ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ: ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ- 26

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 3

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 26

ಆಗ ಪಳನಿ ಸ್ವಾಮಿಗಳು ನನ್ನನು ಸಂತೈಸಿ ಅವರ ಯೋಗ ದೃಷ್ಟಿಯನ್ನು ನನ್ನ ಕಡೆ ಪ್ರಸರಿಸಿದರು. ಆ ಯೋಗ ದೃಷ್ಟಿಗೆ ನನ್ನ ಬೆನ್ನು ಮೂಳೆಯೊಳಗೆ ಏನೋ ಸಂಚರಿಸಿದಂತಾಗಿ ಸಹಿಸಲಾರದಂತಹ ನೋವು ಉಂಟಾಯಿತು. ಪಳನಿ ಸ್ವಾಮಿಗಳು ಮತ್ತೆ ಪ್ರಸನ್ನ ದೃಷ್ಟಿಯಿಂದ ನನ್ನ ಕಡೆ ನೋಡಿದರು. ನನ್ನ ಬಾಧೆ ಮಟಮಾಯವಾಯಿತು. ” ಮಗೂ ! ಮಾಧವನಿಗೆ ಶ್ರೀಪಾದವಲ್ಲಭರ ದರ್ಶನ ಪ್ರಾಪ್ತಿ ಅವನ ಸ್ಥೂಲ ಶರೀರದಿಂದ ಇಲ್ಲ. ಅವನ ಸೂಕ್ಷ್ಮ ಶರೀರವು ಈ ಹತ್ತು ದಿನಗಳಿಂದ ಕುರುವಪುರದಲ್ಲಿ ಇರುವ ಶ್ರೀಪಾದರ ಸನ್ನಿಧಿಯಲ್ಲಿ ಇದೆ. ಯಾವುದು ಏನಾದರಾಗಲಿ ಅವನ ಆಸೆಯಂತೂ ತೀರಿತು. ಶ್ರೀಪಾದವಲ್ಲಭರ ಲೀಲೆಗಳು ಊಹಿಸಲಾರದಂತಹವುಗಳು. ಕಾಲಕರ್ಮಕಾರಣ ರಹಸ್ಯಗಳನ್ನು ಯಾರೂ ತಿಳಿಯಲಾರರು. ಅದು ಶ್ರೀಪಾದವಲ್ಲಭರಿಗೆ ಮಾತ್ರ ಸಾಧ್ಯ. ಮಾಧವನನ್ನು ಅವನ ಸ್ಥೂಲ ಶರೀರದೊಳಕ್ಕೆ ಮತ್ತೆ ಪ್ರವೇಶ ಪಡಿಸುವ ಬಾಧ್ಯತೆಯನ್ನು ಶ್ರೀಪಾದವಲ್ಲಭರು ನನಗೆ ಒಪ್ಪಿಸಿದ್ದಾರೆ. ನಾವು ಈ ಕೆಲಸವನ್ನು ಶೀಘ್ರವಾಗಿ ನೆರವೇರಿಸಬೇಕು ” ಎಂದು ಪಳನಿಸ್ವಾಮಿಗಳು ಹೇಳಿದರು. ನನಗೆ ಇದುವರೆಗೆ ಇದ್ದ ದುಗುಡವೆಲ್ಲವೂ ಕ್ಷಣದಲ್ಲಿ ಮಾಯವಾಯಿತು. ಮಾಧವನು ಮತ್ತೆ ಜೀವಂತನಾಗುವುದಕ್ಕಿಂತ ಹೆಚ್ಚಿನದು ನನಗಿನ್ನೇನು ಬೇಕಿದೆ ? ಮಾಧವನ ದೇಹವನ್ನು ಮಣ್ಣು ಮಾಡಿದ್ದ ಜಾಗಕ್ಕೆ ಹೋದೆವು. ಅವನ ದೇಹವನ್ನು ಹೊರಕ್ಕೆ ತೆಗೆದವು. ಈ ಕೆಲಸಕ್ಕೆ ಸಹಾಯ ಮಾಡಲು ಇನ್ನಿಬ್ಬರು