ಮೈಸೂರು ಪತ್ರಿಕೆ, ಆಧ್ಯಾತ್ಮಿಕ ಅ೦ಗಳ, ಗುರು ಗೀತಾ, ಭಾಗ-12

ಶ್ರೀ ರಾಮ ಆದರ್ಶ ಪುರುಷ. ಅವನು ಹೇಗೆ ಗುರು ಸೇವೆ ಮಾಡಿದನೋ ಗುರುವು ಶಿಷ್ಯನಿಗೆ ಏನು ಮಾಡಿದರು ಎಂಬುದನ್ನು ರಾಮನು ಅರಿತ್ತಿದ್ದನು. ವಿಶ್ವಾಮಿತ್ರ ರಿಗೆ ಗೊತ್ತಿರುವಷ್ಟು ವಿದ್ಯೆ ಬೇರೆ ಯಾರಿಗೂ ಗೊತ್ತಿಲ್ಲ. ರಾಮ ಲಕ್ಷ್ಮಣರು ಅಪಾರವಾಗಿ ಗುರುಸೇವೆ ಮಾಡಿದರು. ಅವರಿಬ್ಬರೂ ಎಂದೂ ವಿಶ್ವಾಮಿತ್ರ ರ ಹಿಂದೆಯೇ ನಡೆಯುತ್ತಿದ್ದರು. ಎಂದು ಗುರುಗಳ ಮುಂದೆ ಹೆಜ್ಜೆ ಹಾಕಿದವರಲ್ಲ. ಅವರೀರ್ವರು ಚಾಚೂ ತಪ್ಪದೇ ಶಿಷ್ಯಧರ್ಮವನ್ನು ಪಾಲಿಸಿದರು. ವಿಶ್ವಾಮಿತ್ರರು ಎಲ್ಲಾ ಅಸ್ತ್ರಗಳನ್ನು ಧಾರೆ ಎರೆದರು. ಶಿಷ್ಯನು ಸದಾಕಾಲ ಗುರುವನ್ನು ಧ್ಯಾನಿಸಬೇಕು ಇದರಿಂದ ಒಂದು ಸಾರ್ಥಕ ಭಾವನೆ ಉಂಟಾಗುತ್ತದೆ.
ವರ್ಣ, ಆಶ್ರಮ, ಕೀರ್ತಿ ಸಕಲವನ್ನೂ ತ್ಯಾಗಮಾಡಿ ಗುರುವನ್ನು ಆಶ್ರಯಿಸಬೇಕು. ಗುರುಗಿಂತ ಮಿಗಿಲಾದುದಿಲ್ಲ ಎಂಬ ಅಭಿಮಾನ ಬೆಳೆಸಿಕೊಳ್ಳಬೇಕು. ಬೇರೆ ಎಲ್ಲವನ್ನು ಬಿಟ್ಟು ಗುರುಧ್ಯಾನ ಮಾಡುವವರಿಗೆ ಪರಮಪದ ದೊರೆಯುತ್ತದೆ. ಗುರುವನ್ನು ಸಂತೋಷಪಡಿಸಲು ಸಕಲ ಪ್ರಯತ್ನಗಳನ್ನು ಮಾಡಬೇಕು.
ಮುಂದೆ ‘ಗುರು’ ಎಂಬ ಪದದ ಅರ್ಥವನ್ನು ಮನಮುಟ್ಟುವಂತೆ ಸ್ವಾಮೀಜವರು ವರ್ಣಿಸಿದ್ದಾರೆ. ‘ಗು’ ಎಂದರೆ ಕತ್ತಲು, ‘ರು’ ಎಂದರೆ ಬೆಳಕು. ಅಜ್ಞಾನವನ್ನು ನುಂಗಿಹಾಕುವ ಪರಬ್ರಹ್ಮವೇ ಗುರು. ‘ ಗು’ ಅಂದರೆ ಗುಣಾತೀತ, ‘ರು’ ಅಂದರೆ ರೂಪಾತೀತ, ಹೀಗೆ ಇನ್ನು ಅನೇಕ ವಿಷಯಗಳನ್ನು ಮುಖ್ಯ ತಿಳಿದುಕೊಳ್ಳೋಣ ಇಂದಿನ ಸಂಚಿಕೆಯಲ್ಲಿ.
ಜೈಗುರುದತ್ತ