ಮೈಸೂರು ಪತ್ರಿಕೆ ಸುದ್ದಿ ಗವಾಕ್ಷಿ

477
Share

ವಿದ್ಯುತ್ ವ್ಯತ್ಯಯ
ಮೈಸೂರು,(ಕರ್ನಾಟಕ ವಾರ್ತೆ):- ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜೂನ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರಗೆ 66/11 ಕೆ.ವಿ. ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರದ Archelogy ಮತ್ತು ಮಯೂರ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಹೆಬ್ಬಾಳ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ವಾಣಿವಿಲಾಸ ಲೇಔಟ್, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಲೇಔಟ್, ಅಭಿಷೇಕ್ ವೃತ್ತ, ಎಂ.ಜಿ.ಕೊಪ್ಪಲು, ಹೊರ ವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, Archelogy ಆಫೀಸ್ ಸುತ್ತಮುತ್ತಲಿನ ಪ್ರದೇಶಗಳು, ಕೆ.ಐ.ಎ.ಡಿ.ಬಿ ಕೈಗಾರಿಕ ಹೌಸಿಂಗ್ ಲೇಔಟ್, ಎಲ್ & ಟಿ ಪ್ಯಾಕ್ಟರಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

[6/25, 3:41 AM] mysorepathrike: ದೇವಸ್ಥಾನ ಕಾಮಗಾರಿಯನ್ನು ಪೂರ್ಣಗೊಳಿಸಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಮೈಸೂರು. ರ್ನಾಟಕ ವಾರ್ತೆ):- ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಬುಧವಾರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇವಸ್ಥಾನದ ಶುಚಿತ್ವ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಪುರಾತತ್ವ ಇಲಾಖೆಯ ಅನುಮತಿ ಪಡೆದು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಹೇಳಿದರು.
ವಾರ್ಷಿಕವಾಗಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳನ್ನು ‘ಬಿ’ ದರ್ಜೆಯಿಂದ ‘ಎ’ ದರ್ಜೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ತಿ.ನರಸೀಪುರ ತಾಲ್ಲೂಕು ಮೂಗೂರಿನ ಶ್ರೀ ತ್ರಿಪುರ ಸುಂದರಮ್ಮ ದೇವಸ್ಥಾನವನ್ನು ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮುಜರಾಯಿ ಇಲಾಖೆಗೆ ಒಳಪಟ್ಟ ಪ್ರತಿಯೊಂದು ದೇವಸ್ಥಾನದಲ್ಲಿ ವಂಶಪಾರಂಪರ್ಯವಾಗಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ಆಗಮಶಾಸ್ತ್ರ ಕಲಿಯಬೇಕೆಂಬ ಕಡ್ಡಾಯ ನೀತಿಯನ್ನು ರದ್ದುಗೊಳಿಸಲು ಚಿಂತಿಸಲಾಗಿದೆ. ಇದರಿಂದ `ಸಿ’ ದರ್ಜೆಗೆ ಒಳಪಡುವ ಸಣ್ಣಪುಟ್ಟ ದೇವಾಲಯದ ಆರ್ಚಕರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೀನು ಹಿಡಿದು ಜೀವನ ಸಾಗಿಸುತ್ತಿರುವ ಬಡವರಿಗೆ ಸರ್ಕಾರದಿಂದ ದೊರಕುವ ಅನುದಾನವನ್ನು ಪಾರದರ್ಶಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತದೆ. ಅದರಂತೆ ಜಿಲ್ಲೆಯಲ್ಲೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ಪಂಚಾಯತಿಯ ಸುಪರ್ದಿಯಲ್ಲಿ ನಿರ್ವಹಣೆ ಮಾಡಬೇಕು. ಇದರ ಮೇಲ್ವಿಚಾರಕರಾಗಿ ಪಿಡಿಒ ಹಾಗೂ ಇಒ ಗಳ ಉಸ್ತುವಾರಿಯಲ್ಲಿ ಸರ್ಕಾರಕ್ಕೆ ನಷ್ಟವಾಗದಂತೆ ಕಾರ್ಯ ನಿರ್ವಹಿಸಬೆಕು. ಈ ಸಂಬಂಧ ನಮ್ಮ ಇಲಾಖೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.
