ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಚರಿತ್ರೆ ಶ್ರೀ ಪಾದ ಶ್ರೀ ವಲ್ಲಭರ ಪುಟ 34

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 4

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 34

ಶ್ರೀಪಾದ ಶ್ರೀವಲ್ಲಭರ ಜನ್ಮಸ್ಥಾನದಲ್ಲಿ ಅವರ ಪಾದುಕೆಗಳು, ಶ್ರೀಪಾದರ, ಶ್ರೀ ದತ್ತಾತ್ರೇಯರ, ಶ್ರೀ ನರಸಿಂಹ ಸರಸ್ವತಿಗಳ ಮೂರ್ತಿಗಳ ಪ್ರತಿಷ್ಠೆ

ಪಳನಿ ಸ್ವಾಮಿಯವರು ” ಮಗೂ ! ಮಾಧವಾ ! ನೀನು ದರ್ಶಿಸಿದ ಶ್ರೀಪಾದವಲ್ಲಭರ ಮಾತಾಮಹಗೃಹ ನಿನ್ನನ್ನು ಅತಿಶಯವಾಗಿ ಆಕರ್ಷಿಸಿತು. ಏಕೆಂದರೆ ಅದು ಶ್ರೀಪಾದವಲ್ಲಭರು ಹುಟ್ಟಿದ ಜಾಗ, ಅಲ್ಲಿ ಪಾದುಕೆಗಳ ಕೆಳಗೆ ಇರುವ ಪಾತಾಳಲೋಕದಲ್ಲಿ ನೂರಾರು ವರ್ಷಗಳಿಂದ ತಪೋನಿರತರಾಗಿರುವ ಋಷಿಮುನಿಗಳಿದ್ದಾರೆ. ನೀನು ದರ್ಶಿಸಿದ ಶ್ರೀಪಾದವಲ್ಲಭರು ಹುಟ್ಟಿದ ಸ್ಥಳದಲ್ಲಿ ಮಾತ್ರವೇ ಅವರ ಪಾದುಕೆಗಳು ಪ್ರತಿಷ್ಠಿಸಲ್ಪಡುವುವು. ಇದಾದ ಕೆಲವು ವರ್ಷಗಳಲ್ಲಿ ಯಾರ ಪ್ರಯತ್ನವೂ ಇಲ್ಲದೆ ಶ್ರೀಪಾದರ ಚರಿತಾಮೃತವು ಬೆಳಕಿಗೆ ಬರುವುದು. ನೀನು ಕುಳಿತ ಸ್ಥಳದಲ್ಲಿ ಶ್ರೀಪಾದವಲ್ಲಭರ, ದತ್ತಾತ್ರೇಯರ, ನರಸಿಂಹಸರಸ್ವತಿಗಳ ವಿಗ್ರಹಗಳು ಪ್ರತಿಷ್ಠಿಸಲ್ಪಡುತ್ತವೆ. ಅನಂತರ ಆ ಕ್ಷೇತ್ರದಲ್ಲಿ ಬೇಕಾದಷ್ಟು ಲೀಲೆಗಳು ಸಂಭವಿಸುವವು ” ಎಂದರು.
ಆಮೇಲೆ ಪಳನಿ ಸ್ವಾಮಿಗಳು ಸ್ವಲ್ಪ ಸಮಯ ಮೌನವನ್ನು ತಾಳಿದರು. ನಮ್ಮ ಗುಹೆಗೆ ಹತ್ತಿರದಲ್ಲೇ ಮಣ್ಣು ಮಾಡಿದ್ದ ಆ ನವಯುವಕನ ಶವವನ್ನು ಹೊರತೆಗೆಯಲು ಹೇಳಿದರು. ಶವವನ್ನು ಹೊರ ತೆಗೆದ ಮೇಲೆ ಪ್ರಣವವನ್ನು ಉಚ್ಚರಿಸಲು ಪ್ರಾರಂಭಿಸಿದರು. ” ಶ್ರೀಪಾದರಾಜಂ ಶರಣಂ ಪ್ರಪದ್ಧೇ ” ಎಂದು ಘೋಷಿಸುತ್ತಾ ವ್ಯಾಘ್ರಶ್ವರಶರ್ಮನು ಬಂದನು. ಸ್ವಾಮಿಯವರು ಆ ಯುವಕನ ಶವದೊಳಗೆ ಪ್ರವೇಶಿಸಿದರು. ವಯೋಭಾರದಿಂದ ಶಿಥಿಲವಾಗಿದ್ದ ಪಳನಿ ಸ್ವಾಮಿಯವರ ವೃದ್ಧ ಶರೀರವನ್ನು ವ್ಯಾಘ್ರರೂಪದಲ್ಲಿದ್ದ ವ್ಯಾಘ್ರೇಶ್ವರ ಶರ್ಮನು ನದಿಯಲ್ಲಿ ತೇಲಿ ಬಿಡಲು ತೆಗೆದುಕೊಂಡು ಹೋದನು.
ಹೊಸ ಶರೀರದಲ್ಲಿ ಪ್ರವೇಶಿಸಿದ ಪಳನಿ ಸ್ವಾಮಿಗಳು, ” ನೀವು ತಕ್ಷಣ ಇಲ್ಲಿಂದ ಹೊರಡಿ. ಮಗು ! ಮಾಧವ ! ನೀನು ನಿನ್ನ ವಿಚಿತ್ರ ಪುರಕ್ಕೆ ಹೋಗು. ನೀನು ನಿನ್ನ ಸೂಕ್ಷ್ಮ ಶರೀರದಿಂದ ಪೀಠಾಕಾಪುರದಲ್ಲಿನ ಪುಣ್ಯ ಜೀವಿಗಳನ್ನು – ದರ್ಶಿಸಿದ್ದೀಯೆ. ಈ ಜನ್ಮಕ್ಕೆ ನಿನಗೆ ಅಷ್ಟೇ ಸಾಕು. ಮಗೂ ! ಶಂಕರಾ ! ನೀನು ತಿರುಪತಿ ಮಹಾಕ್ಷೇತ್ರಕ್ಕೆ ಹೋಗು. ಮಾಧವಾ ! ನಿನಗೆ ಶ್ರೀಪಾದವಲ್ಲಭರ ಅನುಗ್ರಹವು ದೊರೆಯುವಂತಾಗಲಿ ” ಎಂದು ಹೇಳಿದರು.
ಆಗ ಮಾಧವನು ವಿಚಿತ್ರಪುರದ ಕಡೆಗೆ ಮತ್ತು ನಾನು ತಿರುಪತಿಯ ಕಡೆಗೆ ಪ್ರಯಾಣ ಮಾಡಿದೆವು. ಶ್ರೀಪಾದರ ಲೀಲೆಗಳಿಗೆ ಕೊನೆಯಲ್ಲಿ !

|| ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ||
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 35

ಕಡಲಿನಡಿಯಲಿ ಚಲಿಸುವಂಥ ಯಂತ್ರ,
ಕಡಲ ಮೇಗಡೆ ತೇಲಿ ದೂರ ಸೇರುವ ಯಂತ್ರ,
ಕಡಲಾಳವನ್ನೂ ನಿಖರ ಅಳತೆಮಾಡುವ ಯಂತ್ರ.
ನಿನ್ನ ಮನದಾಳವನೆ ಅಳೆವ ಯಂತ್ರವೆ ಇಲ್ಲ.
ನಿನ್ನಾಳವನೆ ನೀನು ತಿಳಿಯಲಾಗಿಲ್ಲ –
ಎನುವ ಪ್ರಭುವಿನ ಆಳ ಕಂಡವರಿಲ್ಲ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share