ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ. (ಪುಟ 6)

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಅಧ್ಯಾಯ – 1

ಪುಟ – 6

ದತ್ತ ಪುರಾಣದ ಪ್ರಕಾರ ಶ್ರೀ ದತ್ತಾತ್ರೇಯರೇ ಧರ್ಮ ಶಾಸ್ತ್ರರಾಗಿ ಅವತರಿಸಿದಾಗ ವ್ಯಾಘ್ರರೂಪವನ್ನು ಧರಿಸಿದ ದೇವೇಂದ್ರನ ಮೇಲೆ ಕುಳಿತುಕೊಂಡು ರಾಜಧಾನಿಗೆ ಬಂದರು. ಶ್ರೀವಲ್ಲಭರು ಸಾಕ್ಷಾತ್ ಆಯ್ಯಪ್ಪ ಸ್ವಾಮಿಗಳೇ ಎಂದು ಕೆಲವರು ಭವಿಸಿದರು. ಸಿಂಹವಾಹನವೂ ವ್ಯಾಘ್ರವಾಹನವೂ ಎರಡೂ ಒಂದೇ ಎಂದು ಆನೇಕರು ಸಿಂಹವಾಹಿನಿಯಾದ ಅಂಬೆಯು ವ್ಯಾಘ್ರವಾಹಿನಿಗಳಾದ ಶ್ರೀವಾದವಲ್ಲಭರೂ ಅಭಿನ್ನಸ್ವರೂಪರೆಂದೂ ಭಾವಿಸುತ್ತಾರೆ.
ಶ್ರೀಪಾದವಲ್ಲಭರು ಕುರುವಪುರವನ್ನು ಸೇರಿ ವ್ಯಾಘ್ರದಿಂದ ಕೆಳಗಿಳಿಯುತ್ತಲೆ, ವ್ಯಾಘ್ರವು ಪಕ್ಕದಲ್ಲಿ ಕುಳಿತುಕೊಂಡಿತು. ಅದರೊಳಗಿನಿಂದ ದಿವ್ಯ ಕಾಂತಿಯುಕ್ತನಾದ ಒಬ್ಬ ಮಹಾಪುರುಷನು ಹೊರಬಂದನು. ಆತನು ಶ್ರೀಪಾದವಲ್ಲಭರನ್ನು ತನ್ನ ಪೂರ್ವಜನ್ಮರೂಪವಾದ ವ್ಯಾಘ್ರದ ಚರ್ಮವನ್ನು ಅವರ ಆಸನವಾಗಿ ಉಪಯೋಗಿಸಬೇಕೆಂದು ಪ್ರಾರ್ಥಿಸಿಕೊಂಡನು. ಶ್ರೀಪಾದವಲ್ಲಭರು ಅದಕ್ಕೆ ಒಪ್ಪಿಕೊಂಡರು. ಪ್ರೇಮಮೂರ್ತಿಗಳಾದ ಶ್ರೀಪಾದವಲ್ಲಭರು, ‘ ‘ ಮಗೂ | ವ್ಯಾಘ್ರೇಶ್ವರಾ ! ನೀನು ಒಂದಾನೊಂದು ಜನ್ಮದಲ್ಲಿ ಮಹಾಬಲಿಷ್ಠನಾದ ಪೈಲ್ವಾನನಾಗಿದ್ದೆ. ಆ ಜನ್ಮದಲ್ಲಿ ಹುಲಿಗಳೊಂದಿಗೆ ಹೋರಾಡುತ್ತಾ ಅವುಗಳನ್ನು ಕ್ರೂರ ಹಿಂಸೆಗೆ ಗುರಿಪಡಿಸುತ್ತಾ, ಅವುಗಳನ್ನು ಬಂಧಿಸಿ ಆಹಾರವನ್ನು ಕೊಡದೆ ಜನಗಳ ವಿನೋದಾರ್ಥವಾಗಿ ಪ್ರದರ್ಶನ ಮಾಡುತ್ತಾ, ಹೀಗೆ ಅನೇಕ ರೀತಿಯಿಂದ ಕ್ರೂರವಾಗಿ ಹಿಂಸಿಸಿದ್ದೀಯೆ. ನೀನು ಮಾನವ ಜನ್ಮವನ್ನು ಎತ್ತಿದರೂ ಸಹ ಹುಲಿಗಳನ್ನು ಅತಿಕ್ರೂರವಾಗಿ ಹಿಂಸೆ ಪಡಿಸಿದುದರಿಂದ ಕಾಲಕರ್ಮಕ್ಕೊಳಪಟ್ಟು, ಅನೇಕ ಮೃಗ ಜನ್ಮಗಳನ್ನು ಹೊಂದಬೇಕಾಗುತ್ತಿತ್ತು, ಆದರೆ ನನ್ನ ಅನುಗ್ರಹದಿಂದ ಈಗ ನೀನು ಧರಿಸಿರುವ ಒಂದೇ ಒಂದು