ಮೈಸೂರು ಪತ್ರಿಕೆ ಸುದ್ದಿ ಗವಾಕ್ಷಿ

Share

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
      ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜೂನ್ 4 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 9.00 ಗಂಟೆಗೆ ಮೈಸೂರಿಗೆ ಆಗಮಿಸುವ ಅವರು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಹಿನ್ನೆಲೆ ಕೆ.ಆರ್. ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡುವರು.
ಬೆಳಿಗ್ಗೆ 9.30 ಗಂಟೆಗೆ ಅರಸು ಮಂಡಳಿ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿ ಸಂಘದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತ್ಯುತ್ಸವ ಆಚರಣೆ ಸಮಾರಂಭದಲ್ಲಿ ಭಾಗವಹಿಸುವರು.
ಬೆಳಿಗ್ಗೆ 11.15ಕ್ಕೆ ತಲಕಾಡಿನಲ್ಲಿರುವ ವೈದೇಶ್ವರ ಸಮೂಹ ದೇವಾಲಯಗಳ ವೀಕ್ಷಣೆ ಮಾಡುವರು.
ಮಧ್ಯಾಹ್ನ 1.00 ಗಂಟೆಗೆ ತಲಕಾಡಿನ ಕುರುಬಾಳ ಹುಂಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡುವರು.
ಮಧ್ಯಾಹ್ನ 3.00 ಗಂಟೆಗೆ ಸಹಕಾರ ಇಲಾಖೆ ವತಿಯಿಂದ ತಿ.ನರಸೀಪುರದಲ್ಲಿರುವ ಟಿ.ಎಪಿಸಿಎಂಎಸ್ ಬಿಲ್ಟಿಂಗ್‍ನಲ್ಲಿ ಆಶಾಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಮಾಡುವರು.

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ
     ಮೈಸೂರು ಜೂನ್.3.(ಕರ್ನಾಟಕ ವಾರ್ತೆ):- ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಈ ಬಡವಾಣೆಯ 252 ಮನೆಗಳು ಇಂದಿಗೂ ಖಾಲಿಯಿರುತ್ತದೆ.
     ಖಾಲಿ ಇರುವ ಸದರಿ ಮನೆಗಳಲ್ಲಿ ಅನಧಿಕೃತವಾಗಿ ನಿವಾಸಿಗಳು ಬಂದು ಸೇರುತ್ತಿರುವುದಾಗಿ ಜೂನ್  01 ರಂದು ಅಲ್ಲಿನ ಸ್ಥಳೀಯ ನಿವಾಸಿಗಳು ದೂರವಾಣಿಯ ಮುಖಾಂತರ ಮಾಹಿತಿ ತಿಳಿಸಿದ್ದು, ಇದರಂತೆ ಜೂನ್  01 ರಂದು ಸ್ಥಳಕ್ಕೆ ಭೇಟಿ ನೀಡಿದ ಸಮಯದಲ್ಲಿ ನಿವಾಸಿಗಳು ಅನಧಿಕೃತವಾಗಿ ಮನೆಗಳಿಗೆ ಸೇರುತ್ತಿರುವುದು ಕಂಡು ಬಂದಿರುತ್ತದೆ.
ಇವರುಗಳನ್ನು ನಿವಾಸದಿಂದ ಖಾಲಿ ಮಾಡಿಸಲಾಗಿದ್ದು, ಜೂನ್ 02 ರಂದು ಮತ್ತೆ ಸದರಿ ಬಡಾವಾಣೆಗೆ ಭೇಟಿ ನೀಡಿದಾಗ ಸುಮಾರು 10 ರಿಂದ 15 ಕುಟುಂಬಗಳು ಮನೆಗಳನ್ನು ಅನಧಿಕೃತವಾಗಿ ಸೇರಲು ಬಂದಿದ್ದು, ಇವರುಗಳನ್ನು ಅಲ್ಲಿನ ನಿವಾಸದಿಂದ ಖಾಲಿ ಮಾಡಿಸಲಾಗಿರುತ್ತದೆ.