ಮೀನುಗಾರಿಕೆ ಇಲಾಖೆಯಿಂದ ಫಲಾನುಭವಿಗಳಿಗೆ ದೊರಕುವ ಸರ್ಕಾರದ ಅನುದಾನವನ್ನು ಸ್ಥಳೀಯ ಶಾಸಕರ ಸಮಾಕ್ಷಮದಲ್ಲಿ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ, ಎನ್.ಅಶ್ವಿನ್ ಕುಮಾರ್, ಎಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಉಪವಿಭಾಗಾಧಿಕಾರಿ ಡಾ.ವೆಂಕಟರಾಜು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕಿ ಇರುವ ನೀರಿನ ತೆರಿಗೆ ಪಾವತಿಸಿ: ಮೇಯರ್ ತಸ್ನೀಂ
ಮೈಸೂರು(ಕರ್ನಾಟಕ ವಾರ್ತೆ):- ಬಾಕಿ ಇರುವ ನೀರಿನ ತೆರಿಗೆಯನ್ನು ಸಕಾಲದಲ್ಲಿ ದಯವಿಟ್ಟು ಪಾವತಿಸಿ ಎಂದು ಮಹಾನಗರ ಪಾಲಿಕೆಯ ಮೇಯರ್ ತಸ್ನೀಂ ಅವರು ಮನವಿ ಮಾಡಿದರು.
ಬುಧವಾರ ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಆವರಣದಲ್ಲಿ ನೂತನ ಸಭಾಂಗಣದ ಉದ್ಘಾಟನೆ ಹಾಗೂ ಡಿಜಿಟಲೈಸ್ಡ್ ಪಿ.ಒ.ಎಸ್. ಉಪಕರಣಗಳ ಮೂಲಕ ನೀರಿನ ತೆರಿಗೆ ವಸೂಲಾತಿಗೆ ಮತ್ತು ತೆರಿಗೆ ವಸೂಲಾತಿಯ ಗಸ್ತು ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಿನ ತೆರಿಗೆಯನ್ನು ಪಾವತಿಸಲು ಸಾರ್ವಜನಿಕರು ಗಂಟೆಗಟ್ಟಲೆ ಸಾಲು ಸಾಲಾಗಿ ಕಚೇರಿಯ ಮುಂದೆ ಕಾಯಬೇಕಿತ್ತು. ಇದನ್ನು ತಟೆಗಟ್ಟಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮನೆ ಮನೆಗೆ ಹೋಗಿ ತೆರಿಗೆ ಸಂಗ್ರಹಿಸಲು ನೀರಿನ ತೆರಿಗೆ ಸಂಗ್ರಹ ವಾಹನವನ್ನು ಜಾರಿಗೆ ತರಲಾಗಿದೆ ಎಂದರು.
ಮಹಾನಗರ ಪಾಲಿಕೆಗೆ ನೀರಿನ ತೆರಿಗೆಯು ಸುಮಾರು 180.00 ರೂ. ಕೋಟಿಗಳಷ್ಟು ಬಾಕಿ ಇದ್ದು, ಬಾಕಿ ವಸೂಲಿಗಾಗಿ ಪೂರ್ವ ಮತ್ತು ಪಶ್ಚಿಮ ವಿಭಾಗಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲು ಕಬಿನಿ ಮತ್ತು ಕಾವೇರಿ ಎಂಬ ಹೆಸರಿನ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಅವರು ಮಾತನಾಡಿ, ನೀರಿನ ತೆರಿಗೆಯನ್ನು ಪಾವತಿಸಲು ಇನ್ನೂ ಮುಂದೆ ಕಚೇರಿಗೆ ಅಲೆಯುವಂತಿಲ್ಲ. ಮನೆ ಬಾಗಿಲಿನಲ್ಲೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ಮೂಲಕ ನೀರಿನ ತೆರಿಗೆಯನ್ನು ಪಾವತಿಸಿ ಅಲ್ಲಿಯೇ ಬಿಲ್ ಅನ್ನು ಪಡೆಯಬಹುದು ಮತ್ತು ಆನ್‍ಲೈನ್ ಮೂಲಕವು ಸಹ ತೆರಿಗೆಯನ್ನು ಪಾವತಿಸಬಹುದು ಎಂದು ತಿಳಿಸಿದರು.
