ಮೈಸೂರು ಪತ್ರಿಕೆ, ಆಧ್ಯಾತ್ಮಿಕ ಅಂಗಳ, ಗುರು ಗೀತಾ ಭಾಗ-10

808
Share

ಶ್ರೀ ಗುರು ಗೀತ – ಭಾಗ 10
ಹಿಂದಿನ ಸಂಚಿಕೆಯ ಕಥೆಯನ್ನು ಮುಂದುವರೆಸಿ ಕೃಷ್ಣ ಸುಧಾಮರ ಕಥೆಯನ್ನು ಸಂಪೂರ್ಣ ಗೊಳಿಸಿ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಬೇಕೆಬೇಕು, ಶ್ರೀ ಕೃಷ್ಣನೂ ಇದಕ್ಕೆ ಹೊರತಾಗಿಲ್ಲ ಎಂಬುದನ್ನು ಸ್ವಾಮೀಜಿ ಯವರು ತಿಳಿಸಿರುವರು.
ಇಲ್ಲಿಯವರೆಗೂ ಗುರುವು ತ್ರಿಗುಣಾತ್ಮಕ ಎಂಬುದನ್ನು ತಿಳಿದುಕೊಂಡಿದ್ದೇವೆ. ಗುರು ಮಾರ್ಗದರ್ಶನ ವಿಲ್ಲದೆ ಕಲಿತ ವೇದ, ಶಾಸ್ತ್ರ, ಪುರಾಣ, ಇತಿಹಾಸ, ಶೈವಾಗಮ, ಶಾಕ್ತಾಗಮ ಮುಂತಾದ ವಿದ್ಯೆಗಳೆಲ್ಲ ಸರಿಯಾಗಿ ಅರ್ಥವಾಗದೆ ಕಷ್ಟದಲ್ಲಿ ಬೀಳುತ್ತಿದ್ದಾರೆ.
ಗುರುತತ್ವ ತಿಳಿಯದೆ, ಗುರುಭಕ್ತಿಯಿಲ್ಲದೆ ಮಾಡುವ ಸಾಧನೆಗಳು ಅಪ್ರಯೋಜಕ. ವಿಜ್ಞಾನ ಇತರ ವಿದ್ಯೆಗಳಲ್ಲೆಲ್ಲಾ ನಮ್ಮ ಕಣ್ಣು ಮನಸ್ಸಿಗೆ ಹೊರಪ್ರಪಂಚದ ಅರಿವು ಉಂಟುಮಾಡುತ್ತದೆಯೆ ಹೊರತು ನಿನ್ನೊಳಗಿನ ಅಂತರಾತ್ಮ ಕುರಿತು ಜ್ಞಾನವನ್ನುಂಟು ಮಾಡುವುದಿಲ್ಲ. ಗುರುತತ್ವದ ದೃಷ್ಟಿ ಇಲ್ಲದಿದ್ದರೆ ಎಲ್ಲಾ ವಿದ್ಯೆಗಳಪ ಅಜ್ಞಾನದಲ್ಲಿ ಮುಳುಗಿಹೋಗುತ್ತದೆ. ನಿನ್ನನ್ನು ನೀನು ಅರಿತುಕೊಳ್ಳುವುದೇ ಗುರುತತ್ವ.
ಗುರು ಆರಾಧನೆಯ ಪ್ರಯೋಜನವೇನು, ಅದನ್ನು ಹೇಗೆ ಮಾಡಬೇಕು? ಈ ಎಲ್ಲಾ ವಿಷಯಗಳನ್ನು ಶ್ರೀ ಆಂಜನೇಯ ಸ್ವಾಮಿ ಕಥೆಯೊಂದಿಗೆ ಅತಿ ಸರಳವಾಗಿ ಶ್ರೀ ಸ್ವಾಮೀಜಿ ಯವರು ಈ ಸಂಚಿಕೆಯಲ್ಲಿ ಉಪದೇಶಿಸಿದ್ದಾರೆ.
ಜೈಗುರುದತ್ತ


Share