ಮೈಸೂರು ಪತ್ರಿಕೆ, ಆಧ್ಯಾತ್ಮಿಕ ಅಂಗಳ: ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ – 38.

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 38
ನಿನ್ನೆಯ ದಿನ ಸ್ವಾಮಿಯು ಆಲಯ ನಿರ್ಮಾಣ ಹೇಗಿರಬೇಕೆಂದು ವರ್ಣಿಸಿದನು.
ಇಂದು ಏನಾಗುತ್ತದೆ ನೋಡೋಣ.
ಸ್ವಾಮಿಯು ಹೇಳಿದಂತೆ ಆಲಯ ನಿರ್ಮಾಣ ವಾಯಿತು. ತೋಂಡಮಾನನು ಸ್ವಾಮಿಯು ಪ್ರವೇಶಿಸುವಂತೆ ಕೋರುತ್ತಾನೆ. ಸ್ವಾಮಿಯು ಬಹಳ ಸಂತೋಷಗೊಂಡು ಒಂದು ಶುಭ ಮುಹೂರ್ತದಲ್ಲಿ ಹೃದಯ ವಾಸಿ ಲಕ್ಷ್ಮಿ ದೇವಿಯೊಡನೆ ಪದ್ಮಾವತಿ ಕೈ ಹಿಡಿದು ಆನಂದ ನಿಲಯದೊಳಗೆ ಹೆಜ್ಜೆ ಹಾಕುತ್ತಾನೆ. ಸಕಲ ಜೀವ ರಾಶಿಗಳು ಈ ದೃಶ್ಯ ನೋಡಿ ಕಣ್ತುಂಬುಕೊಂಡರು. ಆನಂದನಿಲಯವು ಪ್ರಕಾಶ ಮಾನವಾಗಿ ಕಾಣುತ್ತಿತ್ತು. ಇಬ್ಬರು ಏಳು ಮೆಟ್ಟಿಲ್ಲನ್ನು ದಾಟಿ ಬಂಗಾರದ ದ್ವಾರ ಪ್ರವೇಶಿಸಿ ಬ್ರಹ್ಮ ಸ್ಥಾನ ದಲ್ಲಿ ಬಂದು ನಿಂತ. ನಿಂತ ಜಾಗದಲ್ಲಿ ಪದ್ಮ ಪೀಠ ಉದ್ಭವವಾಯಿತು.
ಪದ್ಮಾವತಿ ಶ್ರೀನಿವಾಸ ನನ್ನು ಧ್ಯಾನಿಸುತ್ತ ಎರಡು ಕೈಗಳಲ್ಲಿ ಪದ್ಮ ಹಿಡಿದು ವೆಂಕಟೇಶ್ವರನ ಎಡ ವಕ್ಷಸ್ಥಳ ಅಲಂಕರಿಸಿದಳು. ಆ ಸಮಯಕ್ಕೆ ಶ್ರೀನಿವಾಸನು ಸಾಲಿಗ್ರಾಮ ಶಿಲಾರೂಪಿಯಾದನು.

ಗೋವಿಂದ ಗೋವಿಂದ ಗೋವಿಂದ

ವೆಂಕಟೇಶ್ವರ ತನ್ನ ವರದ ಹಸ್ತ ಪಾದದ ಕಡೆ ತೋರುತ್ತ ತನ್ನ ಪಾದ ಆಶ್ರಯಿಸಿ ಎಂದು ಹೇಳುತ್ತಿದ್ದಾನೆ. ಅವನ ವಾಮ ಹಸ್ತವು ಶರಣು ಬಂದವರನ್ನು ರಕ್ಷಿಸುವುದಾಗಿ ಹೇಳುತ್ತಿದೆ. ತನನ್ನ ಆಶ್ರಯಿಸಿದವರು ಸಂಸಾರ ಸಾಗರದಲ್ಲಿ ಮುಳುಗಲು ಬಿಡುವುದಿಲ್ಲ ಎಂದು ಕಟಿ ಹಸ್ತವು ಸೂಚಿಸುತ್ತದೆ. ಅಲ್ಲದೆ ಪರಮಪದವನ್ನು ಹೊಂದುತ್ತಾರೆ. ವಕ್ಷಸ್ಥಳದಲ್ಲಿ ಕೈಸ್ತುಭ ಮಣಿ, ಕೈಗಳಲ್ಲಿ ನಾಗಾಭರಣ ಹೊಂದಿದ್ದಾನೆ. ವಕ್ಷಸ್ಥಳದಲ್ಲಿ ವ್ಯೂಹ ಲಕ್ಷ್ಮಿ ನೆಲೆಸಿದ್ದು ಭಕ್ತರ ಮನವಿಯನ್ನು ಕೇಳಿ ಸೂಕ್ತ ಸಮಯದಲ್ಲಿ ಸ್ವಾಮಿಗೆ ತಿಳಿಸುತ್ತಾಳೆ. ಹೀಗೆ ಸ್ವಾಮಿಯ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಶ್ರೀ ಸ್ವಾಮೀಜಿ ಇಂದಿನ ಸಂಚಿಕೆಯಲ್ಲಿ ತಿಳಿಯಪಡಿಸಿದ್ದಾರೆ. ತಪ್ಪದೇ ನೋಡಿ ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share