ನೀರಿನ ತೆರಿಗೆ ಪಾವತಿಗಾಗಿ ಇಂದು ಎಸ್.ಬಿ.ಐ. ಬ್ಯಾಂಕ್ ವಾಣಿವಿಲಾಸ ನೀರು ಸರಬರಾಜು ನಿಗಮದ ಜೊತೆ ಕೈಜೋಡಿಸಿ 65 ವಾರ್ಡ್‍ಗಳ ಮಾಪಕ ಓದುಗರಿಗೆ ಹಾಗೂ ನಗರದ 15 ಸೇವಾ ಕೇಂದ್ರಗಳಿಗೆ ಪಿ.ಒ.ಎಸ್. ಮಷಿನ್‍ಗಳನ್ನು ಹಂಚಿಕೆ ಮಾಡಿದೆ ಎಂದು ತಿಳಿಸಿದರು.
ನಗರದಲ್ಲಿ ಸುಮಾರು 10,000 ಜನರಿಗಿಂತ ಹೆಚ್ಚು ಜನ ನೀರಿನ ತೆರಿಗೆಯನ್ನು ಪಾವತಿಸಿಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ತೆರಿಗೆ ಪಾವತಿಸಲು ಸಮಯ ನೀಡಲಾಗುವುದು. ಒಂದು ವೇಳೆ ತೆರಿಗೆ ಪಾವತಿಸದಿದ್ದಲ್ಲಿ ಅವರ ಮನೆಗಳಿಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗುವುದು ಎಂದು ಸೂಚನೆ ನೀಡಿದರು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಾರುಕಟ್ಟೆಯನ್ನು ನಿμÉೀಧಿಸಿ ಔಷಧಿ ಸಿಂಪಡಿಸಿದ ಐದು ದಿನಗಳ ನಂತರ ತೆರೆಯಲಾಗುವುದು ಎಂದು ಹೇಳಿದರು.
ಕಾಯಕ್ರಮದಲ್ಲಿ ವಾಣಿವಿಲಾಸ ಕಾರ್ಯಪಾಲಕ ಇಂಜಿನಿಯರ್ ನಾಗರಾಜಮೂರ್ತಿ, ಮಹಾನಗರ ಪಾಲಿಕೆಯ ಇಂಜಿನಿಯರ್ ಬಿಳಿಗಿರಿರಂಗನಾಥ, ವಿರೋಧ ಪಕ್ಷದ ನಾಯಕ ವಿ.ಎಸ್.ಸುಬ್ಬಯ್ಯ, ಪಾಲಿಕೆ ಸದಸ್ಯರು ಹಾಗೂ ವಾಣಿವಿಲಾಸ ನೀರು ಸರಬರಾಜು ನಿಗಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೃಗಾಲಯಕ್ಕೆ ಹರಿದು ಬಂದ ಮತ್ತಷ್ಟು ನೆರವು
ಮೈಸೂರು,ಕರ್ನಾಟಕ ವಾರ್ತೆ):- ಕೋವಿಡ್-19 ಹಿನ್ನೆಲೆ ಲಾಕ್‍ಡೌನ್ ಅವಧಿಯಲ್ಲಿ ಮೃಗಾಲಯ ನಿರ್ವಹಣೆಗೆ ಕಷ್ಟವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯಕ್ಕೆ ಸಾಕಷ್ಟು ನೆರವು ಹರಿದುಬರುತ್ತಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರು ಮೃಗಾಲಯದ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುತ್ತಾರೆ.
