ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-9

ಶ್ರೀ ಗುರು ಗೀತ ಭಾಗ – 9
ಒಬ್ಬ ಮಹಾತ್ಮರು ಒಂದು ಕಡೆ ತ್ಯಾಗ ಮಾಡುತ್ತಿದ್ದಾರೆ ಎಂದರೆ ಮತ್ತೊಂದು ಕಡೆ ಯಾರೋ ಒಬ್ಬರು ಉದ್ಧಾರವಾಗತ್ತಿರುತ್ತಾರೆ. ಪಾರ್ವತಿ ದೇವಿಯು ತನಗೆ ಏನೂ ಗೊತ್ತಿಲ್ಲದಂತೆ ಗುರುತತ್ವದ ಬಗ್ಗೆ ಕೇಳುವುದು ಪರಮೇಶ್ವರನು ಉತ್ತರಿಸುವುದು ಎರಡು ಲೋಕ ಕಲ್ಯಾಣಕ್ಕಾಗಿಯೆ.
ನಿನ್ನ ಚಿಂತನೆಗಳು, ಆಲೋಚನೆಗಳನ್ನು ಅರ್ಪಿಸುವುದು ಆತ್ಮಾರ್ಪಣೆ. ನೀನು ಗುರುವು ಒಂದೇ ಎಂಬ ಅರಿವು ನೀಡಬೇಕು. ಗುರು ಶಿಷ್ಯನು ಒಂದೇ ಎನ್ನುವ ಅರಿವು ಗುರುವಿಗೆ ಇರುತ್ತದೆ ಆದರೆ ಗುರುತತ್ವವನ್ನು ಅರಿಯದ ಹೊರತು ಶಿಷ್ಯನಿಗೆ ಈ ಭಾವನೆ ಬರುವುದಿಲ್ಲ.
ಶಿವನೇ ಗುರುವು, ಗುರುವೇ ಶಿವನು. ಇಬ್ಬರಲ್ಲಿ ಭೇದವಿಲ್ಲ. ಶಿವ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಮೂರು ಶಕ್ತಿಯು ಅಡಕವಾಗಿವೆ. ಅವರೇ ಸಾಕ್ಷಾತ್ ದತ್ತಾತ್ರೇಯರು.
ಗುರುಭಕ್ತಿಯಿಲ್ಲದೆ ಮಾಡುವ ಸಾಧನೆಗಳಿಂದ ದುಷ್ಫಲಗಳೇ ಉಂಟಾಗುತ್ತವೆ. ದೇಹ ದಂಡನೆಯಿಂದ ಪ್ರಯೋಜನವಿಲ್ಲ, ಮಾನಸಿಕ ದಂಡನೆ ಮುಖ್ಯ. ಗುರುವು ಯಾವಾಗ ಹೇಗೆ ಉಪದೇಶ ಮಾಡುತ್ತಾರೆ, ಜಪ ಹೇಗೆ ಮಾಡಬೇಕು ಇವೆಲ್ಲವನ್ನು ಸದ್ಗುರುಗಳ ಅಮೃತ ವಾಣಿಯಿಂದ ಇಂದಿನ ಸಂಚಿಕೆಯಲ್ಲಿ ಅರಿತುಕೊಳ್ಳಲು ಪ್ರಯತ್ನಿಸೋಣ.
ಜೈಗುರುದತ್ತ