  ಸದರಿ ಬಡಾವಣೆಯು ಸರ್ಕಾರದ ಆಸ್ತಿಯಾಗಿದ್ದು, ಯಾರು ಅನಧಿಕೃತವಾಗಿ ವಾಸಮಾಡಬಾರದು ಹಾಗೂ ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ
     ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಕೆಲವು ಪ್ರಭೇದದ ಆಳವಾದ ಬೇರು ಹೊಂದಿಲ್ಲದ ಮೃದು ಕಾಂಡದ ಗಾಳಿ ವೇಗವನ್ನು ಸಹಿಸದ ಮರಗಳು ಬೇರು ಸಮೇತ ಬೀಳುವುದು ಹಾಗೂ ಕೊಂಬೆಗಳು ಮುರಿದು ಬೀಳುತ್ತಿರುವ ಹಲವಾರು ಪ್ರಕರಣಗಳು ಕಂಡು ಬಂದಿದ್ದು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗುತ್ತಿರುತ್ತದೆ.
     ಈ ಹಿನ್ನೆಲೆ ಇಂತಹ ಪ್ರಭೇದದ ಸಸ್ಯಗಳಾದ ಗುಲ್‍ಮೊಹರ್, ಕತ್ತಿಕಾಯಿಮರ, ಸ್ಪೆತೋಡಿಯಾ,  ನೀರುಕಾಯಿ,  ಪಿಚಕಾಯಿ ಮರ, ಕಾಪರ್ ಪಾಡ್ ಟ್ರೀ, ಸುಬಾಬುಲ ಮರ, ಸಿಂಗಾಪೂರ್ ಚೆರ್ರಿ / ಗಸಗಸೆ ಹಣ್ಣಿನ ಮರಗಳನ್ನು ರಸ್ತೆಬದಿಗಳು, ಉದ್ಯಾನವನಗಳು, ಸ್ಮಶಾನಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನೆಡದಂತೆ ಆದೇಶಿಸಿದೆ.
     ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಗಾಳಿಯ ವೇಗ ಮೆಟ್ಟಿ ನಿಲ್ಲುವ ಆಳ ಬೇರುಗಳುಳ್ಳ, ಗಡಸುಕಾಂಡದ, ಪಕ್ಷಿಗಳಿಗೆ ಆಹಾರ ಒದಗಿಸುವ ಹಣ್ಣಿನ ಜಾತಿಯ ಹಾಗೂ ಅಲಂಕಾರಿಕ ಜಾತಿಯ ಮರಗಳಾದ ಮಾವು, ಹಲಸು, ಬೇವು, ಜಮ್ಮು ನೇರಳೆ, ಬೇಲ, ಬೆಟ್ಟದ ನೆಲ್ಲಿ, ಪನ್ನೇರಳೆ, ಹುಣಸೆ, ಅಶೋಕ ಮರದ ಜಾತಿಯ ಸಸ್ಯಗಳನ್ನು ನೆಡಲು ಉದ್ದೇಶಿಸಲಾಗಿರುತ್ತದೆ.
     ಆದ್ದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಗಿಡಗಳನ್ನು ನೆಡಲು ಇಚ್ಚಿಸುವ ಸಂಸ್ಥೆ, ಇಲಾಖೆ ಹಾಗೂ ಸಾರ್ವಜನಿಕರು ಪಾಲಿಕೆಯೊಂದಿಗೆ ಸಮಾಲೋಚನೆ ನಡೆಸಿ ನಗರ ಅರಣ್ಯೀಕರಣ ಯೋಜನೆಗಳನ್ನು  ಕೈಗೊಳ್ಳಲು ಸಹಕಾರ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

ಸ್ಥಗಿತ ಸಹಕಾರ ಸಂಘಗಳ ಅಹವಾಲು ಸಲ್ಲಿಕೆ
ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಮೈಸೂರು ಉಪ ವಿಭಾಗದಲ್ಲಿ ಸ್ಥಗಿತಗೊಂಡಿರುವ 24 ಸಹಕಾರ ಸಂಘಗಳು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಹಾಗೂ ನಿಯಮ 1960 ಹಾಗೂ ಸಹಕಾರ ಸಂಘಗಳ ಉಪನಿಯಮಗಳ (ಬೈಲಾ) ರೀತ್ಯಾ ಸಂಘದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೇ ಸ್ಥಗಿತಗೊಂಡಿರುತ್ತದೆ. ಸಂಘವನ್ನು ಮುನ್ನೆಡಿಸಿಕೊಂಡು ಹೋಗುವ ಬಗ್ಗೆ ಸದಸ್ಯರುಗಳು ನಿರಾಸಕ್ತಿ ಹೊಂದಿರುತ್ತಾರೆ.
