ಹೇಗೆ ಆರಂಭವಾಯಿತೆಂದು ವಿವರಿಸಿದ್ದಾರೆ. ಭೂಲೋಕದ ಮದುವೆ ಸಂದರ್ಭದಲ್ಲಿ ಏನೇನು ಮಾಡುತ್ತೀವಿ ಎಮದು ನಮಗೆ ಗೊತ್ತೆ ಇದೆ. ಆದರೆ ದೇವಾನು ದೇವತೆಗಳು ವೆಂಕಟೇಶ್ವರ ಕಲ್ಯಾಣಕ್ಕೆ ಹೇಗೆ ತಯಾರಿ ನಡೆಸುತ್ತಾರೆ ಎಂಬುದನ್ನು ನೋಡಿ ಸಂತೋಷ ಪಡಲು ಸದವಕಾಶ ಹೇಗಿರುತ್ತದೆಂದು ನೋಡೋಣ.
ಶ್ರೀನಿವಾಸನು ಗರುಕಮಂತ ಮತ್ತು ಆದಿಶೇಷನನ್ನು ಕರೆಸಿ ವೈಶಾಖ ಶುಕ್ಲ ದಶಮಿಯಂದು ತನ್ನ ಕಲ್ಯಾಣವು ನಿಶ್ಚಯವಾಗಿರುವುದಾಗಿಯೂ ಮೊದಲ ಆಹ್ವಾನ ಪತ್ರಿಕೆಯನ್ನು ಬ್ರಹ್ಮ ನಿಗೆ ಹಾಗೂ ಎಲ್ಲಾ ದೇವಾನು ದೇವತೆಗಳಿಗೆ ತಲುಪಿಸಲು ಹೇಳುತ್ತಾನೆ. ಅದರಂತೆ ಗರುಕಮಂತನು ಮೊದಲು ಸತ್ಯ ಲೋಕಕ್ಕೆ ಹೋಗಿ ಬ್ರಹ್ಮ ಸರಸ್ವತಿಗೆ ಆಹ್ವಾನ ಪತ್ರಿಕೆ ತಲುಪಿಸುತ್ತಾನೆ.
ಬ್ರಹ್ಮ ಸಂತಸದಿಂದ ಇತರ ಮುನೀಂದ್ರರನ್ನು ಬರಲು ಹೇಳುತ್ತಾನೆ. ಬ್ರಹ್ಮನು ಶ್ರೀನಿವಾಸ ಪುರದೆಡೆಗೆ ಹೊರಡುತ್ತಾನೆ. ವೆಂಕಟೇಶ್ವರನು ಆದರದಿಂದ ಬ್ರಹ್ಮ ನನ್ನು ಬರಮಾಡಿಕೊಳ್ಳುತ್ತಾನೆ.
ಗರುಕಮಂತನು ಕೈಲಾಸಕ್ಕೆ ತೆರಳುತ್ತಾನೆ. ವಿಷಯ ತಿಳಿದ ಪ್ರಮಥಗಣಗಳು ಸಂತೋಷದಿಂದ ನರ್ತಿಸಲು ಆರಂಭಿಸುತ್ತದೆ. ಶಿವ ಪಾರ್ವತಿಯರು, ಸುಬ್ರಮಣ್ಯ, ವಿನಾಯಕ ಎಲ್ಲರೂ ತಮ್ಮ ತಮ್ಮ ವಾಹನದಲ್ಲಿ ವೆಂಕಟೇಶ್ವರ ಕಲ್ಯಾಣಕ್ಕೆ ಹೊರಡಲು ಸಕಲ ತಯಾರಿ ಮಾಡಿಕೊಳ್ಳುತ್ತಾರೆ. ಶಿವನು ತನ್ನ ಅಣ್ಣನ ಕಲ್ಯಾಣಕ್ಕೆ ಸಂತಸದಿಂದ ತೆರಳುತ್ತಾನೆ. ಶ್ರೀನಿವಾಸನು ಶಿವನನ್ನು ಆಲಿಂಗನ ಮಾಡಿಕೊಂಡು ಬರ ಮಾಡಿಕೊಳ್ಳುತ್ತಾನೆ.
ಶ್ರೀ ಸ್ವಾಮೀಜಿ ಯವರು ಈ ಸನ್ನಿವೇಶಕ್ಕೆ ತಕ್ಕಂತೆ ಈ ರೀತಿ ಸರಳವಾಗಿ ಸುಂದರವಾಗಿ ಹಾಡುತ್ತಾರೆ ಇಂದಿನ ಸಂಚಿಕೆಯಲ್ಲಿ. ಮತ್ತದೆ ಹೇಳುತ್ತೇನೆ ತಪ್ಪದೇ ನೋಡಿ ಶೇರ್ ಮಾಡಿ.
” ಗೋವಿಂದನ ನೋಡಲೆಂದು
ಶಿವನೋಡಿ ಬಂದ “
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share