ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅ೦ಗಳ: ಗುರು ಗೀತಾ ಭಾಗ-3

ಶ್ರೀ ಗುರು ಗೀತ – ಭಾಗ 3
ಗುರುವಿನಿಂದ ಕೇವಲ ಜ್ಞಾನವನ್ನು ಮಾತ್ರ ಅಪೇಕ್ಷಿಸಬೇಕು. ನಮ್ಮ ಕಷ್ಟಗಳನ್ನು ನಾವೇ ಅನುಭವಿಸಬೇಕು. ಗುರುವಿನ ಮೊದಲ ಮನಸ್ಸು ಪುಳಕಿತಗೊಳ್ಳಬೇಕು. ಗುರು ದರ್ಶನದಿಂದ ಮನಸ್ಸು ತೄಪ್ತಿಯಾಗಬೇಕು. ಅಲ್ಲಿ ಆರಂಭವಾಗುತ್ತದೆ ಗುರುವಿನ ಸಂಪರ್ಕ. ಅಲ್ಲಿ ನಿರ್ಣಯವಾಗುತ್ತದೆ ನಮ್ಮ ಗುರುಯಾರೆಂದು.
ಸದ್ಗುರುವಿನ ದರ್ಶನದಿಂದ ಜಾರಿ ಬೀಳುವವರು ಉಂಟು, ಕಾರಣ ನಮ್ಮ ಲೌಕಿಕ ಬಯಕೆಗಳು, ಗುರುವಿನ ಪರೀಕ್ಷೆಗಳು. ಜ್ಞಾನವನ್ನು ತುಂಬಲು ನಮ್ಮ ಅಜ್ಞಾನವನ್ನು ಗುರುವು ತೆಗೆಯುತ್ತಾರೆ. ನಮ್ಮ ಕ ಷ್ಟಗಳಿಗೆ ಗುರುವು ಹೊಣೆಯಲ್ಲ. ದಿನಕ್ಕೊಬ್ಬರು ಗುರುವನ್ನು ಬದಲಾಯಿಸುವುದು ಪತನಕ್ಕೆ ದಾರಿ. ಅದು ಮಹಾ ಅಪರಾಧ. ಗುರುವನ್ನು ಸದಾ ಗೌರವಿಸುವುದು ಶಿಷ್ಯನ ಕರ್ತವ್ಯ ಎಂಬುದನ್ನು ವರ್ಣಿಸಿದ್ದಾರೆ ಶ್ರೀ ಶ್ರೀ ಗಳು.
ಜೈಗುರುದತ್ತ