     ಸಹಕಾರ ಸಂಘಗಳÀನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 72 ರನ್ವಯ ಸಮಾಪನೆಗೊಳಿಸಲು ಉದ್ದೇಶಿಸಿದ್ದು, ಸಂಘದ ಸದಸ್ಯರ ಹಿತದೃಷ್ಟಿಯಿಂದ ಮತ್ತೊಮ್ಮೆ ಸದರಿ ಸಂಘಗಳÀನ್ನು ಪುನರುಜ್ಜೀವನಗೊಳಿಸಿಕೊಂಡು ಮುಂದುವರೆಸಿಕೊಂಡು ಹೋಗುವ ಬಗ್ಗೆಯಾಗಲೀ ಅಥವಾ ಸಮಾಪನೆಗೊಳಿಸುವುದರ ವಿರುದ್ಧ ಆಕ್ಷೇಪಣೆಗಳೇನಾದರೂ ಸಂಘದ ಸದಸ್ಯರುಗಳಿಗೆ ಇದ್ದಲ್ಲಿ ಲಿಖಿತ ಮೂಲಕವಾಗಲೀ ಅಥವಾ ಖುದ್ದಾಗಿ ಮನವಿಯನ್ನು ಪ್ರಕಟಣಾ ದಿನಾಂಕದಿಂದ 15 ದಿವಸಗಳ ಒಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ನಿಗದಿತ ಅವಧಿಯೊಳಗೆ ಯಾವುದೇ ಅಹವಾಲುಗಳು/ ಆಕ್ಷೇಪಣೆಗಳು ಲಿಖಿತ ಮನವಿಗಳು ಸ್ವೀಕೃತವಾಗದಿದ್ದ ಪಕ್ಷದಲ್ಲಿ ಸಂಘವನ್ನು ಸಮಾಪನೆಗೊಳಿಸಲು ನಿಮ್ಮ ಅಭ್ಯಂತರವೇನೂ ಇರುವುದಿಲ್ಲವೆಂದು ಪರಿಗಣಿಸಿ, ಸಂಘದ ಸಮಾಪನೆಗೆ ಪ್ರಸ್ತಾವೆ ಸಲ್ಲಿಸಲಾಗುವುದೆಂದು ತಿಳಿಯುವುದು ಹಾಗೂ ಸಂಘವನ್ನು ಸಮಾಪನೆಗೊಳಿಸಿದ ನಂತರ ಬರಬಹುದಾದ ಅಹವಾಲುಗಳು ಮತ್ತು ಆಕ್ಷೇಪಣೆಗಳಿಗೆ ಈ ಕಛೇರಿಯ ಯಾವುದೇ ರೀತಿಯಲ್ಲಿ ಹೊಣೆಯಾಗಿರುವುದಿಲ್ಲವೆಂದು ಮೈಸೂರು ಉಪವಿಭಾಗದ  ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಥಗಿತ ಸಹಕಾರ ಸಂಘಗಳು
1. ಅಲ್ ಎಹಸಾನ್ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ನಿ, ಶಾಂತಿನಗರ, ಮಹದೇವಪುರ ಮುಖ್ಯ ರಸ್ತೆ , ಮೈಸೂರು
2. ರಾಜು ಕ್ಷತ್ರೀಯ ಪತ್ತಿನ ಸಹಕಾರ ಸಂಘ ನಿ, ನಂ 2786/ಸಿಹೆಚ್ 37, ಮುತ್ತುರಾಯ ಕಾಂಪ್ಲೆಕ್ಸ್ ರೈಲ್ವೆಗೇಟ್ ರಸ್ತೆ, ಸರಸ್ವತಿಪುರಂ ಮೈಸೂರು-09
3. ಮೈಸೂರು ಜಿಲ್ಲಾ ಬೀಡಿ ಮಜ್ದೂರ್  ಸಹಕಾರ ಸಂಘ ನಿ, ಮಂಡಿ ಮೊಹಲ್ಲ , ಮೈಸೂರು
4. ಇಂಜಿನಿಯರ್ಸ್ ಸಹಕಾರ ಸಂಘ ನಿ. ನಂ.287, 7ನೇ ಅಡ್ಡ ರಸ್ತೆ, ನಾಚನಹಳ್ಳಿ ಪಾಳ್ಯ, ಮೈಸೂರು