ವ್ಯಾಘ್ರರೂಪ ಜನ್ಮದಲ್ಲಿ ನಿನ್ನ ಎಲ್ಲ ಮೃಗಜನ್ಮಗಳ ದುಷ್ಕರ್ಮಗಳನ್ನು ನಾಶಗೊಳಿಸಿದ್ದೇನೆ. ನೀನು ಬಹಳ ಕಾಲ ವ್ಯಾಘ್ರರೂಪವನ್ನು ಧರಿಸಿದ್ದುದರಿಂದ ಇನ್ನು ಮುಂದೆ ನೀನು ಬಯಸಿದಾಗಲೆಲ್ಲಾ ವ್ಯಾಘ್ರರೂಪವನ್ನು ಹೊಂದಬಲ್ಲ ಶಕ್ತಿಯನ್ನು ಅನುಗ್ರಹಿಸಿದ್ದೇನೆ. ಹಿಮಾಲಯದಲ್ಲಿ ಅನೇಕ ವರ್ಷಗಳಿಂದ ನನಗೊಸ್ಕರ ತಪಸ್ಸನ್ನು ಆಚರಿಸುತ್ತಿರುವ ಅನೇಕ ಸಿದ್ಧಪುರುಷರ ದರ್ಶನ ಮತ್ತು ಆಶೀರ್ವಾದಗಳು ನಿನಗೆ ಲಭಿಸುತ್ತವೆ. ಯೋಗ ಮಾರ್ಗದಲ್ಲಿ ನೀನು ಅತ್ಯುನ್ನತ ಪದವಿಯನ್ನು ಹೊಂದಿ ಪ್ರಕಾಶಿಸುತ್ತೀಯೆ” ಎಂದು ಆಶೀರ್ವದಿಸಿದರು.
ಶಂಕರಭಟ್ಟ ! ಈ ಮೊದಲು ನೀನು ನೋಡಿದ ವ್ಯಾಘ್ರವು ಸಾಕ್ಷಾತ್ ಆ ವ್ಯಾಘ್ರೇಶ್ವರನೇ, ಆತನು ಹಿಮಾಲಯದಲ್ಲಿರುತ್ತಾನೆ. ಮಹಾಯೋಗಿಗಳು ಜನಸಂಪರ್ಕವನ್ನು ಬಯಸುವುದಿಲ್ಲ. ಅಂತಹವರಿಗೆ ಸಾಮಾನ್ಯ ಜನಗಳಿಂದ ತೊಂದರೆಯಾಗದಂತೆ ಈತನು ವ್ಯಾಪ್ರರೂಪದಲ್ಲಿ ಅವರ ಕಾವಲನ್ನು ಕಾಯುತ್ತಿರುತ್ತಾನೆ. ಮಹಾಯೋಗಿಗಳು ಪರಸ್ಪರವಾಗಿ ಸಂಭಾಷಿಸಬೇಕೆನಿಸಿದಾಗ ಭಾವ ಪ್ರಸಾರದ ಮೂಲಕ ಪರಸ್ಪರ ಸಂಪರ್ಕವನ್ನು ಏರ್ಪಡಿಸಿಕೊಳ್ಳುತ್ತಾರೆ. ಅವರು ಇದಕ್ಕಾಗಿ ತಮ್ಮ ಸ್ಥಾನವನ್ನು ಬಿಟ್ಟು ಹೊರಬರಬೇಕಾದ ಅವಶ್ಯಕತೆಯಾಗಲಿ ಅಥವಾ ವಾರ್ತಾದೂತರ ಅವಶ್ಯಕತೆಯಾಗಲೀ ಇರುವುದಿಲ್ಲ. ಆದರೂ ವಿನೊದಕ್ಕೋಸ್ಕರ ಒಂದೊಂದು ಸಲ ವ್ಯಾಘ್ರೇಶ್ವರನ ಮೂಲಕ ವಾರ್ತೆಗಳನ್ನು ಕಳುಹಿಸುತ್ತಾರೆ. ಇದೆಲ್ಲವೂ ಶ್ರೀದತ್ತ ಪ್ರಭುವಿನ ಲೀಲೆ.

//ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ //.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ.

ಚುಟುಕು ಸಪ್ತಶತಿ – 7

ಮಂತ್ರ ವೇದದ ಮುಂದೆ ಮಂತ್ರ ಮಾನವ ಬಂದ,
ಇಡೀ ಜೀವನ ಬರೀ ತಂತ್ರಜ್ಞಾನವೆಂದ.
ಇನ್ನೆಲ್ಲಿ ಬಂದೀತು ಕಂತುಪಿತನ ಧ್ಯಾನ!
ದಯೆ ತೋರು ದಯಾಘನ – ಸಚ್ಚಿದಾನಂದ.
ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share