ಮೈಸೂರಿನ ಸಿ.ಚಂದ್ರಕಲಾ ಅವರು 30 ಸಾವಿರ ಪಾವತಿಸಿ ಫ್ಲೆಮಿಂಗೊ ಮತ್ತು ಕಾಮನ್ ಆಸ್ಟ್ರಿಚ್, ಎಚ್.ಎಂ.ಭೋಜರಾಜನ್ ಅವರು 10 ಸಾವಿರ ರೂ. ಪಾವತಿಸಿ ಸಿಂಹ-ಬಾಲದ ಮೆಕಾಕ್, ಸುಧಾ ವಿಜಯಸಾರಥಿ ಅವರು 5 ಸಾವಿರ ರೂ. ಪಾವತಿಸಿ ರಿಂಗ್ ಟೈಲಡ್ ಲೆಮುರ್, ಇಡಬ್ಲ್ಯೂಎಸ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಮೈಸೂರು ಇವರು 5 ಸಾವಿರ ರೂ. ಪಾವತಿಸಿ ಗ್ರೇಟ್ ಹಾರ್ನ್‍ಬಿಲ್, ಬೆಂಗಳೂರಿನ ರಾಜೇಶ್ ಜಿ.ಎಲ್ ಅವರು 5 ಸಾವಿರ ಪಾವತಿಸಿ ರೀಸಸ್ ಮೆಕಾಕ್, ಮೈಸೂರಿನ ಸೌಮಿನಿ ವಿಜಯಸಾರಥಿ ಅವರು 3,500 ರೂ ನೀಡಿ ಕಾಳಿಂಗ ಸರ್ಪ, ಕುಶಿ.ಬಿ.ವಿ ಎಂಬುವರು 2 ಸಾವಿರ ರೂ. ಪಾವತಿಸಿ ರೈನ್‍ಬೊ ಲೋರಿಕೀಟ್, ಬೆಂಗಳೂರಿನ ಬಿ.ಎನ್ ಸುಂದರೇಶ್ ಮೂರ್ತಿ ಅವರು 1 ಸಾವಿರ ರೂ. ಪಾವತಿಸಿ ರೆಡ್ ಅವಡವಿಟ್ ಹಾಗೂ ಮೈಸೂರಿನ ಎಸ್.ನೇಮಿಚಂದ್ ಬರೊಲಾ ಅವರು 1 ಸಾವಿರ ರೂ. ನೀಡಿ ಲವ್ ಬರ್ಡ್ ಅನ್ನು ದತ್ತು ಪಡೆದುಕೊಂಡಿರುತ್ತಾರೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಾನಿಗಳು ನೇರವಾಗಿ ಸ್ಯಾನಿಟೈಸರ್ ಮಾಸ್ಕ್ ನೀಡುವುದು ನಿಷೇಧ
ಮೈಸೂರು, ಜೂನ್.24.(ಕರ್ನಾಟಕ ವಾರ್ತೆ):- 2019-2020 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಜೂನ್ 25 ರಿಂದ ಜುಲೈ 3 ವರೆಗೆ ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಬಳಿ ಯಾವುದೇ ವ್ಯಕ್ತಿ, ಸಂಘ ಸಂಸ್ಥೆ, ದಾನಿ ಹಾಗೂ ಇತರರು ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ರಕ್ಷಣಾ ಪರಿಕರ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷೆ ಸಿಬ್ಬಂದಿಗಳಿ ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ರಕ್ಷಣಾ ಪರಿಕರ ಅಥವಾ ಇನ್ಯಾವುದೇ ವಸ್ತುಗಳನ್ನು ನೀಡಲು ಬಯಸಿದ್ದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಅಥವಾ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ನೇರವಾಗಿ ತಲುಪಿಸಲು ಅವಕಾಶ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ
ಮೈಸೂರು,(ಕರ್ನಾಟಕ ವಾರ್ತೆ):- ಜೂನ್ 25 ರಿಂದ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜಿಲ್ಲೆಯ 46 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಪ್ರದೇಶದ ಸುತ್ತಲೂ ಜುಲೈ 03 ವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ವರೆಗೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿರುತ್ತಾರೆ.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಮೈಸೂರು, ಕರ್ನಾಟಕ ವಾರ್ತೆ):- ಕಾರ್ಮಿಕ ಇಲಾಖೆ ವತಿಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಘೋಷಣೆಯಾದ ಫಲಾನುಭವಿಗಳಿಗೆ ತಲಾ 5,000 ರೂ. ಧನಸಹಾಯ ನೀಡಲು ಈಗಾಗಲೇ ಘೋಷಣೆ ಮಾಡಿಲಾಗಿದ್ದು, ಮಂಡಳಿಯಲ್ಲಿ ಲಭ್ಯವಿದ್ದ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳ ವಿವರದ ಆಧಾರದ ಮೇಲೆ ಸಹಾಯಧನ ಬಿಡುಗಡೆ ಮಾಡಲಾಗಿತ್ತು.
