ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 51.

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 51
ಭಾವಾಜಿಯವರ ಕಥೆ ಆರಂಭವಾಗಿತ್ತು ನಿನ್ನೆ, ಇಂದು ಅದನ್ನು ಪೂರ್ಣಗೊಳಿಸೋಣ.
ಭಾವಾಜಿಯವರನ್ನು ಕೂಡಿಹಾಕಿದ್ದು ತಿಳಿದುಕೊಂಡೆವು. ನಂತರ ರಾಜನು ಅವನನ್ನು ಕೊಟ್ಟಿಗೆಯಲ್ಲಿ ಕೂಡಿಹಾಕಿ ಒಂದು ರಾಶಿ ಕಬ್ಬಿಣದ ಕಬ್ಬಿನ ಜಿಲ್ಲೆಯನ್ನು ಕೊಟ್ಟು ಬೆಳಕಾಗುವುದರೊಳಗೆ ಎಲ್ಲವನ್ನು ತಿನ್ನಬೇಕು, ಇಲ್ಲದಿದ್ದರೆ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿ ಹೋಗುತ್ತಾನೆ. ಸ್ವಾಮಿ ಎಂದಿನಂತೆ ರಾತ್ರಿ ಪಗಡೆಯಾಡಲು ಬರುತ್ತಾನೆ. ಈ ರಾಶಿ ಏನೆಂದು ಕೇಳಲು ಭಾವಾಜಿ ಸ್ವಲ್ಪವೂ ಬೇಜಾರಿಸಿಕೊಳ್ಳದೆ ಇರುವ ವಿಷಯವನ್ನು ಹೇಳಿ ಈಗ ಆಟವಾಡುವುದಾಗಿಯೂ ನಂತರ ತಿನ್ನಲು ಪ್ರಯತ್ನಿಸಿ ಇಲ್ಲದಿದ್ದರೆ ಶಿಕ್ಷೆ ಅನುಭವಿಸುವುದಾಗಿ ಹೇಳುತ್ತಾನೆ. ಸ್ವಾಮಿಯು ಅವನ ಮುಗ್ಧ ಭಕ್ತಿಗೆ ಕರಗಿ ಗಜರಾಜನನ್ನು ಕರೆದು ಅದೆಲ್ಲವನ್ನು ಕಾಲಿ ಮಾಡಲು ಹೇಳಿ ಎಂದಿನಂತೆ ಆಟವಾಡಿ ಬೆಳಿಗ್ಗೆ ಹೊರಟುಹೋಗುತ್ತಾನೆ. ರಾಡನು ಬಂದು ನೋಡಿ ವಿಷಯವೆಲ್ಲಾ ತಿಳಿದು ಭಾವಾಜಿಯಲ್ಲಿ ಕ್ಷಮೆಯಾಚಿಸಿ ಅವನಿಗೆ ಸಾಕಾಷ್ಟು ಐಶ್ವರ್ಯ ನೀಡಿ ಕಳಿಸುತ್ತಾನೆ. ಹಾತಿರಾಂ ಭಾವಾಜಿ ಸ್ವಾಮಿಯೊಂದಿಗೆ ಹೀಗೆ ಇದ್ದು ಒಮ್ಮೆ ಜೀವಂತ ಸಮಾಧಿ ಹೊಂದಿ ಸ್ವಾಮಿಯಲ್ಲಿ ಐಕ್ಯವಾಗುತ್ತಾನೆ.
