ಮೈಸೂರು: ಬಿಕೊ ಎನ್ನುತ್ತಿರುವ ಚಾಮುಂಡಿ ಬೆಟ್ಟ ,ಇತಿಹಾಸ ಸೃಷ್ಟಿ

718
Share

ಮೈಸೂರು ,ನಾಡ ದೇವತೆ ಚಾಮುಂಡಿಬೆಟ್ಟದ ದೇವರ ದರ್ಶನಕ್ಕೆ ಅವಕಾಶ ಇಲ್ಲದೆ ಇರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಇತಿಹಾಸ ಸೃಷ್ಟಿ ಯಾಗಿದೆ. ಬೆಟ್ಟಕ್ಕೆ ತೆರಳುವ ಮೂರು ಮಾರ್ಗಗಳನ್ನು ಸಂಪೂರ್ಣವಾಗಿ ಜಿಲ್ಲಾ ಆಡಳಿತ ಬಂದು ಮಾಡಿದೆ.

ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ಕೋವಿಡ 19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ಹಾಗೂ ಉತ್ತನಹಳ್ಳಿಯ ಶ್ರಿ ಜ್ವಾಲಾತ್ರಿಪುರ ಸುಂದರಮ್ಮಣಿ ದೇವಾಲಗಳಲ್ಲಿ ಅಷಾಢ ಶುಕ್ರವಾರಗಳಂದು ಹಾಗೂ ಪ್ರಮುಖ ದಿನಗಳಂದು ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿಷೇಧಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆದೇಶಿರುತ್ತಾರೆ.
ಕೋರೊನಾ ವೈರಸ್ ಹರಡದಂತೆ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗೂ ಉತ್ತನಹಳ್ಳಿಯ ಜ್ವಾಲಾತ್ರಿಪುರ ಸುಂದರಮ್ಮಣಿ ದೇವಾಲಯಗಳಲ್ಲಿ ಆಷಾಢ ಶುಕ್ರವಾರಗಳಂದು ಹಾಗೂ ಜುಲೈ 13 ರಂದು ಇರುವ ಅಮ್ಮನವರ ಜನ್ಮೋತ್ಸವ ದಂದು ಹಾಗೂ ಜುಲೈ 14 ರಂದು ಸಾರ್ವಜನಿಕರ ದೇವಾಲಯ ಪ್ರವೇಶವನ್ನು ನಿಷೇಧಿಸಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ ಬೆಟ್ಟಕ್ಕೆ ಗ್ರಾಮಸ್ಥರನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.


Share