ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-11

892
Share

ಶ್ರೀ ಗುರು ಗೀತ – ಭಾಗ 11
ಹಿಂದಿನ ಶ್ಲೋಕದಲ್ಲಿರುವುದನ್ನು ಮತ್ತಷ್ಟು ವಿವರವಾಗಿ ತಿಳಿದುಕೊಳ್ಳೋಣ. ಈ ಮಾಯೆಯೆ ಜಗತ್ತಾಗಿ ಮಾರ್ಪಾಟಾಗಿದೆ. ಜಗತ್ತೆ ಮಾಯೆ. ನಾವು ಮಾಯೆಯಿಂದ ಹೊರ ಬರಬೇಕು. ಮಾಯೆ ಎಂಬ ಅವಿದ್ಯೆಯಿಂದ ಬೇರ್ಪಡಿಸಲು ಸದ್ಗುರು ಒಬ್ಬರಿಗೆ ಸಾಧ್ಯ.. ಆಧ್ಯಾತ್ಮಿಕ ದಲ್ಲಿ ತೊಡಗಿಕೊಂಡಾಗ ಅಂಧಕಾರ ಹೆಚ್ಚಾಗುತ್ತಿರುವಂತೆ ಭಾಸವಾಗುವುದು, ಇದಕ್ಕೆ ಕಾರಣ ಮನಸ್ಸನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳದಿರುವುದು. ಇದೇ ಭ್ರಮೆ, ಕತ್ತಲು. ಇದನ್ನು ಗುರು ಎಂಬ ದೀಪದಿಂದ ಮಾತ್ರ ನಿವಾರಿಸಲು ಸಾಧ್ಯ.
ಯಾರ ಪಾದದ್ವಯವು ಶೀತೋಷ್ಣ ಸುಖ ದುಃಖಗಳಿಂದ ದೂರವಾಗುವುದೋ ಅವರೇ ಗುರುವು. ವೈರಾಗ್ಯದಿಂದ ಮೇಹ ಉಂಟಾಗುತ್ತದೆ, ಮೋಹದಿಂದ ತಾಪ ಉಂಟಾಗುತ್ತದೆ. ಈಎಲ್ಲಾ ಸಂಸಾರ ಸಾಗರದಿಂದ ದಾಟಿಸಲು ಗುರುವಿಗೆ ಮಾತ್ರ ಸಾಧ್ಯ.
ಗುರುಪಾದ ಸೇವೆ ಪರಮೋಪಾಯ. ಇದರಿಂದ ದೇಹವು ದೇವಾಲಯವಾಗುತ್ತದೆ.
ಗುರುವಿನ ಪಾದೋದಕವನ್ನು ಸೇವಿಸುವುದರಿಂದ ಸಕಲ ತೀರ್ಥಗಳನ್ನು ಸೇವಿಸಿದ ಪುಣ್ಯ ಲಭ್ಯವಾಗುತ್ತದೆ. ಗುರು ಪಾದೇದಕದಿಂದ ಪಾಪವೆಂಬ ಕೆಸರು ಇಂಗುತ್ತದೆ. ಗುರು ಪಾದೋದಕದಿಂಗ ಪರಿಶುದ್ಧ ರಾಗುತ್ತೇವೆ, ಜೀವನ್ಮುಕ್ತಿ ದೊರಕುತ್ತದೆ. ಇವೆಲ್ಲವನ್ನು ವಿವರವಾಗಿ ತಿಳಿದುಕೊಳ್ಳಲು ಇಂದಿನ ಸಂಚಿಕೆಯನ್ನು ತಪ್ಪದೇ ನೋಡೋಣ. ಸದ್ಗುರು ಉಪದೇಶ ಪಡೆಯೋಣ.
ಜೈಗುರುದತ್ತ


Share