ಮೈಸೂರು ಬಿಜೆಪಿ ಮಹಿಳೆಯರಿಂದ ಪ್ರತಿಭಟನೆ

 

ಉಡುಪಿಯ” ನೇತ್ರಾ ಜ್ಯೋತಿ ಪಾರಮೆಡಿಕಲ್” ಕಾಲೇಜಿನಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣದ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಟಿ ಎಸ್ ಶ್ರೀವತ್ಸ
ಉಡುಪಿಯ ಮಹಿಳಾ ಕಾಲೇಜಿನಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ನಿರಾದ,1.ಆಲಿಯ 2.ಶಬಾನ 3.ಸೈಫ
ಈ ಮೂರು ಜನ ಮುಸಲ್ಮಾನ ವಿದ್ಯಾರ್ಥಿನಿಯರು ಸೇರಿ ಇಂದು ವಿದ್ಯಾರ್ಥಿನಿಯ ಬಾತ್ ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೋ ಮಾಡಿ ತಮ್ಮ ಗ್ರೂಪ್ ಗಳಿಗೆ ಕಳುಹಿಸಿ, ಸಂತಸ ಮೆರೆದಿದ್ದ ಘಟನೆ ಬೆಳಕಿಗೆ ಬಂದಿದ್ದು,
ಈ ವಿಚಾರವಾಗಿ “ರಶ್ಮಿ ಸಾವಂತ್” ಎಂಬುವ ವಿದ್ಯಾರ್ಥಿನಿಯ ಹೋರಾಟದಿಂದ ಮತ್ತು ಮಾಧ್ಯಮದವರ ಸಹಾಯದಿಂದ ಈ ಪ್ರಕರಣ ಹೊರ ಬಂದಿದೆ.
ಜುಲೈ 19ನೇ ತಾರೀಕಿನಿಂದ ಇಂತಹ ಪ್ರಕರಣ ಈ ಕಾಲೇಜಿನಲ್ಲಿ ನಡೆದಿದೆ ಎಂದರು ಕೂಡ ಯಾವ ರೀತಿಯ ಕಾನೂನು ಕ್ರಮ ಜರುಗಿಸದೆ ಇದ್ದದ್ದು ಕೂಡ ಅಲ್ಲಿಯ ಆಡಳಿತ ಮತ್ತು ಶಿಕ್ಷಣ ಸಂಸ್ಥೆಗೆ ಅವಮಾನ,
ಯಾವಾಗ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಶಾಸಕರ ಸಹಾಯದಿಂದ ಪ್ರಕರಣ ಬೆಳಕಿಗೆ ಬಂದ ಮೇಲೆ, ಈ ಕೃತ್ಯಕ್ಕೆ ತಿರುವ ಪಡೆದಿದೆ
ರಾಷ್ಟ್ರೀಯ ಮಹಿಳಾ ಆಯೋಗ ಪ್ರವೇಶ ಮಾಡಿದ ನಂತರ ಆ ಮೂರು ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಾಗಿದೆ. ಮತ್ತು ಕಾಲೇಜಿನ ಆಡಳಿತ ಮಂಡಳಿ ಮೂರು ಜನ ವಿದ್ಯಾರ್ಥಿಗಳನ್ನು ಅಮಾನತಿನಲ್ಲಿಟ್ಟಿದ್ದಾರೆ.

ಈ ಖಾಸಗಿ ವಿಡಿಯೋಗೆ ಸಂಬಂಧಪಟ್ಟಂತೆ ಇಡೀ ರಾಜ್ಯದ್ಯಂತ ಪ್ರತಿಭಟನೆಯನ್ನ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದೆ
ಕೂಡಲೇ ಈ ಮೂರು ಜನ ವಿದ್ಯಾರ್ಥಿನಿಯರನ್ನು ಬಂಧಿಸಬೇಕು ಇಂತಹ ಕ್ರೈಂ ನಡೆಸಲು ಇವರ ಹಿಂದೆ ಇರುವ ಯಾವ ಸಂಘಟನೆ ಎಂದು ತಿಳಿದು. ಆ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸುತ್ತಾ ಇದ್ದೇವೆ.