5. ಜಿಲ್ಲಾ ಟ್ರಜರಿ ಪತ್ತಿನ ಸಹಕಾರ ಸಂಘ ನಿ , ಡಿ.ಸಿ.ಕಚೇರಿ , ಮೈಸೂರು
6. ಮುರುಗಾದೇವಿ ಬಳಕೆದಾರರ ಸಹಕಾರ  ಸಂಘ ನಿ, ಮಹಾರಾಷ್ರ್ಟ ಬೀದಿ, ಮೈಸೂರು
7. ವಿಶ್ವಮಾನವ ಗೃಹ ನಿರ್ಮಾಣ ಸಹಕಾರ ಸಂಘ ನಿ., # 685, ವಿಜಯನಗರ, 2ನೇ ಹಂತ ಮೈಸೂರು.
8. ನ್ಯಾಷನಲ್ ಗೃಹ ನಿರ್ಮಾಣ ಸಹಕಾರ ಸಂಘ ನಿ ಪಿ/8 ಡಿ ವಿ.ಎಸ್.ಎಸ್ ಕಾಂಪ್ಲೆಕ್ಸ್, ಕಾಮಾಕ್ಷಿ ಆಸ್ವತ್ರೆ ಮುಂಬಾಗ, ಸರಸ್ವತಿಪುರಂ ಮೈಸೂರು-09
9. ಶ್ರಿ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ ನಂ-18, ಬ್ಲಾಕ್ ನಂ 17, ಬಿ.ಇ.ಎಂಎಲ್.ಬಡಾವಣೆ ಮೈಸೂರು
10. ಜಯಚಾಮರಾಜೇಂದ್ರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಸವಾಯಿ ಚೌಕ, ಮೈಸೂರು
11. ಶ್ರೀ ಚಾಮುಂಡೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘ ನಿ.,   ಜಯಲಕ್ಷ್ಮಿಪುರಂ
12. ಶ್ರೀ ಮಾತಾ ವೈಸ್ಣವಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ನಂ.188, ಮೊದಲನೆ ಮಹಡಿ, ರಮವಿಲಾಸ ರಸ್ತೆ, ಕೆ.ಆರ್ ಮೊಹಲ್ಲಾ, ಮೈಸೂರು
13. ಆನಂದ ಗೃಹ ನಿರ್ಮಾಣ ಸಹಕಾರ ಸಂಘ ನಿ, ನಂ ಪಿ/ಒ, 4ನೇ ಹಂತ, 9ನೇ ಕ್ರಾಸ್, ಟಿ.ಕೆ ಬಡಾವಣೆ, ಸರಸ್ವತಿಪುರಂ ಮೈಸೂರು -09
14. ಮೈಸೂರು ನಗರ ರಸ್ತೆ ಬದಿ ಬೀದಿ ವ್ಯಾಪಾರಿಗಳ ವಿವಿದೋದ್ದೇಶ ಸಹಕಾರ ಸಂಘ ನಿ  #1,2, ವ.ವಿ ಮೊಹಲ್ಲಾ ಹಿಂಭಾಗ ನವಗ್ರಹ ದೇವಶ್ಥಾನದ ಎದುರು, ಅಗ್ರಹಾರ, ಕೆ.ಆರ್, ಮೊಹಲ್ಲಾ ಮೈಸೂರು
15. ಆವಿಷ್ಕಾರ್ ಜೀವನ್ ವಿವಿದೋದ್ದೇಶ ಸಹಕಾರ ಸಂಘ ನಿ ನಂ.324/1, 3ನೇ ಮಹಡಿ. ಡಿ.ಸುಬ್ಬಯ್ಯ ರಸ್ತೆ, ಚಾಮರಾಜ ಮೊಹಲ್ಲಾ, ಮೈಸೂರು
16. ಮೆಡಿಕಲ್ ಕಾಲೇಜು ಸಹಕಾರ ಸಂಘ ನಿ, ಮೈಸೂರು
17. ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘ ನಿ, ರಮ್ಮನಹಳ್ಳಿ, ಮೈಸೂರು ತಾ||
