ಮೈಸೂರು ಪಾಲಿಕೆ ಆಡಳಿತ ಎಲ್ಲಿದೆ ವಿಕ್ರಮ್ ಅಯ್ಯಂಗಾರ್

Share

ಮಳೆ ಬಿಸಲು ಗಾಳಿ
ಪ್ರಕೃತಿಯ ನಿಯಮ

ಮೈಸೂರು ಪರಿಸರ ಸಂರಕ್ಷಣೆ, ಜನಸಾಮಾನ್ಯರ ಕಾಳಜಿ ರಕ್ಷಣೆ ಕಡೆ ಯಾಕಿಲ್ಲ ಅಧಿಕಾರಿಗಳ ಕ್ರಮ? ತೆಗೆದುಕೊಂಡಿದ್ದಾರೆ, ಎಂದು ಸಾಮಾಜಿಕ ಕಾರ್ಯಕರ್ತರಾದ ವಿಕ್ರಮ ಅಯ್ಯಂಗಾರ್ ರವರು ನಗರಪಾಲಿಕೆ ಆಡಳಿತವನ್ನು ಪ್ರಶ್ನಿಸಿದ್ದಾರೆ
ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ನಗರ ಪಾಲಿಕೆ ರಸ್ತೆಗಳಲ್ಲಿನ ದೊಡ್ಡ ಮರಗಳನ್ನು ಹೆಚ್ಚಾಗಿ ಗಮನಿಸಬೇಕಿದೆ.
ಗ್ರಾಮಾಂತರ ಬಸ್ ನಿಲ್ದಾಣದ ಸುತ್ತ, ಚಾಮರಾಜ ಜೋಡಿ ರಸ್ತೆ ಹೀಗೆ ಜನನಿಬಿಡ ರಸ್ತೆಗಳಲ್ಲಿ ಬೃಹತ್ ಮರಗಳು ಜನರಿಗೆ ಗಾಳಿ-ನೆರಳು ನೀಡುತ್ತಿವೆ, ಆದರೆ ಮಳೆಗಾಲದಲ್ಲಿ ಪಾಲಿಕೆಯ ನಿರ್ಲಕ್ಷ್ಯದಿಂದ ಜನ ಹಾಗೂ ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.

ಇಂದು ಚಾಮುಂಡಿಪುರದ ಹೋಟೆಲ್ ಮುಂಭಾಗ ನಿಂತಿದ್ದ ಗ್ರಾಹಕರ ಕಾರಿನ ಮೇಲೆ ಕೊಂಬೆ ಬಿದ್ದು ಗಾಜು ಒಡೆದಿದೆ, ಅದೃಷ್ಟವಷಾತ್ ಮಾಲೀಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಗರದಲ್ಲಿ ಬೃಹತ್ ಮರಗಳು ಕೇವಲ ಬೆರಳೆಣಿಕೆಯಷ್ಟಿವೆ, ಅದನ್ನೂ ಗಮನ ಹರಿಸದಿದ್ದರೆ ಹೇಗೆ? ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ಪಾಲಿಕೆ ಎಚ್ಚೆತ್ತುಕೊಂಡು ಕಾರ್ಯಮುಖಿಯಾಗಬೇಕಿದೆ.

ಇಂತಿ
ವಿಕ್ರಂ ಅಯ್ಯಂಗಾರ್ ಸಾಮಾಜಿಕ ಕಾರ್ಯಕರ್ತರು ಮೈಸೂರು


Share