ಶ್ರೀ ಗುರು ಗೀತ – ಭಾಗ 13
ಗುರು ಪದದ ಅರ್ಥದ ಬಗ್ಗೆ ಮುಂದುವರೆದು ಮಾತನಾಡುತ್ತಾ, ದೇವಾನು ದೇವತೆಗಳು, ಗಂಧರ್ವ ಗಣಗಳು, ಶಾಪಗ್ರಸ್ತಕು ಸಕಲರು ಗುರುಧ್ಯಾನ ಮಾಡಿತ್ತಾರೆ. ಗರುವಿನ ಆರಾಧನೆ ಮಾಡಿದಷ್ಟು ಜ್ಞಾನಾರ್ಜನೆ ಹೆಚ್ಚಾಗುತ್ತದೆ. ನಾನು ಜೀವ ಎಂಬ ಭಾವನೆಯನ್ನು ಮೊದಲು ಗುರುವಿಗೆ ನಿವೇಧನೆ ಮಾಡಬೇಕು. ನಾನು ಶುದ್ಧ ಚೈತನ್ಯವೆಂಬ ಅರಿವು ನಮ್ಮಲ್ಲಿ ಮೂಡಿದಲ್ಲಿ ನಾವು ಸಂಪೂರ್ಣ ನಿವೇದನೆ ಮಾಡಿದ್ದೇವೆಂದು ತಿಳಿಯುತ್ತದೆ.
ಮತ್ತೆ ಗುರುವಿಗೆ ಮತ್ತೇನೇನು ಸಮರ್ಪಣೆ ಮಾಡಬೇಕು?
ಆಸನ, ಶಯನ, ವಸ್ತ್ರ, ಆಭರಣಗಳನ್ನು ಸಮರ್ಪಿಸಬೇಕು. ಅಂದರೆ ನಿನ್ನನ್ನು ನೀನು ತನು, ಮನ, ಧನಗಳಿಂದ ನಿವೇದನೆ ಮಾಡಿಕೊಂಡಲ್ಲಿ ಗುರುವು ನಿನ್ನ ಕರ್ಮಗಳನ್ನು ತೆಗೆಯುತ್ತಾರೆ. ಮೊದಲಿಗೆ ನಿನ್ನನ್ನು ನೀನು ಶುಭ್ರ ಗೊಳಿಸಬೇಕು. ಮೊದಲಿಗೆ ಭವನೆಗಳನ್ನು ಸಮರ್ಪಿಸಲು ತೊಡಗಬೇಕು. ಗುರುವಿಗೆ ನಮಸ್ಕಾರ ಮಾಡುವಾಗ ಮನಸ್ಸನ್ನು ಏಕಾಗ್ರಗೊಳಿಸಬೇಕು. ನಾಚಿಕೆ, ಸಂಕೋಚವಿಲ್ಲದೆ ನಮಸ್ಕರಿಸಬೇಕು. ಶರೀರ ಪ್ರಾಣಗಳನ್ನು ಗುರುವಿಗೆ ಸಮರ್ಪಿಸಬೇಕು. ಗುರುವಿನ ಸೂಚನೆಗಳನ್ನು ಗ್ರಹಿಸಿ ಗುರುಸೇವೆ ಮಾಡುವುದು ಉತ್ತಮ ಶಿಷ್ಯನ ಲಕ್ಷಣ. ಅಂತಹ ಶಿಷ್ಯನನ್ನು ಗುರುವು ಹೆಜ್ಜೆ ಹೆಜ್ಜೆಗೂ, ಕ್ಷಣ ಕ್ಷಣಕ್ಕೂ ರಕ್ಷಿಸುತ್ತಾರೆ.
ಗುರುವು ತ್ರಿಗುಣಾತ್ಮಕನು. ಗುರುವು ಸರ್ವಶ್ರೇಷ್ಟ. ಆದ್ದರಿಂದ ಗುರುವನ್ನು ಪೂಜಿಸಬೇಕು. ಈ ಎಲ್ಲಾ ವಿಷಯಗಳನ್ನು ಸಾಕ್ಷಾತ್ ಸದ್ಗುರುಗಳ ಬಾಯಲ್ಲೇ ಕೇಳುವುದಕ್ಕಿಂತ ಬೇರೆ ಸಾಟಿಯೇ ಇಲ್ಲ. ಬನ್ನಿ ಎಲ್ಲರು ತಪ್ಪದೇ ವೀಕ್ಷಿಸೋಣ.
ಜೈಗುರುದತ್ತ