ಮೈಸೂರು: ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ

Share

ಮೈಸೂರು , ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ವಲಯ ಆಯುಕ್ತರ ಆದೇಶದಂತೆ ದಿನಾಂಕ 25-09-2020 ರಂದು ವಲಯ ಕಛೇರಿ 6ಕ್ಕೆ ಒಳಪಡುವ ವಾರ್ಡ್ ಸಂಖ್ಯೆ 41ರ ಕೆ ಟಿ ಸ್ಟ್ರೀಟ್ ದೊಡ್ಡ ಒಕ್ಕಲಗೇರಿ ವ್ಯಾಪ್ತಿಯಲ್ಲಿನ ಉದ್ದಿಮೆ ಮಳಿಗೆಗಳಲ್ಲಿ ಉದ್ದಿಮೆ ಪರವಾನಿಗೆ ಶುಲ್ಕ ವಸೂಲಾತಿ ಕಾರ್ಯಾಚರಣೆಯನ್ನು ವಾರ್ಡಿನ ಆರೋಗ್ಯ ನಿರೀಕ್ಷಕರು, ಕಂದಾಯ ಪರಿಶೀಲಕರು, ಲಷ್ಕರ್ ಪೊಲೀಸ್ ಠಾಣೆಯ ಗರುಡ ಸಿಬ್ಬಂದಿಗಳು ಹಾಗೂ ಮೈ ಮ ಪಾಲಿಕೆಯ ಇತರೆ ಸಿಬ್ಬಂದಿಗಳು ನಡೆಸುತ್ತಿರುವ ಸಮಯದಲ್ಲಿ ಮಳಿಗೆಯೊಂದರ ವ್ಯಕ್ತಿಯು ಪಾಲಿಕೆಯ ಕರ್ತವ್ಯನಿರತ ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ನಡೆಸಿರುತ್ತಾರೆ ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ದೂರನ್ನು ದಾಖಲಿಸಿರುತ್ತಾರೆ ಪಾಲಿಕೆ ಪ್ರಕಟಣೆ ತಿಳಿಸಿದೆ


Share