ಉಳಿದ ಫಲಾನುಭವಿಗಳಿಂದ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಸಹಾಯಧನ ವಿತರಿಸಲು ಜಿಲ್ಲಾ ಮಟ್ಟದ ಕಾರ್ಮಿಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಂಡಳಿಯ ಫಲಾನುಭವಿಗಳು ಇದುವರೆಗೂ ಇನ್ನೂ ಸಹಾಯಧನ ಪಡೆಯದೇ ಇರುವವರು ಜೂನ್ 30 ರೊಳಗಾಗಿ ಸಹಾಯಧನ ಪಡೆಯಲು ಅಗತ್ಯ ದಾಖಲೆಗಳಾದ ಗುರುತಿನ ಚೀಟಿ ಪ್ರತಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಖುದ್ದಾಗಿ ಅಥವಾ ಕಾರ್ಮಿಕ ಸಂಘಗಳ ಮುಖಾಂತರ ತಲುಪಿಸುವಂತೆ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗಸರು ಹಾಗೂ ಕ್ಷೌರಿಕರಿಗೆÉ 5,000 ಪರಿಹಾರ ಧನ
.(ಕರ್ನಾಟಕ ವಾರ್ತೆ):- ಕೋವಿಡ್-19 ಹಿನ್ನೆಲೆ ಲಾಕ್‍ಡೌನ್ ಅವಧಿಯಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೇ ಆದಾಯವನ್ನು ಕಳೆÀದುಕೊಂಡಿರುವ ಅಗಸರು ಹಾಗೂ ಕ್ಷೌರಿಕರಿಗೆÉ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ 5,000 ರೂ. ಗಳ ಪರಿಹಾರ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
18 ರಿಂದ 65 ವರ್ಷದೊಳಗಿನ ಕ್ಷೌರಿಕ ಮತ್ತು ಅಗಸ ವೃತ್ತಿಯಲ್ಲಿ ತೊಡಗಿರುವವರು ಜೂನ್ 30 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು.
ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 0821-2343990 ಅನ್ನು ಸಂಪರ್ಕಿಸುವಂತೆ ಮೈಸೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ.ಜಾತಿ ಹಾಗೂ ಪ.ಪಂಗಡ ಮಹಿಳೆಯರಿಗೆ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮೈಸೂರು,(ಕರ್ನಾಟಕ ವಾರ್ತೆ):- ಉದ್ಯೋಗಿನಿ ಯೋಜನೆಯಡಿ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ” ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿಯ 23 ಮಹಿಳೆಯರಿಗೆ ಮತ್ತು 18 ಪರಿಶಿಷ್ಟ ಪಂಗಡದ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ರೂ.1.00 ಲಕ್ಷದಿಂದ ರೂ. 5.00ಲಕ್ಷಗಳವರೆಗೆ ಸಾಲ ಸೌಲಭ್ಯ ಮತ್ತು ನಿಗಮದಿಂದ ಶೇ.70% ಅಥವಾ ಗರಿಷ್ಠ ರೂ. 3.50 ಲಕ್ಷ ಸಹಾಯಧನ ನೀಡಲಾಗುವುದು.
