ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 48

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 48
ಸಕಲ ತೀರ್ಥಗಳ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ತಿಳಿದುಕೊಂಡೆವು.
ಇಂದು ಅನಂತಾಚಾರ್ಯರ ಭಕ್ತಿ ಬಗ್ಗೆ ತಿಳಿದುಕೊಳ್ಳೋಣ.
ಅನಂತಾಚಾರ್ಯರು ರಾಮಾನುಜಾಚಾರ್ಯರ ಶಿಷ್ಯರು. ಅವರು ತಿರುಮಲದಲ್ಲಿ ಒಂದು ಸುಂದರ ಹೂತೋಟ ಮಾಡಿದರು. ಅವರಿಗೆ ಒಂದು ಕೆರೆ ನಿರ್ಮಿಸಬೇಕೆಂಬ ಮವಸ್ಸಾಯಿತು. ಅವರ ಹೆಮಡತಿ ಗರ್ಭಿಣಿ. ಅವರಿಬ್ಬರೂ ಸೇರಿ ಕೆರೆ ಹೂಳುವ ಕೆಲಸ ಆರಂಭಿಸಿದರು. ಆಚಾರ್ಯರು ಮಣ್ಣು ಅಗೆದು ಕೊಡುತ್ತಿದ್ದರೆ ಅವರ ಪತ್ನಿ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದರು. ಅವರಿಬ್ಬರಿಗೂ ತೋಟದ ಹೂವನ್ನು ಸ್ವಾಮಿಗೆ ಅರ್ಪಿಸುವುದು ಮತ್ತು ಕೆರೆ ಹೂಳೆತ್ತುವುದು ಇದೆರೆಡೇ ಅವರ ಕೆಲಸವಾಗಿತ್ತು. ಇದನ್ನು ಗಮನುಸಿದ ಶ್ರೀನಿವಾಸನಿಗೆ ಅವರಿಬ್ಬರು ದಂಪತಿಗಳಿಗೂ ಸಹಾಯ ಮಾಡಬೇಕೆನಿಸಿತು. ಬಾಲಕನ ರೂಪ ಧರಿಸಿ ಬಂದು ಆಚಾರ್ಯರನ್ನು ತಾನೂ ಸಹಾಯ ಮಾಡುವುದಾಗಿ ಕೇಳಿದ ಆದರೆ ಆಚಾರ್ಯರು ಸ್ವಾಮಿ ತಾವಿಬ್ಬರೆ ಮಾಡಬೇಕಾಗಿದೆ ಎನ್ನಿಸಿ ಬಾಲಕನನ್ನು ಕಳೆಸಿಬಿಟ್ಟರು. ಆ ಬಾಲಕನು ತಾಯಿಯ ಮನವೊಲಿಸಿ ತಾನು ಸಹಾಯ ಮಾಡುವುದಕ್ಕೆ ಒಪ್ಪಿಸುತ್ತಾನೆ. ಇದನ್ನು ಅರಿತ ಅನಂತನು ಆ ಬಾಲತನಿಗೆ ಗುದ್ದಲಿಯಿಂದ ಗಾಯವಾಯಿತು. ತಕ್ಷಣ ಆನಂದನಿಲಯದತ್ತ ಮಾಯವಾದ. ಅನಂತನು ಎಂದಿನಂತೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ದಂತೆ ಹೋಗುತ್ತಾನೆ ಸ್ವಾಮಿಯ ತಲೆಯಿಂದ ರಕ್ತ ಸುರಿಯುತ್ತಲ್ಲಿತ್ತು. ಅನಂತನು ಗಾಬರಿಯಾದ. ಸ್ವಾಮಿಯು ಮೊದಲಿಗೆ ಪಚ್ಚಕರ್ಪೂರವನ್ನು ತನ್ನ ಹಣೆಗೆ ಹಚ್ಚಲು ಹೇಳಿದ.
