ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 52

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 52
ಸ್ವಾಮಿಯ ವಿವಿಧ ನಾಮಗಳನ್ನು ಯಾವ ಯಾವ ಸಮಯದಲ್ಲಿ ಜಪಿಸಬೇಕು ಎಂಬುದನ್ನು ನಿನ್ನೆ ತಿಳಿದುಕೊಂಡೆವು.
ಇಂದು ದತ್ತ ಪೀಠದ ಶ್ರೀ ದತ್ತ ವೇಂಕಟೇಶ್ವರ ಚರಿತ್ರೆಯನ್ನು ಶ್ರೀ ಸ್ವಾಮೀಜಿ ಯವರ ಮುಖಾರವಿಂದದಲ್ಲಿ ಕೇಳುವ ಭಾಗ್ಯ ನಮ್ಮದಾಗಿದೆ.
23.6.1999 ಮೈಸೂರು ದತ್ತ ಪೀಠದಲ್ಲಿ ಶ್ರೀ ದತ್ತ ವೇಂಕಟೇಶ್ವರ ಆನಂದ ನಿಲಯದ ಪ್ರತಿಷ್ಠಾಪನೆ ಆಯಿತು ಎಂದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದರ ಹಿಂದಿರುವ ಕಥೆಯನ್ನು ಕೇಳೋಣ. ಶ್ರೀ ಸ್ವಾಮೀಜಿ ಯವರು ಬೆಳಗಿನ ಜಾವ ಕಿಟಕಿಯಲ್ಲಿ ನಿಂತು ನೋಡಿದಾಗ ಆಕಾಶ ದಿಂದ ಶಂಖ, ಚಕ್ರ, ಜಿಂಕೆಯನ್ನು ಎತ್ತಿಕೊಂಡಿರುವ ಶಿವ, ಗೋದಾಕನ್ಯೆಯರಂತೆ ಅಲಂಕರಿಸಿಕೊಂಡಿರುವ ದೇವ ಕನ್ಯೆಯರು ಗಾಯನ ಮಾಡುತ್ತ 200, 300 ವರ್ಷ ಪುರಾತನ ಸಪ್ತರ್ಷಿ ಸರೋವರದ ಪೂರ್ವ ಭಾಗಕ್ಕೆ ಇಳಿಯುತ್ತಿರುವ ದೃಶ್ಯದ ದರ್ಶನವಾಯಿತು. ಇದು ಪ್ರತಿನಿತ್ಯವು ಮುಂದುವರೆಯಿತು.
ಶ್ರೀ ತಿರುವೆಂಕಟ ಮೊದಲಿಯಾರ್ ರವರು ಸ್ವಾಮೀಜಿ ಬಳಿ ಬಂದು ತಮ್ಮ ಒಂದು ಕೋರಿಕೆ ಇಟ್ಟರು. ಆಶ್ರಮದ ಪಕ್ಕದ ಜಾಗವನ್ನು ಸ್ವಾಮೀಜಿ ಯವರಿಗೆ ಅರ್ಪಿಸಿ ಅಲ್ಲಿ ಚಿಕ್ಕದೊಂದು ವೇಂಕಟೇಶ್ವರ ಆಲಯ ನಿರ್ಮಿಸಬೇಕೆಂದು ಕೋರಿದರು. ಆದರೆ ಇದಾದ ಸ್ವಲ್ಪ ದಿನದಲ್ಲಿ ಸರ್ಕಾರ ಇದು ತನ್ನ ಜಾಗವೆಂದಿತು.
18 ವರ್ಷಗಳ ನಂತರ 8.1.92ರಂದು ನ್ಯೂಜಿವೀಡು ದತ್ತಾತ್ರೇಯ ದೇವಸ್ಥಾನ ಪ್ರತಿಷ್ಠಾಪನೆ ಜರುಗುತ್ತಿದ್ದಾಗ ವಿಜಯಕಾಂತಿ ಎಂಬ ಭಕ್ತರೊಬ್ಬರು ಓಡಿ ಬಂದು ತಮಗೆ ಮಚಲಿಪಚ್ಚಣದ ಸಮುದ್ರದಲ್ಲಿ ಸುಮಾರು ಒಂದೂವರೆ ಅಡಿ ಎತ್ತರದ ವೆಂಕಟೇಶ್ವರ ವಿಗ್ರಹ ದೊರೆತಿದೆಯೆಂದು ಸ್ವಾಮೀಜಿ ಯವರಿಗೆ ಅರ್ಪಿಸಿದರು.
