ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 31:

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 31
ಕುಬೇರನು ಬಂದವರಿಗೆಲ್ಲಾ ಉಡುಗೊರೆ ಕೊಡುವುದಾಗಿ ನಿರ್ಧರಿಸಿದ್ದನ್ನು ನೋಡಿದ್ದೇವೆ.
ಇಂದು ಯಾರ್ಯಾರು ಏನೇನು ಮಾಡುತ್ತಾರೋ ನೋಡೋಣ.
ವರುಣನು ಬಂದವರಿಗೆಲ್ಲಾ ಪಾನೀಯದ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾನೆ. ಶ್ರೀನಿವಾಸನು ಚಂದ್ರನಿಗೆ ರಾತ್ರಿ ಸಮಯದಲ್ಲಿ ಬೆಳಕಿಗೆ ವ್ಯವಸ್ಥೆ ಮಾಡಬೇಕೆಂದು ಹೇಳುತ್ತಾನೆ. ಸಮಾರಂಭದಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ತಕರಾರು ಮಾಡುವ ಸಾಧ್ಯತೆ ಇದ್ದು ಇವರನ್ನೆಲ್ಲಾ ನಿಯಂತ್ರಣ ದಲ್ಲಿಡಲು ಯಮನಿಗೆ ಸೂಚಿಸುತ್ತಾನೆ. ಬ್ರಹ್ಮನು ತಾನಾಗಿಯೇ ಬಂದು ತಾನು ಪೌರೋಹಿತ್ಯ ಮಾಡುಲುದಾಗಿ ಹೇಳುತ್ತಾನೆ. ಇದರಿಂದ ಭಾಗಶಃ ಎಲ್ಲಾ ವ್ಯವಸ್ಥೆಯು ಮುಗಿದಂತೆ.
ಶ್ರೀನಿವಾಸನು ತಾನೇನು ಮಾಡಬೇಕು ಎಂದು ಬ್ರಹ್ಮ ನನ್ನು ಕೇಳಲು ಮಂಗಳಸ್ನಾನ ಮಾಡಿ ಬರಲು ಸೂಚಿಸುತ್ತಾನೆ. ಸ್ವಾಮಿಯ ಕಣ್ಣಂಚಲ್ಲಿ ನೀರು, ಲಕ್ಷ್ಮಿ ಇಲ್ಲದೆ ತಾನು ಹೇಗೆ ಶೋಭಿಸಲು ಸಾಧ್ಯ? ಲಕ್ಷ್ಮಿಗೆ ತನ್ನ ಕಲ್ಯಾಣದ ಬಗ್ಗೆ ಗೊತ್ತೋ ಇಲ್ಲವೋ ಎಂದು ನೊಂದುಕೊಳ್ಳುತ್ತಾನೆ ಶ್ರೀನಿವಾಸನು.
ಸ್ವಾಮಿಯು ಸೂರ್ಯನನ್ನು ಕರೆದು ಕರವೀಪುರದಲ್ಲಿ ಕದಲದೇ ಕುಳಿತಿರುವ ಲಕ್ಷ್ಮೀ ದೇವಿಯನ್ನು ಕರೆತರಬೇಕಾಗಿ ಆದೇಶಿಸುತ್ತಾನೆ. ಸೂರ್ಯನು ಕರವೀಪುರಕ್ಕೆ ಹೋಗಿ ಲಕ್ಷ್ಮಿ ದೇವಿಗೆ ಸ್ವಾಮಿಯು ಅವಳಿಗಾಗಿ ಕದಲದೆ ಕುಳಿತಿರುವುದಾಗಿ ತಾನು ಬರಲೇ ಬೇಕೆಂದು ಈ ರೀತಿ ಪ್ರಾರ್ಥಿಸುತ್ತಾನೆ.
” ಕಲಯೇ ಹೃದಯೇ ಹರಿಜಾಯಾಂ
ಕಮಲಾಂ ಸದಯಾಂ ಕಮನೀಯಾಂ “

ಸೂರ್ಯನ ಮಾತನ್ನು ಕೇಳಿದೊಡನೆ ಲಕ್ಷ್ಮೀ ದೇವಿಯು ತನ್ನ ಸ್ವಾಮಿಗೇನಾಯಿತೆಂದು ತಕ್ಷಣ ವೇಂಕಟಗಿರಿಯತ್ತ ಹೊರಟುಬಿಟ್ಟಳು. ಎದುರಿಗೆ ವೆಂಕಟೇಶ್ವರ ನಿಧಾನವಾಗಿ ನಡುತ್ತಿರುವುದನ್ನು ನೋಡಿ ಏನಾಯಿತೆಂದು ಕೇಳಲು ಲಕ್ಷ್ಮಿ ಇಲ್ಲದಿದ್ದರೆ ತನ್ನ ಪರಿಸ್ಥಿತಿ ಇಷ್ಟೇ ಎನ್ನುತ್ತಾನೆ ಶ್ರೀನಿವಾಸನು.
ಶ್ರೀ ಸ್ವಾಮೀಜಿ ಯವರು ಇದಿಷ್ಟನ್ನು ವರ್ಣಿಸಿದ್ದಾರೆ ಇಂದಿನ ಸಂಚಿಕೆಯಲ್ಲಿ. ಮಾಮೂಲಿನಂತೆ ಎಲ್ಲರಲ್ಲೂ ಮತ್ತದೇ ಮನವಿ. ನೋಡಿ ಮತ್ತು ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.