ಮೈಸೂರು, ಪಾಲಿಕೆಗೆ ದೂರು ಸಲ್ಲಿಸಿದರೂ ಪ್ರಯೋಜನ ಇಲ್ಲ

Share

ವಾರ್ಡ್ ನಂಬರ್ 15 ಕೆಸರೆ ಕುರಿಮಂಡಿ ವೃತ್ತದ ಪಕ್ಕದಲ್ಲಿರುವ ಪಾರ್ಕಿನ ಒಳಗಡೆ ಕಸದ ರಾಶಿ ಹಾಗೂ ಪಾರ್ಕಿನ ಒಳಗಡೆ ಇರುವ ಸಮುದಾಯಭವನದ
ಅವ್ಯವಸ್ಥೆ , ಈಗಾಗಲೇ ಕರೋನಾ ಎಂಬ ಮಹಾಮಾರಿ ಯಿಂದ ತತ್ತರಿಸಿರುವ ಜನತೆಗೆ ಈ ಕಸದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿಂದ ಈ ಭಾಗದ ಜನರು ಆತಂಕದಲ್ಲಿ ಬದುಕುತ್ತಿದ್ದಾರೆ ಪಾರ್ಕಿನೊಳಗೆ ಇರುವ ಈ ಕಸವನ್ನು ತೆಗೆಸಲು ಪಾಲಿಕೆಯ ಅಧಿಕಾರಿಗಳಿಗೆ ಅದರ ವ್ಯಾಪ್ತಿಗೆಬರುವ ಎಲ್ಲರಿಗೂ ದೂರು ಸಲ್ಲಿಸಿದ್ದರು ಯಾವುದೇ ದೂರಿಗೂ ಸ್ಪಂದಿಸಿಲ್ಲ ,
ಹಾಗೂ ಈ ಸಮುದಾಯ ಭವನದ ಕಟ್ಟಡ ಬಾಗಿಲು ಕಿಟಕಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಮಾಡಿದ್ದಾರೆ ಈ ಒಂದು ಅವ್ಯವಸ್ಥೆ ಈ ಭಾಗದಲ್ಲಿ ಪುಂಡ ಹುಡುಗರ ಪಾಲಾಗಿದೆ ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕಾಗಿ ವಿನಂತಿ.

ಇಂತಿ ನಿಮ್ಮ ವಿಶ್ವಾಸಿ
ಕಾರ್ತಿಕ್ ಕುಮಾರ್


Share