ಅರ್ಜಿಗಳನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 10 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2495432/2498031 ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ. ಜಾತಿ ಮತ್ತು ಪ. ಪಂಗಡದ ಸ್ತ್ರೀಶಕ್ತಿ ಗುಂಪಿಗೆ ಬಡ್ಡಿ ರಹಿತ ಸಾಲ
ಮೈಸೂರು, ಜೂನ್.24.(ಕರ್ನಾಟಕ ವಾರ್ತೆ):- 2019-20ನೇ ಸಾಲಿನಲ್ಲಿ ಕಿರುಸಾಲ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿ ಸ್ತ್ರೀಶಕ್ತಿ ಗುಂಪಿಗೆ ರೂ.1.00 ಲಕ್ಷದಿಂದ ರೂ.5.00 ಲಕ್ಷಗಳ ವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡಲು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ತ್ರೀ ಶಕ್ತಿ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಸ್ತ್ರೀಶಕ್ತಿ ಗುಂಪುಗಳು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 10 ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2495432/2498031 ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದಿಬದಿಯ ಪ.ಜಾತಿ ಹಾಗೂ ಪ.ಪಂಗಡ ಮಹಿಳಾ ವ್ಯಾಪಾರಿಗಳಿಗೆ 10 ಸಾವಿರ ಪ್ರೋತ್ಸಾಹ ಧನ ಅರ್ಜಿ ಆಹ್ವಾನ
ಮೈಸೂರು, .(ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2019-20ನೇ ಸಾಲಿನಲ್ಲಿ “ಸಮೃದ್ಧಿ” ಯೋಜನೆಯ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಠ ಜಾತಿ ಉಪ ಯೋಜನೆಯಡಿ ಬಳಕೆಯಾಗದ ಅನುದಾನದಡಿ ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮಹಿಳಾ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಹಾಗೂ ಮಹಿಳೆಯರ ನಿರುದ್ಯೋಗ ಸಮಸ್ಯೆಯ ನಿವಾರಣೆಗಾಗಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ದಮನಿತ ಮಹಿಳಿಯರಿಗೆ 10 ಸಾವಿರ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಿದೆ.
18 ರಿಂದ 60 ವರ್ಷದೊಳಗಿನ ಮಹಿಳೆಯರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 10 ರೊಳಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0821-2495432/2498031 ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆಗಳು ಸ್ಥಗಿತ
ಮೈಸೂರು, (ಕರ್ನಾಟಕ ವಾರ್ತೆ):- ಕೋವಿಡ್ ಪ್ರಕರಣಗಳು ಹೆಚ್ಚಗುತ್ತಿರುವ ಹಿನ್ನಲೆ ಸಾರ್ವಜನಿಕರು ಮತ್ತು ವ್ಯಾಪರಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ನಗರದಲ್ಲಿರುವ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೇಟ್ ಮತ್ತು ಬೋಟಿ ಬಜಾರ್ ಮಾರುಕಟ್ಟೆಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲು ಜೂನ್ 25 ರಿಂದ ನಾಲ್ಕು ದಿನಗಳ ಕಾಲ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ತ್ ಹೆಗಡೆ ಅವರು ಆದೇಶಿಸಿರುತ್ತಾರೆ.
ನಾಲ್ಕು ದಿನಗಳ ನಂತರ ಮಾರುಕಟ್ಟೆ ಪ್ರಾರಂಭವಾದ ನಂತರ ವ್ಯಾಪಾರಸ್ಥರು ವ್ಯಾಪರ ಮಾಡುವ ಸ್ಥಳದಲ್ಲಿ ಸೂಕ್ತ ರೀತಿಯಲ್ಲಿ ಮಾರ್ಕಿಂಗ್ ಮಾಡುವ ಮೂಲಕ ಗ್ರಾಹಕರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡವುದು. ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವುದು, ಗ್ರಾಹಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು, ವ್ಯಾಪಾರ ಮಾಡುವ ಸ್ಥಳದಲ್ಲಿ ಸ್ಯಾನಿಟೈಸರ್ ಉಪಯೋಗಿಸುವುದು, ವ್ಯಾಪಾರ ಮಾಡುವ ಸ್ಥಳಗಳಲ್ಲಿ ಕ್ರಿಮಿನಾಶಕ ಸಿಂಪಡಿ ಶುಚಿಯಾಗಿಟ್ಟಿಕೊಳ್ಳುವಂತೆ ನಗರ ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತಿಮ ನೋಟೀಸ್ ಹಾಗೂ ಬಹಿರಂಗ ಹರಾಜು
ಮೈಸೂರು, (ಕರ್ನಾಟಕ ವಾರ್ತೆ):- ಮೈಸೂರು ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ತೆರಿಗೆ ಪಾವತಿಸದೆ ಇರುವವರು ಹಾಗೂ ಇತರೆ ವಾಹನಗಳ ತೆರಿಗೆ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಿಕೊಂಡು ವಾಹನ ಬಿಡಿಸಿಕೊಳ್ಳುವಂತೆ ಅನೇಕ ಭಾರಿ ನೋಟೀಸ್ ಅನ್ನು ನೀಡಿದ್ದರು ವಾಹನಗಳ ತೆರಿಗೆ ಪಾವತಿಸಿ ವಾಹನ ಬಿಡಿಸಿಕೊಂಡಿರುವುದಿಲ್ಲ.
