ಮೈಸೂರು ,ಪೇಪರ್ ಬ್ಯಾಗ್ ದಿನಾಚರಣೆ

395
Share

ಪೇಪರ್ ಬ್ಯಾಗ್ ದಿನಾಚರಣೆ ಅಂಗವಾಗಿ ಪರಿಸರ ಸ್ನೇಹಿ ತಂಡದ ವತಿಯಿಂದ ಜಲಪುರಿ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬ್ಯಾಗ್ ಬಿಡಿ ಪೇಪರ್ ಬ್ಯಾಗ್ ಇಡೀ ಎಂಬ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪೇಪರ್ ಬ್ಯಾಗ್ ವಿತರಿಸಲಾಯಿತು ನಂತರ
ಮಾತನಾಡಿದ ಎನ್ ಆರ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ಹವಮಾನ ಬದಲಾವಣೆ ಪರಿಸರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಹೋರಾಡುವ ನಿಟ್ಟಿನಿಂದ ಪ್ರತಿ ವರ್ಷ ಜುಲೈ 12ರಂದು ಪೇಪರ್ ಬ್ಯಾಗ್ ದಿನವನ್ನು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ .ಪ್ಲಾಸ್ಟಿಕ್ ಬ್ಯಾಗ್ ಗಳ ಬದಲು ಪರಿಸರ ಸ್ನೇಹಿ ಪೇಪರ್ ಕೈಚೀಲವನ್ನು ಬಳಕೆಯನ್ನು ಉತ್ತೇಜಿಸುವುದು ಪೇಪರ್ ಬ್ಯಾಗ್ ದಿನ ಆಚರಣೆ ಉದ್ದೇಶವಾಗಿದ್ದು.ಹಾಗಾಗಿ ನಮ್ಮ ಪರಿಸರ ಸ್ನೇಹಿ ತಂಡದ ವತಿಯಿಂದ ಸಾರ್ವಜನಿಕರಿಗೆ ಪೇಪರ್ ಬ್ಯಾಗನ್ನು ವಿತರಿಸಲಾಯಿತು ,
ಪೇಪರ್ ಬ್ಯಾಗ್ ತನ್ನದೇ ಆದ ಇತಿಹಾಸ ಇದೆ .1852 ರಲ್ಲಿ ಮೊದಲ ಬಾರಿ ಅಮೆರಿಕದಲ್ಲಿ ಪೇಪರ್ ಬ್ಯಾಗ್ ಗಳ ಬಳಕೆ ಆರಂಭವಾಯಿತು. ಇಂದು ವಿಶ್ವದೆಲ್ಲೆಡೆ ಕೋಟ್ಯಂತರ ಮಂದಿ ಪೇಪರ್ ಬ್ಯಾಗ್ ಗಳನು ಬಳಕೆ ಮಾಡುತ್ತಿದ್ದಾರೆ.ಪೇಪರ್ ಬ್ಯಾಗ್ ಗಳನ್ನು ಮರು ಬಳಕೆ ಮಾಡಬಹುದಾಗಿದ್ದು ಮಣ್ಣಿನಲ್ಲಿ ಕರೆಯುವುದರಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ ಹೀಗಾಗಿ ಇಂಥ ಪೇಪರ್ ಬ್ಯಾಗ್ ಗಳು ವ್ಯಾಪಕವಾಗಿ ಬಳಕೆ ಮಾಡಬೇಕು .ದೇಶಕ್ಕೆ ಹಸಿರು ವಲಯ ಹೆಚ್ಚಾಗಿದ್ದರೆ ಮಾತ್ರ ಮನುಷ್ಯನ ದೇಹ ಆರೋಗ್ಯವಾಗಿ ಉಸಿರಾಡಲು ಸಾಧ್ಯ ಹಾಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬಟ್ಟೆ ಪೇಪರ್ ಬ್ಯಾಗ್ ಬಳಸಲು ಮುಂದಾಗಬೇಕು ಇವತ್ತಿನ ದಿನಗಳಲ್ಲಿ ವಿಮೆ ಮಾಡಿಸಲು ಮುಂಗಡ ಆರೋಗ್ಯ ಚಿಕಿತ್ಸೆಗೆ ಹಣ ಠೇವಣಿ ಮಾಡುವ ಬದಲು ಮನೆಗೊಂದು ಗಿಡ ನೆಟ್ಟು ಮರ
ಅದು ಕುಟುಂಬಕ್ಕೆ ಗಾಳಿ ಮತ್ತು ನೆರಳು ಕೊಟ್ಟು ಕಾಪಾಡುತ್ತದೆ ಎಂದರು,
ಈ ಕಾರ್ಯಕ್ರಮದಲ್ಲಿ ಬಿಜೆಪಿ ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ರವರು, ಪಂಕಜ್ ತಂಡದ ಕಾರ್ಯದರ್ಶಿ ಜಯಂತ್,ಕಿಶೋರ್,ಆನಂದ್ ಹಾಗೂ ಮುಂತಾದ ತಂಡದ ಸದಸ್ಯರು ಭಾಗವಹಿಸಿದ್ದರು.


Share