ಶ್ರೀನಿವಾಸನ ನಾಮ, ರೂಪ, ಮಹಿಮೆಗಳು ಅಪಾರ.ಶ್ರೀನಿವಾಸನನ್ನು ಭಜಿಸುತ್ತಿದ್ದರೆ ಮುಕ್ಕೋಟಿ ದೇವತೆಗಳು ಸಂತೋಷಗೊಳ್ಳುತ್ತಾರೆ. ಅಂತಹ ಸ್ವಾಮಿಯನ್ನು ಯಾವ ಯಾವ ನಾಮದಿಂದ ಕರೆದರೆ ಏನೇನು ಫಲ ಸಿಗುತ್ತದೆ ಎಂಬುದನ್ನು ಶ್ರೀ ಸ್ವಾಮೀಜಿ ಯವರು ಬಹಳ ಸುಂದರವಾಗಿ ವಿವರಿಸಿದ್ದಾರೆ.
ಔಷಧಿ, ನೀರು ಸೇವಿಸುವಾಗ ಅಚ್ಯುತ ಎಂದು ಸ್ಮರಿಸಬೇಕು.
ವಿದ್ಯಾಭ್ಯಾಸ ಚೆನ್ನಾಗಿ ಬರಲು ಪುರುಷೋತ್ತಮ ನಾಮ ಭಜಿಸಬೇಕು.
ನೇತ್ರಭಾದೆ ಹೋಗಲಾಡಿಸಲು, ಅಂತರಂಗ ಶುದ್ದಿಗಾಗಿ ಪುಂಡರೀಕಾಕ್ಷ ಎಂದು ಜಪಿಸಬೇಕು.
ನಿದ್ದೆಯಿಂದ ಎದ್ದಾಗ ವಿಷ್ಣು ವನ್ನು ಸ್ಮರಿಸಬೇಕು.
ಕತ್ತಲೆಯಲ್ಲಿ ನಾರಸಿಂಹನೆಂದು ಸ್ಮರಿಸಬೇಕು.
ಕಲಿದೋಶ ನಿವಾರಣೆಗಾಗಿ ಗೋವಿಂದಾಯ ನಮಃ ಎನ್ನಬೇಕು.
ನಿದ್ದೆ ಬಾರದಿದ್ದಾಗ ಮಾಧವಾಯ ನಮಃ ಎಂದರೆ ಒಳ್ಳೆಯ ನಿದ್ದೆ ಬರುತ್ತದೆ.
ಊಟ ಮಾಡುವಾಗ ಮಧುಸೂದನಾಯ ನಮಃ ಎನ್ನಬೇಕು. ಮಂಗಳ ಕಾರ್ಯಗಳು ಸುಸೂತ್ರವಾಗಿ ನಡೆಯಲು ವಿಷ್ಣವೇ ನಮಃ ಎನ್ನಬೇಕು.
ಹಸು ಹೇಗೆ ಕರುವನ್ನು ಪ್ರೀತಿಸುತ್ತದೋ ಹಾಗೆ ಗೋವಿಂದನು ತನ್ನ ಭಕ್ತರನ್ನು ಪ್ರೀತಿಸಿ ಉದ್ಧರಿಸುತ್ತಾನೆ.
ಹಾಗೆ ನಮ್ಮ ಸದ್ಗುರುಗಳು ಶ್ರೀ ಸ್ವಾಮೀಜಿ ಯವರು ನಮ್ಮನ್ನು ಉದ್ಧರಿಸಲು ಇದೆಲ್ಲವನ್ನು ತಿಳಿಯಾಗಿ ತಿಳಿಸಿದ್ದಾರೆ ಇಂದಿನ ಸಂಚಿಕೆಯಲ್ಲಿ. ಇಂತಹ ವಿಷಯವನ್ನು ನೋಡದೇ ಇರಲು ಸಾಧ್ಯವಿಲ್ಲ. ಮತ್ತೆ ನಮಗೆ ಒಳ್ಳೆಯದಾದಮೇಲೆ ನಮ್ಮ ಬಂಧು ಬಾಂಧವರಿಗೂ ಒಳ್ಳೆಯದಾಗಲೇ ಬೇಕಲ್ಲವೆ. ಮತ್ತೆ ತಡವೇಕೆ ನೀವು ನೋಡಿದ ತಕ್ಷಣ ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share