18. ಎಡಹಳ್ಳಿ ಮಹಿಳಾ ಮೀನುಗಾರರ ಸಹಕಾರ ಸಂಘ ನಿ, ಮೀನಾಕ್ಷಿಪುರ, ಇಲವಾಲ ಹೋಬಳಿ
19. ಫಾಲ್ಕನ್ ಟೈರ್ಸ್ ನೌಕರರ ವಿವಿದೋದ್ದೇಶ ಸಹಕಾರ ಸಂಘ. ನಿ. ಮೈಸೂರು
20. ಶ್ರೀ ಮಲೆಮಹದೇಶ್ವರ ವಿವಿದೋದ್ದೇಶ ಸಹಕಾರ  ಸಂಘ ನಿ, ದಡದಹಳ್ಳಿ ಮೈಸೂರು ತಾ||
21. ಶ್ರೀ ರಾಜರಾಜೇಶ್ವರಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿ ಇಲವಾಲ
22. ಗೌ. ಅಫಿಷಿಯಲ್  ಪತ್ತಿನ ಸಹಕಾರ ಸಂಘ ನಿ. ಗರ್ಗೇಶ್ವರಿ
23. ಶ್ರೀ ಕೇತೇಶ್ವರ ಮೇದ ಗಿರಿಜನ ಬಿದಿರು ಕುಶಲ ಕೈಗಾರಿಕಾ ಸಹಕಾರ ಸಂಘ ನಿ ಮೇದರ ಬೀದಿ, ವಿನಾಯಕ ಕಾಲೋನಿ, ಟಿ ನರಸೀಪುರ.
24. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,  ಸಿಂಧುವಳ್ಳಿ £ಂಜನಗೂಡು ತಾಲ್ಲೂಕು

ಮೃಗಾಲಯದ ಆನೆ ದತ್ತು ಸ್ವೀಕಾರ
 ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಮೈಸೂರಿನ ದ್ರುವ್ ಕಾಂಪ್ಯೂಸಾಫ್ಟ್ ಕನ್ಸಲ್‍ಟೆನ್ಸಿ ಪ್ರೈವೆಟ್ ಲಿಮಿಟೆಡ್ ನವರು  75,000 ರೂಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಆನೆಯೊಂದನ್ನು 22-05-2020 ರಿಂದ 21-10-2020ರ 5 ತಿಂಗಳ ವರೆಗೆ ದತ್ತು ಸ್ವೀಕರಿಸಿದ್ದಾರೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಾಪ್‍ಕಾಮ್ಸ್‍ನಿಂದ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು
     ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯ ಅಧೀನದ ಹಾಪ್‍ಕಾಮ್ಸ್ ಸಂಸ್ಥೆ ವತಿಯಿಂದ ಮೈಸೂರು ನಗರ ಜನತೆಯ ಅನುಕೂಲಕ್ಕಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣುಗಳನ್ನು ಸರಬರಾಜು ಮಾಡುವ ಉದ್ದೇಶದಿಂದ “ಊಔPಅಔಒS ಔಓಐIಓಇ” ಒobiಟe ಚಿಠಿಠಿನ್ನು ಅಭಿವೃದ್ಧಿ ಪಡಿಸಲಾಗಿದೆ.
