ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ: ಪುಟ – 8

Share

ಶ್ರೀ ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಅಧ್ಯಾಯ – 2

ಪುಟ – 8

ನಾನು ಮತ್ತೆ ಪಾದಗಳಿಗೆ ನಮಸ್ಕರಿಸಿದೆನು. ಸಿದ್ಧಯೋಗೀಂದ್ರರು ನನ್ನನ್ನು ಪುನಃ ಶಿವಲಿಂಗ ದರ್ಶನವನ್ನು ಮಾಡುವಂತೆ ಹೇಳಿದರು. ನಾನು ಮತ್ತೆ ಅಲ್ಲಿಗೆ ಹೋಗುವ ಹೊತ್ತಿಗೆ ಅಲ್ಲಿ ಬಹು ಸುಂದರವಾದ ಶಿವಾಲಯವನ್ನು ನೋಡಿದೆ. ಆದರೆ, ಅದು ನಾನು ಹಿಂದೆ ನೋಡಿದ ಶಿವಾಲಯವಲ್ಲವೇ ಅಲ್ಲ. ಅಲ್ಲಿ ವಿಚಾರಿಸಲಾಗಿ ಅದು ಶ್ರೀಮೀನಾಕ್ಷಿ ಸುಂದರೇಶ್ವರ ದೇವಾಲಯವೆಂದೂ, ನಾನು ಹೋಗಿರುವ ಸ್ಥಳವು ಮಧುರಾನಗರಿಯೆಂದೂ ತಿಳಿದು ಬಂದಿತು. ನಾನು ದೇವತಾ ಮೂರ್ತಿಗಳ ದರ್ಶನವನ್ನು ಮಾಡಿಕೊಂಡು ಸಿದ್ದಯೋಗಿಂದ್ರರ ಆಶ್ರಮದ ಕಡೆಗೆ ಹೊರಟೆನು. ಆ ಪ್ರದೇಶವೆಲ್ಲವೂ ಜನನಿಬಿಡವಾದ ಪಟ್ಟಣ ಪ್ರದೇಶವಾಗಿ ಕಾಣಿಸಿತು. ಎಷ್ಟು ಹುಡುಕಿದರೂ ಶ್ರೀಯೋಗೀಂದ್ರರ ಆಶ್ರಮವು ಕಾಣಿಸಲೇ ಇಲ್ಲ. ನಾನು ಶ್ರೀಪಾದವಲ್ಲಭರ ದಿವ್ಯನಾಮಸ್ಮರಣೆಯನ್ನು ಮಾಡುತ್ತಾ ನನ್ನ ಮನಸ್ಸಿಗೆ ತೋಚಿದ ದಿಕ್ಕಿಗೆ ಹೊರಟೆನು. ಸೂರ್ಯಾಸ್ತ ಸಮಯವಾಯಿತು , ಕತ್ತಲಾಗತೊಡಗಿತು. ನನ್ನ ಹಿಂದೆ ಕಾಂತಿಬೀರುತ್ತಿರುವ ಬೆಳಕೊಂದು ಬರುತ್ತಿರುವುದನ್ನು ಗಮನಿಸಿದನು. ನಾನು ಹಿಂತಿರುಗಿ ನೋಡಿದಾಗ ಮೂರು ಹೆಡೆಗಳುಳ್ಳ ಒಂದು ಘಟಸರ್ಪವು ನನ್ನ ಹಿಂದೆಯೇ ಬರುತ್ತಿತ್ತು. ಮೂರು ಹೆಡೆಗಳಲ್ಲಿ ಮೂರುಮಣಿಗಳಿದ್ದವು. ಆ ಮಣಿಗಳೇ ನಾನು ಕಂಡ ಬೆಳಕನ್ನು ಬೀರುತ್ತಿದ್ದವು. ನಾನು ಭಯವಿಹ್ವಲನಾದೆನು. ನಾನು ನಿಂತರೆ ಸರ್ಪವೂ ನಿಲ್ಲುತ್ತಿತ್ತು. ನನ್ನ ಹೃದಯಾಂತರಾಳದಿಂದ ಅಪ್ರಯತ್ನವಾಗಿ ಶ್ರೀಪಾದಶ್ರೀವಲ್ಲಭರ ದಿವ್ಯನಾಮವು ಹೊರಹೊಮ್ಮುತ್ತಿತ್ತು. ಅದೇರೀತಿ ಅಪ್ರಯತ್ನವಾಗಿಯೇ ನನ್ನ ಬಾಯಿಂದ ಅವರ ದಿವ್ಯನಾಮವು ಉಚ್ಚರಿಸಲ್ಪಡುತ್ತಿತ್ತು. ನಾನು ಹೇಗೋ ಶ್ರೀಸಿದ್ದಯೋಗೀಂದ್ರರ ಆಶ್ರಮವನ್ನು ಸೇರಿದನು. ತಕ್ಷಣವೇ ಆ ಸರ್ಪವೂ ಆ ಕಾಂತಿಯೂ ಅದೃಶ್ಯವಾದವು.
ಶ್ರೀಸಿದ್ಧಯೋಗೀಂದ್ರರು ನನ್ನನ್ನು ಅತ್ಯಂತ ಕರುಣೆಯಿಂದ ಆದರಿಸಿದರು. ಹುರಿದಿದ್ದ ಬಿಸಿ ಬಿಸಿ ಕಡಲೇಕಾಯಿ ಬೀಜಗಳನ್ನು ಬಾಳೆ ಎಲೆಯಲ್ಲಿ ನನಗೆ ಪ್ರಸಾದವನ್ನಾಗಿ ಕೊಟ್ಟರು. ನಾನು ಹೊಟ್ಟೆ ತುಂಬಾ ಅದನ್ನು ತಿಂದನು. ನಾನು ಪ್ರಸಾದವನ್ನು ಸ್ವೀಕರಿಸಿದರೂ ಎದೆ ಹೊಡೆತವು ಕಡಿಮೆಯಾಗಲಿಲ್ಲ. ಸಿದ್ಧಯೋಗೀಂದ್ರರು ಅತ್ಯಂತ ಪ್ರೇಮದಿಂದ ಬಲ ಎದೆಯನ್ನು ಸವರಿದರು. ಆಮೇಲೆ ಎಡಭಾಗವನ್ನು ಕೂಡ ಸವರಿದರು. ಆನಂತರ ಅವರು ತಮ್ಮ ದಿವ್ಯಹಸ್ತದಿಂದ ನನ್ನ ಶಿರಸ್ಸನ್ನು ಸ್ಪರ್ಶಿಸಿದರು. ನನ್ನ ಎದೆ ಬಡಿತವು ಕಡಿಮೆಯಾಗುತ್ತಿರುವುದನ್ನು ಗಮನಿಸಿದೆನು. ನನ್ನ ಶ್ವಾಸಕೋಶಗಳಿಂದ ದುಷ್ಟ ವಾಯುಗಳು ಹೊರಹೋಗುತ್ತಿರುವ ಅನುಭವವು ನನಗೆ ಉಂಟಾಯಿತು. ನನ್ನ ಶರೀರವೆಲ್ಲಾ ಕಾವೇರಿ ನಾನು ಮತ್ತಿನಲ್ಲಿರುವಂತೆ ಇದ್ದೆನು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 9

ಜೀವ ಇದ್ದವನ ಸೃಷ್ಟಿ ಜೀವವಿಲ್ಲದ ಬೊಂಬೆ.
ಜೀವಜೀವನ ಸೃಷ್ಟಿ ರಾಜೀವ ಸೃಷ್ಟಿ.
ಮೋಜಿಗೆ ಮೋಜಾಯಿತಿದು ಎಂಥ ಸೋಜಿಗ ದೃಷ್ಟಿ !
ಜಾದೂಗಾರ ನೀನೆ ಪ್ರಭೂ – ಸಚ್ಚಿದಾನಂದ.

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share