ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 34

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 34
ನಿನ್ನೆ ವೇಂಕಟೇಶ್ವರನು ಶುಕದೇವರ ಆತಿಥ್ಯಕ್ಕೆ ಒಪ್ಪಿಕೊಂಡನು.
ನಂತರ ಒಳಗೆ ಹೋದನು, ಮನಃ ಪೂರ್ತಿಯಾಗಿ ಭೋಜನ ಸ್ವೀಕರಿಸಿದನು. ಇದರಿಂದ ಹೊರಗೆ ಇದ್ದ ಕೆಲವರಿಗೆ ಅಸಮಾಧಾನವಾಯಿತು. ಈ ವಿಷಯ ತಿಳಿದ ಶುಕದೇವನಿಗೆ ಗಾಬರಿಯಾಯಿತು. ಆದರೆ ವೇಂಕಟೇಶ್ವರನು ಶುಕದೇವನನ್ನು ಸಮಾಧಾನ ಪಡಿಸಿ ತನ್ನ ಹೊಟ್ಟೆ ಮೇಲೆ ಒಮ್ಮೆ ಸವರಿಕೊಂಡನು. ಇದರಿಂದ ಅಲ್ಲಿದ್ದವರೆಲ್ಲರಿಗೂ ಹೊಟ್ಟೆ ತುಂಬಿಹೋಯಿತು. ಆ ದಿನ ರಾತ್ರಿ ಅಲ್ಲೆ ತಂಗಿ ಬೆಳಗ್ಗೆ ನಾರಯಣಪುರದೆಡೆಗೆ ಹೊರಟಿತು ದಿಬ್ಬಣ.
ಮದುವೆಯ ಶಾಸ್ತ್ರ ಗಳು ಆರಂಭವಾಯಿತು. ಎಲ್ಲಾ ಶಾಸ್ತ್ರಗಳು ಹೆಚ್ಚು ಕಡಿಮೆ ಅಲ್ಲಿಂದಲೆ ಆರಂಭವಾಯಿತು.
ಶ್ರೀನಿವಾಸ ನು ಗರುಕಮಂತನ ಮೇಲೆ, ಪದ್ಮಾವತಿ ಆನೆಯ ಮೇಲೆ ಕುಳಿತು ಇಬ್ಬರೂ ಹಾರಗಳನ್ನು ಬದಲಿಸಿಕೊಂಡರು ಮೂರು ಬಾರಿ. ಇಬ್ಬರೂ ಪಟ್ಟಣದಲ್ಲಿ ಮೆರವಣಿಗೆ ಮುಗಿಸಿಕೊಂಡು ಬಂದ ಮೇಲೆ ಆಕಾಶರಾಜನು ಬಂಗಾರದ ತಟ್ಟೆಯಲ್ಲಿ ಶ್ರೀನಿವಾಸನ ಪಾದ ತೊಳೆದನು. ಆ ಭಾಗ್ಯ ಪಡೆದನು ಆಕಾಶರಾಜನು. ಪದ್ಮಾವತಿಯನ್ನು ಅಂತಃಪುರದಲ್ಲಿ ಸಕಲ ಶೃಂಗಾರದೊಂದಿಗೆ ಅಲಂಕರಿಸಿ ಗೌರಿ ಪೂಜೆಗೆ ಕರೆದುಕೊಂಡು ಬಂದರು. ವಧು ವರರ ಮಧ್ಯೆ ಅಂತರ್ ಪಟವನ್ನು ಹಿಡಿಯಲಾಗಿತ್ತು. ಶ್ರೀನಿವಾಸನಿಗೆ ವಜ್ರದ ಕಿರೀಟದೊಂದಿಗೆ ಇತರ ಆಭರಣ ದೊಂದಿಗೆ ಅಲಂಕರಿಸಿದರು. ಈ ದರ್ಶನ ಮಾಡಿದ ಚೋಳರಾಜನು ಪೈಶಾಚತ್ವದಿಂದ ಮುಕ್ತಿ ಹೊಂದಿದನು.
ಮುಹೂರ್ತದ ಸಮಯ ರಾತ್ರಿ ಒಂದು ಗಂಟೆ. ಪದ್ಮಾವತಿಯ ಗೋತ್ರ ಪ್ರವರಗಳನ್ನು ಹೇಳಿ ಪಾಣಿಗ್ರಹಣ ಮಾಡಬೇಕಾಗಿ ಶ್ರೀನಿವಾಸ ನಿಗೆ ಹೇಳುತ್ತಾರೆ. ನಂತರ ವೆಂಕಟೇಶ್ವರನ ಪ್ರವರ ಹೇಳಿ ಪದ್ಮಾವತಿಯ ಪಾಣಿಗ್ರಹಣ ಮಾಡುವುದಾಗಿ ಓದಿದರು.
ವೆಂಕಟೇಶ್ವರನು ಪದ್ಮಾವತಿಗೆ ಮಾಂಗಲ್ಯ ಧಾರಣೆ ಮಾಡಿದನು. ಬ್ರಹ್ಮ ದೇವರು ಎಲ್ಲಾ ಶಾಸ್ತ್ರ ಗಳನ್ನು ಸಾಂಗವಾಗಿ ನೆರವೇರಿಸಿದನು. ಅಲ್ಲಿ ನೆರೆದಿದ್ದವರೆಲ್ಲಾ ಭಾಗ್ಯವಂತರು.
ಇಂತಹ ಮಹತ್ತರ ಘಟ್ಟವನ್ನು ಶ್ರಾವಣ ಶನಿವಾರ ದಂತಹ ಪರ್ವ ದಿನದಂದು ಶ್ರೀ ಸ್ವಾಮೀಜಿ ಯವರ ಬಾಯಿಯಿಂದ ಕೇಳುತ್ತಿರುವ ನಾವೆಲ್ಲರೂ ಭಾಗ್ಯವಂತರೇ ಸರಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share