KA45/5493-MAXI/CAB-2012, KA55/2966- MAXI/CAB -2012, KA11A/7138- MAXI/CAB -2013, KA42A/0770- MAXI/CAB -2013, KA55/5141 MAXI/CAB -2014, KA10/7267-MOTAR/CAB-2012, KA55/4426- MAXI/CAB -2013, KA10/8766- MAXI/CAB -2014 ವಾಹನಗಳ ಮಾಲೀಕರಿಗೆ ಹಾಗೂ ಕಂತು ಕರಾರುದಾರರಿಗೆ ವಾಹನಗಳ ತೆರಿಗೆ ಪಾವತಿಸಿ ವಾಹನಗಳನ್ನು ಬಿಡಿಸಿಕೊಳ್ಳಲು ಸೂಚಿಸಲಾಗಿದೆ. ತಪ್ಪಿದಲ್ಲಿ ವಾಹನಗಳನ್ನು ವಾರಸುದಾರರಿಲ್ಲದ ವಾಹನಗಳೆಂದು ಪರಿಗಣಿಸಿ ಜುಲೈ 09 ರಂದು ಬೆಳಿಗ್ಗೆ 11 ಗಂಟೆಗೆ ಕಛೇರಿಯಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಮೈಸೂರು ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜಿಲ್ಲಾ ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆ ಜೂನ್ 26ಕ್ಕೆ ಮುಂದೂಡಿಕೆ
ಮೈಸೂರು, (ಕರ್ನಾಟಕ ವಾರ್ತೆ):- 2020-21ನೇ ಸಾಲಿನ ಮೊದಲ ತ್ರೈಮಾಸಿಕದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ಜೂನ್ 26 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಾಗೇಶ್ ಎಂ. ಅವರಿಗೆ ಪಿಎಚ್.ಡಿ. ಪದವಿ
ಮೈಸೂರು, ಜೂನ್.24.(ಕರ್ನಾಟಕ ವಾರ್ತೆ):- ಡಾ.ಟಿಬಿಬಿಎಸ್‍ವಿ ರಮಣಯ್ಯ ಅವರ ಮಾರ್ಗದರ್ಶನದಲ್ಲಿ ನಾಗೇಶ್ ಎಂ. ಅವರು ಸಂಶೋಧನೆ ನಡೆಸಿ ಸಾಧರಿಪಡಿಸಿದ “Corporate social Responsibility (A study of the implementation of Corporate Social Responsibility programmes initiated by organizations Situated in and Around Mysore)” ಕುರಿತು ಸಮಾಜ ಕಾರ್ಯ ವಿಷಯದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಅಂಗೀಕರಿಸಿದೆ.