ಕೂಡಲೇ ಸಂತ್ರಸ್ತ ಹೆಣ್ಣುಮಗಳಿಗೆ ಮತ್ತು ಅವರ ಮನೆಯವರಿಗೆ ರಕ್ಷಣೆ ಕೊಡಬೇಕು ಹಾಗೂ ರಶ್ಮಿ ಸಾವಂತವರಿಗೂ ಕೂಡ ರಕ್ಷಣೆಯನ್ನು ಕೊಡಬೇಕು ಎಂದು ಈ ದಿನ ಮೈಸೂರು ನಗರ ಮಹಿಳಾ ಮೋರ್ಚಾ ಹೋರಾಟ ಕೈಗೆತ್ತಿಕೊಂಡಿದೆ.
ಈ ವಿಚಾರವಾಗಿ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ.
ನಾವು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದೇವೆ ನೀವು ಒಂದು ಧರ್ಮಕ್ಕೆ ಸೀಮಿತವಾ?ಅಂತ ಮೇಲ್ನೋಟಕ್ಕೆ ನಮಗೆ ಕಾಣಿಸುತ್ತ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಕೇವಲ ಎರಡು ತಿಂಗಳುಗಳು ಮಾತ್ರ ಆಗಿದೆ ರಾಜ್ಯದ ಜನಕಂಡ ಗಣ ಘೋರ ಕೃತ್ಯಗಳಲ್ಲಿ ಒಂದು ಜೈನಮುನಿಗಳ ಹತ್ಯೆ ಎರಡು T ನರಸೀಪುರ ವೇಣುಗೋಪಾಲರ ಹತ್ಯೆ ಮೂರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯಾದ ಪ್ರೀತಿ ಪರಮೇಶ್ವರ್ ಎಂಬ ಮುದ್ದು ಹೆಣ್ಣು ಮಗಳ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿದ್ದು
ಇಂತಹ ಘಟನೆಗಳು ರಾಜ್ಯದಲ್ಲಿ ನಡೆದಿದ್ದು ಪೊಲೀಸ್ ಇಲಾಖೆ ಯಾವ ರಕ್ಷಣೆಯನ್ನು ಸಾರ್ವಜನಿಕರೇ ನೀಡ್ತಾ ಇದ್ದೀರಾ
ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರನ್ನು ಕಂಡುಹಿಡಿದು ಗಲ್ಲಿಗೇರಿಸಬೇಕು.
ಮುಖ್ಯವಾಗಿ ಹಿಂದು ಹೆಣ್ಣು ಮಕ್ಕಳು ಪರಂಪರೆ ಸಂಸ್ಕೃತಿ ಆಧಾರದ ಮೇಲೆ ಬದುಕನ್ನು ಕಟ್ಟಿಕೊಂಡಿರುವುದು ಇಂತಹ ಘಟನೆಗಳು ಶಿಕ್ಷಣ ಸಂಸ್ಥೆಯಲ್ಲಿ ನಡೆದರೆ ಮುಂದೆ ಹೆಣ್ಣುಮಕ್ಕಳಿಗೆ ಗತಿಯೇನು ನಮಗೆ ಭಯ ಆಗ್ತಾ ಇದೆ
ಶಿಕ್ಷಣ ಸಂಸ್ಥೆಗಳಲ್ಲಿ ಜಿಯಾದಿ ಪ್ರವೇಶ ಇದೆಯಾ ಎಂಬ ಅನುಮಾನವ ಇದೆ.

ಈ ಕೃತ್ಯವನ್ನ ಪರಿಗಣಿಸಿ ಸೂಕ್ತ ತನಿಖೆ ಮಾಡಿ ಸಿ ಐ ಡಿ ಗೆ ಕೊಡಬೇಕು ಅವರಿಗೆ ಶಿಕ್ಷೆ ಆಗಲೇಬೇಕು.