     ಸದರಿ ಆ್ಯಪ್‍ನ್ನು ಉoogಟe ಠಿಟಚಿಥಿ sಣoಡಿe ನಿಂದ “ಊಔPಅಔಒS ಔಓಐIಓಇ”   ಮೊಬೈಲ್ ಆ್ಯಪ್‍ನ್ನು  ಡೌನ್‍ಲೋಡ್ ಮಾಡಿಕೊಂಡು ಗ್ರಾಹಕರು ಈ ಸೌಲಭ್ಯವನ್ನು ಸದುಪಯೋಗ ಪಡೆಯುವಂತೆ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ವ್ಯತ್ಯಯ
     ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಬೃಹತ್ ಕಾಮಗಾರಿ ವಿಭಾಗ ಚಾಮರಾಜನಗರ ಹಾಗೂ ಕ.ವಿ.ಪ್ರ.ನಿ.ನಿ., (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ವತಿಯಿಂದ ಬೇಗೂರು-ಸರಗೂರು ಮಾರ್ಗದ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆ ಜೂನ್ 5 ರಂದು ಬೆಳಿಗ್ಗೆ 9.00 ಗಂಟೆಗೆಯಿಂದ ಸಂಜೆ 4.00 ಗಂಟೆಯವರೆಗೆ 66/11ಕೆವಿ ಹುರಾ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11ಕೆ.ವಿ ಮಲ್ಕುಂಡಿ (ಎನ್.ಜೆ.ವೈ) ಮತ್ತು ಚನ್ನಪಟ್ಟಣ (ಐ.ಪಿ) ಫೀಡರ್‍ಗಳಿಗೆ ವಿದ್ಯುತ್ ಸರಬರಾಜು ಹೊಂದಿರುವ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಗೊಳ್ಳಲಿದೆ.
ಈ ಹಿನ್ನೆಲೆ 11ಕೆ.ವಿ ಮಲ್ಕುಂಡಿ (ಎನ್.ಜೆ.ವೈ) ಫೀಡರ್‍ನ ಯಡಹಳ್ಳಿ, ಮಡಿಕೆಹುಂಡಿ, ಕಗ್ಗಲಿಹುಂಡಿ, ಹಲ್ಲರೆ, ಮಲ್ಕುಂಡಿ, ಎಂ.ಕೊಂಗಳ್ಳಿ, ಕಗ್ಗಲ್ಲೂರು, ಅಂಬಳೆ, ಅಂಬಳೆ ಹುಂಡಿ ಗ್ರಾಮಗಳು ಹಾಗೂ 11ಕೆ.ವಿ ಚನ್ನಪಟ್ಟಣ (ಐ.ಪಿ) ಫೀಡರ್‍ನ ಹುರಾ, ಸಿದ್ದೇಗೌಡನಹುಂಡಿ, ಮಲ್ಲಹಳ್ಳಿ, ಕೆಲ್ಲೂಪುರ, ಚನ್ನಪಟ್ಟಣ, ಕೊತ್ತನಹಳ್ಳಿ, ಹಂಚಿಪುರ, ನಾಗಣಪುರ, ಬಳ್ಳೂರುಹುಂಡಿ, ಇಂದಿರಾನಗರ, ರಾಜನಗರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

(ಪರಿಷ್ಕøತ ಪ್ರಕಟಣೆ)
ಜೂನ್ 4 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಸರಳ ಆಚರಣೆ
 ಮೈಸೂರು, ಜೂನ್.3(ಕರ್ನಾಟಕ ವಾರ್ತೆ):- ಕೋವಿಡ್-19 ಹಿನ್ನೆಲೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜೂನ್ 4 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಕೆ.ಆರ್.ವೃತ್ತದ ಬಳಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು  ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share