ನಾಗೇಶ್ ಎಂ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಫೋಟೋ ಲಗತ್ತಿಸಿದೆ)

ಜೂನ್ 26 ರಂದು ಕುಂದು ಕೊರತೆ ಸಭೆ
ಮೈಸೂರು, ಜೂನ್.24.(ಕರ್ನಾಟಕ ವಾರ್ತೆ):- ಟಿ.ನರಸೀಪುರ ತಾಲ್ಲೂಕಿನ ವಿದ್ಯುತ್ ಸರಬರಾಜು ಉಪವಿಭಾಗಳಲ್ಲಿ ಅಧೀಕ್ಷಕ ಇಂಜಿನಿಯರ್, ಮೈಸೂರು ಕಾರ್ಯ ಮತ್ತು ಪಾಲನಾ ವೃತ್ತ, ಮೈಸೂರು ಇವರ ಅಧ್ಯಕ್ಷತೆಯಲ್ಲಿ ಜೂನ್ 26 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಬನ್ನೂರಿನ ಚಾಮುಂಡಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಿದ್ದು, ಸಭೆಗೆ ಬನ್ನೂರು ಉಪವಿಭಾಗದ ಗ್ರಾಹಕರು ಭಾಗವಹಿಸುವುದು.
ಮಧ್ಯಾಹ್ನ 3 ಗಂಟೆಗೆ ಟಿ.ನರಸೀಪುರದ ಚಾಮುಂಡಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಿದ್ದು, ಟಿ.ನರಸೀಪುರ ಉಪವಿಭಾಗದ ಗ್ರಾಹಕರು ಭಾಗವಹಿಸಿ ವಿದ್ಯುತ್ ಸಂಬಂಧಿತ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಂಜನಗೂಡು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ವ್ಯತ್ಯಯ ಇ0ದು
ಮೈಸೂರು,.(ಕರ್ನಾಟಕ ವಾರ್ತೆ):- ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಜೂನ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರಗೆ 66/11 ಕೆ.ವಿ. ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರದ Archelogy ಮತ್ತು ಮಯೂರ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಹೆಬ್ಬಾಳ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ವಾಣಿವಿಲಾಸ ಲೇಔಟ್, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಲೇಔಟ್, ಅಭಿಷೇಕ್ ವೃತ್ತ, ಎಂ.ಜಿ.ಕೊಪ್ಪಲು, ಹೊರ ವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, Archelogy ಆಫೀಸ್ ಸುತ್ತಮುತ್ತಲಿನ ಪ್ರದೇಶಗಳು, ಕೆ.ಐ.ಎ.ಡಿ.ಬಿ ಕೈಗಾರಿಕ ಹೌಸಿಂಗ್ ಲೇಔಟ್, ಎಲ್ & ಟಿ ಪ್ಯಾಕ್ಟರಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
[6/25, 3:43 AM] mysorepathrike: ಜೂನ್ 26 ರಂದು ಕುಂದು ಕೊರತೆ ಸಭೆ
ಮೈಸೂರು, .(ಕರ್ನಾಟಕ ವಾರ್ತೆ):- ಟಿ.ನರಸೀಪುರ ತಾಲ್ಲೂಕಿನ ವಿದ್ಯುತ್ ಸರಬರಾಜು ಉಪವಿಭಾಗಳಲ್ಲಿ ಅಧೀಕ್ಷಕ ಇಂಜಿನಿಯರ್, ಮೈಸೂರು ಕಾರ್ಯ ಮತ್ತು ಪಾಲನಾ ವೃತ್ತ, ಮೈಸೂರು ಇವರ ಅಧ್ಯಕ್ಷತೆಯಲ್ಲಿ ಜೂನ್ 26 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಬನ್ನೂರಿನ ಚಾಮುಂಡಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಿದ್ದು, ಸಭೆಗೆ ಬನ್ನೂರು ಉಪವಿಭಾಗದ ಗ್ರಾಹಕರು ಭಾಗವಹಿಸುವುದು.
ಮಧ್ಯಾಹ್ನ 3 ಗಂಟೆಗೆ ಟಿ.ನರಸೀಪುರದ ಚಾಮುಂಡಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದದಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ಆಯೋಜಿಸಿದ್ದು, ಟಿ.ನರಸೀಪುರ ಉಪವಿಭಾಗದ ಗ್ರಾಹಕರು ಭಾಗವಹಿಸಿ ವಿದ್ಯುತ್ ಸಂಬಂಧಿತ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಂಜನಗೂಡು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Share