ಅಭಿನಂದನೆಗಳು ಇಂಡಿಯಾ!!! ಚಂದ್ರಯಾನ – 3 *ವಿಕ್ರಂ ಲ್ಯಾಂಡರ್* *ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಇಳಿದಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಕಿರೀಟಕ್ಕೆ ಮತ್ತೊಂದು ಸಾಧನೆಯ ಗರಿ ಸೇರಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಸಿಹಿ ವಿತರಿಸಿ ವಿಜ್ಞಾನಿಗಳಿಗೆ ಜೈಕಾರ ಘೋಷಣೆ ಕೂಗುತ್ತಾ ಸಂಭ್ರಮಿಸಿದರು
ಬಲಿಕ ಮಾಧ್ಯಮ ಜೊತೆ ಮಾತನಾಡಿದ
ಮಹಾಪೌರರಾದ ಶಿವಕುಮಾರ್ ಮಾತನಾಡಿ
ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿ ಚಂದ್ರನ ದಕ್ಷಿಣ ಭಾಗದಲ್ಲಿ ಸುರಕ್ಷಿತವಾಗಿ ಚಂದ್ರನ ಸ್ಪರ್ಶ ಆಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಡೀ ರಾಷ್ಟ್ರ ಮತ್ತು ಪ್ರಪಂಚದ ಎಲ್ಲಾ ದೇಶಗಳು ಕಾತುರದಿಂದ ಕಾದು ಕುಳಿತಿದ್ದ ಈ ದಿನ ಅವಿಸ್ಮರಣೀಯ, ಐತಿಹಾಸಿಕ ದಿನ, ಸುವರ್ಣ ಅಕ್ಷರಗಳಲ್ಲಿ ಉಲ್ಲೇಖ ಮಾಡುವಂತಹ ಈ ಉಡಾವಣೆಯ ಯಶಸ್ವಿ ನಮ್ಮ ಇಸ್ರೋ ವಿಜ್ಞಾನಿಗಳ ಸುಮಾರು ಮೂರು ವರ್ಷಗಳ ಅವಿರತ ಶ್ರಮದ ಫಲವಾಗಿರುತ್ತದೆ.
ಇತ್ತೀಚಿಗೆ ರಷ್ಯಾ ದೇಶದ ಚಂದ್ರಯಾನ ಉಡಾವಣೆ ವಿಫಲವಾದ ಮೇಲೆ, ಎಲ್ಲ ದೇಶಗಳ ಚಿತ್ತ ಭಾರತದತ್ತ ಕೇಂದ್ರೀಕರಿಸಲಾಗಿತ್ತು, ಇವತ್ತು ಇಡೀ ಜಗತ್ತು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಹೊಗಳುತ್ತಿರುವುದು ನೋಡುತ್ತಿದ್ದರೆ ನಮ್ಮ ದೇಶದ ಗರಿಮೆ ಪ್ರಪಂಚದಲ್ಲಿ ಎತ್ತರಕ್ಕೆ ಏರಿ ಒಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿರುತ್ತದೆ. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಯಶಸ್ವಿ ಉಡಾವಣೆ ಪ್ರಪಂಚದಲ್ಲಿ ಭಾರತಕ್ಕೆ ಇನ್ನಷ್ಟು ಹೆಸರು ಮತ್ತು ಕೀರ್ತಿ ಲಭಿಸಿದೆ ಎಂದರೆ ತಪ್ಪಾಗಲಾರದು.
ಇದೇ ಸಂದರ್ಭದಲ್ಲಿ ಮಹಾಪೌರರಾದ ಶಿವಕುಮಾರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಮಾಧ್ಯಮ ವಕ್ತಾರರಾದ ಕೇಬಲ್ ಮಹೇಶ್, ಲಕ್ಷ್ಮಿದೇವಿ, ವಿಕ್ರಮ್ ಅಯ್ಯಂಗಾರ್, ಸಂದೇಶ್ ಪವರ್, ರಾಕೇಶ್ ಭಟ್,ಬೈರತಿ ಲಿಂಗರಾಜು, ಕೆ ಪಿ ಮಧುಸೂದನ್, ಅಜಯ್ ಶಾಸ್ತ್ರಿ, ಯಶ್ವಂತ್ ಕುಮಾರ್, ಮಹೇಶ್ ಮಡವಾಡಿ, ಎಂ ವಿ ನಾಗೇಂದ್ರ ಬಾಬು, ಕಡಕೋಳ ಜಗದೀಶ್, ರಾಜೇಂದ್ರ, ಪ್ರಭಾಕರ್, ಟಿ ಎಸ್ ಅರುಣ್, ಚಕ್ರಪಾಣಿ, ದೂರ ರಾಜಣ್ಣ,ಜಯ ಸಿಂಹ ಶ್ರೀಧರ್, ದೀಪಕ್, ಹಾಗೂ ಇನ್ನಿತರರು ಹಾಜರಿದ್ದರು