ಸ್ವಾಮೀಜಿಯವರು 92 ರಲ್ಲಿ ತಿರುಮಲದಲ್ಲಿ ದರ್ಶನ ಮಾಡಿಬಂದ ಮೇಲೆ ಜಾಗವು ಆಶ್ರಮದ್ದಾಯಿತು. ನಂತರ ಸ್ವಾಮೀಜಿ ಯವರು ಆಲಯ ನಿರ್ಮಿಸಲು ನಿರ್ಧರಿಸಿದರು. ನವಮಾಯ ಧಾನ್ಯ ಬೆಳೆದು ವಂತರ ಆ ಸ್ಥಳದಲ್ಲಿ ಆಲಯ ನಿರ್ಮಾಣ ಆರಂಭವಾಯಿತು. ಗರ್ಭ ಗುಡಿಯಲ್ಲಿ ಮಾರ್ಬಲ್ ಅಳವಡಿಸುವಾಗ ಸ್ವಾಮಿಯ ಹಿಂಬಾಗದಲ್ಲಿ ಶಂಖ ಚಕ್ರ ಮೂಡಿತು.
ಆಗಮ ಶಾಸ್ತ್ರದ ಪ್ರಕಾರ ಪ್ರತಿಷ್ಠಾಪನಾ ಕಾರ್ಯಕ್ರಮ ಆರಂಭವಾಯಿತು. ತಮಿಳು ನಾಡಿನಿಂದ ಒಂದು, ಆಂದ್ರ ಪ್ರದೇಶದಿಂದ ಒಂದು ಮೂರ್ತಿ ಬಂದಿತ್ತು. ಎರಡು ಮೂರ್ತಿಗಳಿಗೂ ಶಾಸ್ತ್ರೋಕ್ತವಾಗಿ ತಯಾರಿ ನಡೆಯಿತು. ಯಾವ ಮೂರ್ತಿ ಸ್ಥಾಪಿಸಬೇಕೆಂದು ಬೆಳಿಗ್ಗೆ ನಿರ್ಧರಿಸುವುದಾಗಿ ತಿಳಿಸಿದರು. ಬೆಳಿಗ್ಗೆ ಸ್ವಾಮೀಜಿ ಯವರು ಬಂದು ಮೂರ್ತಿಯ ಬಳಿ ಬಂದು ನಿಂತಾಗ ಅಗಾಧವಾದ ಗಾಳಿ ಬಂದು ಒಂದು ಮೂರ್ತಿಗೆ ಮುಚ್ಚಿದ್ದ ವಸ್ತ್ರ ಮಾತ್ರ ತೆರೆಯಿತು. ಸ್ವಾಮೀಜಿ ಯವರು ಅದೇ ಮೂರ್ತಿ ಸ್ಥಾಪಿಸಲು ನಿರ್ಧರಿಸಿದರು.
23-6-1999ರಂದು ಪರ್ವ ದಿನದಂದು ಬೆಳಿಗ್ಗೆ 10-15 ಬುಧವಾರದಂದು ಯಂತ್ರ ಪ್ರತಿಷಠಾಪನೆ ನೆರವೇರಿತು. ಆ ಸಮಯದಲ್ಲಿ ಸೂರ್ಯನ ಸುತ್ತ ಸುದರ್ಶನ ಚಕ್ರವು ಮೂಡಿದ್ದನ್ನು ಅಲ್ಲಿ ನೆರೆದಿದ್ದ ಭಕ್ತರೆಲ್ಲರೂ ನೋಡಿ ಮೂಕವಿಸ್ಮತರಾದರು.
ಇದು ದತ್ತ ವೇಂಕಟೇಶ್ವರನ ಚರಿತ್ರೆ.
ಸಮಸ್ತ ಲೋಕಕ್ಕು ಶಾಂತಿ ಉಂಟಾಗಲಿ.
ಸತ್ಯಕ್ಕೆ ಜಯವಾಗಲಿ.
ಧರ್ಮಕ್ಕೆ ಜಯವಾಗಲಿ.
ಎಂದು ಶಾಂತಿ ಮಂತ್ರ ಪಠಿಸುತ್ತ ಶ್ರೀ ವೆಂಕಟೇಶ್ವರ ಕಲ್ಯಾಣ ಸಂಚಿಕೆಯನ್ನು ಮುಕ್ತಾಯಗೊಳಿಸಿದರು ಶ್ರೀ ಸ್ವಾಮೀಜಿ ಯವರು.
ಶ್ರೀ ದತ್ತ ವೇಂಕಟೇಶ್ವರ ಗೋವಿಂದ
ಗೋವಿಂದ ಗೋವಿಂದ ಗೋವಿಂದ.

(ಮುಗಿಯಿತು.)

(ವಿ.ಸೂ.)ವೀಕ್ಷಕರು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸಿನಲ್ಲಿ ಮುಕ್ತವಾಗಿ ಹಂಚಿಕೊಳ್ಳಲು ಬಹುದು ಅವಕಾಶ ನೀಡಲಾಗಿದೆ.

  • ಭಾಲರಾ
    ಬೆಂಗಳೂರು.

ಜೈಗುರುದತ್ತ.


Share