ಹಿಂದೂ ಮಕ್ಕಳೇ ಈ ಕೃತ್ಯ ಎ ಸಗಿದ್ದರೆ ಇವತ್ತು ರಾಜ್ಯಾದ್ಯಂತ ಏನಾಗುತ್ತಿತ್ತು? ಎಂಬ ಪ್ರಶ್ನೆಯನ್ನ ಊಹೆ ಮಾಡಿಕೊಳ್ಳಿ?
ನಮ್ಮ ಕರ್ನಾಟಕದ ಗೃಹ ಮಂತ್ರಿ ಇದು “ಮಕ್ಕಳ ಆಟ “ಎಂದು ಉಡಾಫೆ ಮಾತುಗಳನ್ನ ಅಡಿ ಅಪಪ್ರಬುದ್ಧ ಹೇಳಿಕೆಯನ್ನು ನೀಡಿರುತ್ತಾರೆ
ರಾಜ್ಯದ ಜನತೆಗೆ ಇಂತಹ ಗೃಹಮಂತ್ರಿ ಯಾವ ರಕ್ಷಣೆಯನ್ನು ನೀಡುತ್ತಾರೆ. ರಾಜ್ಯದ ಮಹಿಳೆಯರಿಗೆ ಯಾವ ನ್ಯಾಯವನ್ನು ಕೊಡಿಸುತ್ತಾರೆ?
ಇಂತಹ ಗೃಹ ಮಂತ್ರಿ ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಲು ಬೇಕಾಗಿಲ್ಲ ಕೂಡಲೇ ರಾಜೀನಾಮೆಯನ್ನು ಕೊಡಿ.
ಈ ದಿನ ಹೆಣ್ಣು ಮಕ್ಕಳ ಪೋಷಕರಲ್ಲಿ ಮತ್ತು ತಂದೆ ತಾಯಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಹೇಗೆ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನ ಬಿಟ್ಟು ಓದಿಸುವುದು ಎಂಬುವ ಭಯ ಎದುರಾಗಿದೆ.

ಕೆಲವು ವರ್ಷಗಳಿಂದ ಮಾತ್ರ ಹೆಣ್ಣು ಮಕ್ಕಳಿಗೆ ದೊರೆತ ಶಿಕ್ಷಣದಿಂದಾಗಿ ಇವತ್ತು ಚಂದ್ರಯಾನದಲ್ಲಿ ಕೂಡ ಹೆಣ್ಣು ಮಕ್ಕಳನ್ನ ನಾವು ಕಾಣುತ್ತಿದ್ದೇವೆ ಚಂದ್ರಯಾನ ಉಡಾವಣೆಯಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ಎಷ್ಟು ದೊಡ್ಡದು.
ಅವರು ತಾವು ಮಾಡಿರುವ ಸಾಧನೆಗೆ ತಿರುಪತಿಗೆ ಹೋದರೆ ಕಾಂಗ್ರೆಸ್ಸಿಗರು ಅವರನ್ನು ಮೌಡ್ಯ ಎಂದು ಗುಲ್ಲೆಬ್ಬಿಸಿದರು.
ಸ್ವಾಮಿ ಅದು ಮೌಡ್ಯ ಅಲ್ಲಾ,ತಾವು ಮಾಡುವ ಕೆಲಸಕ್ಕೆ ಒಂದು ಮಾನಸಿಕ ಸ್ಥಿರತೆಯನ್ನು ಒಂದು ವಿಲ್ ಪವರನ್ನು ಕೊಡುವ ಮೀಡಿಯಾ ( ಮಾಧ್ಯಮ) ಅಷ್ಟೇ
ಹಿಂದೂ ಹೆಣ್ಣು ಮಕ್ಕಳಿಗೆ ಎಷ್ಟೇ ಶಿಕ್ಷಣ ದೊರೆತರೂ ಕೂಡ ಅವರು ಸಂಸ್ಕೃತಿ ಪರಂಪರೆಯ ಆಧಾರದ ಮೇಲೆ ಬದುಕನ್ನ ಕುಟುಂಬಗಳನ್ನು ಕಟ್ಟಿಕೊಂಡಿದ್ದಾರೆ.