ಇದ್ದರು. ಸ್ವಾಮಿಗಳು ನಮಗೆ ದಕ್ಷಿಣ ದಿಕ್ಕಿನಲ್ಲಿದ್ದ ತಾಳೆಯ ಮರಗಳ ತೋಪಿಗೆ ಹೋಗಿ ಮಾಧವನನ್ನು ಕಚ್ಚಿದ ಓ ನಾಗರಾಜ ! ಶ್ರೀಪಾದವಲ್ಲಭರ ಆಜ್ಞೆಯ ಪ್ರಕಾರ ನೀನು ತಕ್ಷಣ ಪಳನಿಸ್ವಾಮಿಯವರ ಸನ್ನಿಧಿಗೆ ಬರಬೇಕು ‘ ಎಂದು ಗಟ್ಟಿಯಾಗಿ ಕೂಗುವಂತೆ ಹೇಳಿದರು. ಸ್ವಾಮಿಗಳು ಹೇಳಿದ ಪ್ರಕಾರ ನಾವು ಕೂಗಿಕೊಂಡವು. ಪಳನಿ ಸ್ವಾಮಿಗಳು ತಮ್ಮ ಕೌಪೀನದಿಂದ ನಾಲ್ಕು ಕವಡೆಗಳನ್ನು ತೆಗೆದರು. ಅವನ್ನು ಆ ಶವದ 4 ದಿಕ್ಕುಗಳ ಕಡೆ ಇಟ್ಟರು. ಅವು ಸ್ವಲ್ಪ ಹೊತ್ತಿನಲ್ಲಿಯೇ ಸ್ವಲ್ಪ ಎತ್ತರಕ್ಕೆ ಎಗರಿದವು. ಆಮೇಲೆ ಅವು ರಿವ್ವೆಂದು ಆಕಾಶದ ನಾಲ್ಕೂ ದಿಕ್ಕುಗಳಿಗೆ ಹಾರಿಹೋದವು. ಇನ್ನು ಸ್ವಲ್ಪ ಸಮಯದ ನಂತರ ಬುಸುಗುಟ್ಟುತ್ತಾ ಬರುತ್ತಿದ್ದ ನಾಗರಹಾವನ್ನು ನೋಡಿದೆವು. ಅದು ಉತ್ತರದಿಕ್ಕಿನ ಕಡೆಯಿಂದ ಬರುತ್ತಿತ್ತು. ಆ ಹಾವು ತಾಳ್ಮೆಯನ್ನು ಕಳೆದುಕೊಂಡಂತಿತ್ತು. ಪಳನಿ ಸ್ವಾಮಿಗಳು ಆ ಹಾವಿಗೆ ಮಾಧವನ ಶರೀರದಿಂದ ವಿಷವನ್ನು ಹೀರಿಕೊಳ್ಳಲು ಹೇಳಿದರು. ಹಾವು ಮೊದಲು ಎಲ್ಲಿ ಕಚ್ಚಿತ್ತೋ ಅಲ್ಲಿಂದಲೇ ವಿಷವನ್ನು ವಾಪಸ್ಸು ಹೀರಿಕೊಂಡಿತು. ಪಳನಿ ಸ್ವಾಮಿಗಳು ಶ್ರೀಪಾದವಲ್ಲಭರ ನಾಮಸ್ಮರಣೆ ಮಾಡುತ್ತಾ ಮಂತ್ರೋದಕವನ್ನು ಹಾವಿನ ಮೇಲೆ ಪ್ರೋಕ್ಷಣೆ ಮಾಡಿದರು. ಆ ಹಾವು ಪಳನಿ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿ ಮೂರು ಪ್ರದಕ್ಷಿಣೆ ಮಾಡಿ ಶಾಂತರೀತಿಯಲ್ಲಿ ಹೊರಟು ಹೋಯಿತು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 27
ಸಂತಸ ಬಂದಾಗ ಹರಿಯ ಮರೆವು.
ಸಂಕಟ ಬಂದಾಗ ವೆಂಕಟರಮಣನ ನೆನಹು.
ಇದೇ ಬದುಕಿನ ಸೋಜಿಗವಲ್ಲವೆ ಪ್ರಭು?

  • ಸಚ್ಚಿದಾನಂದ
  • ಶ್ರೀ ಸ್ವಾಮೀಜಿ

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share