ಸ್ವಾಮಿಗೆ ಅನಂತನ ಭಕ್ತಿ ಲೋಕಕ್ಕೆ ತೋರಿಸ ಬೇಕೆನಿಸಿತು.
ದಂಪತಿದಳಿಬ್ಬರು ದಿನ ನಿಚ್ಯ ಸುಂದರ ಮಾಲೆ ಗಳನ್ನು ಮಾಡಿ ಅರ್ಪಿಸುತ್ತಿದ್ದರು. ಅಲಮೇಲು ಮಂಗಮ್ಮನವರು ಸ್ವಾಮಿಗೆ ಅಲೆಂಕರಿಸುವುದಕ್ಕು ಒಂದು ಮಾಲೆಯನ್ನು ಆಲಂಕರಿಸಿದಾಗ ಸ್ವಾಮಿಯು ಅನಂತನ ತೋಟದ ಹೂವು ಮತ್ತಷ್ಟು ಸುಂದರವಾಗಿದೆ ಎಂದು ಇಬ್ಬರೂ ತೋಟದ ವಿಹಾರಕ್ಕೆ ಹೋಗುತ್ತಾರೆ. ಅಲ್ಲಿ ರಾತ್ರಿ ವೇಳೆ ಇಬ್ಬರೂ ಹೂವಿನೊಡನೆ ಆಡಲು ತೊಡಗಿರುತ್ತಾರೆ. ಅವನಿಗೆ ವಿಪರೀತ ಬೇಸರವಾಗಿ ಅವರಿಬ್ಬರನ್ನು ಕಟ್ಟಿಹಾಕಲು ಪ್ರಯತ್ನಿಸುತ್ತನೆ. ಸ್ವಾಮಿಯು ತಪ್ಪಿಸಿಕೊಂಡು ಹೋಗುತ್ತಾನೆ
ಅನಂತನು ಮಂಗಮ್ಮನನ್ನು ಕಟ್ಟಿ ಹಾಕುತ್ತಾನೆ. ನಂತರ ಸ್ವಾಮಿಯ ದರ್ಶನಕ್ಕೆ ಹೋದಾಗ ವಕ್ಷಸ್ಥಳದಲ್ಲಿ ಅಮ್ಮನವರಿಲ್ಲ. ಎಲ್ಲರೂ ಗಾಬರಿಯಾದಾಗ ಸ್ವಾಮಿಯೆ ಹೇಳುತ್ತಾನೆ ಅನಂತಾಚಾರ್ಯರ ತೋಟದಲ್ಲಿ ಕಟ್ಟಿಹಾಕಿರುವುದಾಗಿ. ಎಲ್ಲರೂ ಅಲ್ಲಿಗೆ ಹೋಗಿ ಅನಂತಾಚಾರ್ಯರು ಕಟ್ಟನ್ನು ಬಿಚ್ಚಿ ಅಮ್ಮನವರನ್ನು ಹೂವಿನ ಬುಟ್ಟಿಯಲ್ಲಿ ಕೂರಿಸಿ ತನ್ನ ಮಗಳನ್ನು ಸ್ವೀಕರಿಸಬೇಕೆಂದು ಸ್ವಾಮಿಗೆ ಅರ್ಪಿಸುತ್ತಾನೆ. ಅಮ್ಮನವರು ತಮ್ಮ ಸ್ಥಾನ ತಲುಪುತ್ತಾರೆ.
ಈ ರೀತಿ ಅಪಾರ ಭಕ್ತಿ ಉಳ್ಳ ಅನಂತಾಚಾರ್ಯರ ಕಥೆಯನ್ನು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ ಶ್ರೀ ಸ್ವಾಮೀಜಿ ಯವರು. ಕಡೆ ಶ್ರಾವಣ ಶನಿವಾರ, ಸ್ವಾಮಿಗೆ ವಿಶೇಷ ದಿನ, ಎಲ್ಲರೂ ತಪ್ಪದೇ ನೋಡಿ ಶೇರ್ ಮಾಡಿ.

( ಸಶೇಷ )

  • ಭಾಲರ
    ಬೆಂಗಳೂರು

ಜೈಗುರುದತ್ತ.


Share