ಈ ದಿನ ನಮ್ಮ ದೇಶದಲ್ಲಿ ಮೌಲ್ಯಗಳು ಎಂದರೆ ನಮ್ಮ ಪೂರ್ವಜರು ಕಟ್ಟಿದ ಗುರುಕುಲಗಳು ಹಾಕಿಕೊಟ್ಟಂತಹ ಶಿಕ್ಷಣ, ನಮ್ಮ ಪೂರ್ವಜರು ಬೆಳೆಸಿಕೊಟ್ಟಂತಹ ಚಂದಮಾಮ ಕಥೆ ಪಂಚತಂತ್ರ, ರಾಮಾಯಣ, ಮಹಾಭಾರತ, ಪುಣ್ಯಕೋಟಿ ಇಂತಹ ಆದರ್ಶ ಕಥೆಗಳನ್ನ ಹೇಳಿ ಶಿಕ್ಷಣದ ಮೌಲ್ಯವನ್ನು ತಿಳಿದುಕೊಂಡಿರುವ ಹಿಂದೂ ಮಹಿಳೆಯರು ಇವತ್ತಿಗೂ ಕೂಡ ಪಾಲಿಸಿಕೊಂಡು ಬರುತ್ತಿದ್ದಾರೆ.
ಮೌಲ್ಯ ಆಧಾರಿತ ಶಿಕ್ಷಣ ಸಂಸ್ಥೆಗಳು ಹೊರಬರಲಿ ಇಂತಹ ಜಿಹಾದಿ ಸಂಘಟನೆಗಳು ಶಿಕ್ಷಣ ಮಂಡಳಿಗಳಿಗೆ ಪ್ರವೇಶ ಆಗದಂತೆ ನೋಡಿ ಕೊಳ್ಳಬೇಕು.
ಕೇಳಿ ಸಿದ್ದರಾಮಯ್ಯನವರೇ ಕರ್ನಾಟಕದ ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಎಂಬ ಸುಳ್ಳು ಬರವಸೆಗಳನ್ನು ಕೊಟ್ಟು ಬಡವರ ಹೆಣ್ಣು ಮಕ್ಕಳಿಗೆ ಕೆಂಪು ಬಸ್ ಫ್ರೀ ಎಂದು A C ಬಸ್ ಇಲ್ಲಾ ಎಂದು ವಚನ ಭ್ರಷ್ಟರಾಗಿದ್ದೀರಾ? ನಿಮಗೆ ಬಡ ಹೆಣ್ಣು ಮಕ್ಕಳಿಗೆ ಸಾಮಾಜಿಕ ನ್ಯಾಯ ಕೊಡಿಸಲ್ಲಲ್ಲಿ ವಿಫಲರಾಗಿದ್ದೀರ?
ಈಗಾಗಲೇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಈ ಸಂಬಂಧವಾಗಿ ಮೂರು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದು ಇದರಿಂದ ಪ್ರಕರಣದ ನಿಖರತೆ ಸಾಬೀತಾಗಿದೆ.
ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಇಂದು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ಕಳ್ಳತನದಿಂದ ಚಿತ್ರೀಕರಿಸಿ, ಅವುಗಳನ್ನು ಸಮಾಜಘಾತಕ ಶಕ್ತಿಗಳಿಗೆ ನೀಡುವ ಕುಕೃತ್ಯದ ಯೋಜನೆ ಮಾಡಿ ವಿದ್ಯಾರ್ಥಿನಿಯರ ಭವಿಷ್ಯವನ್ನು ಹಾಳು ಗೆಡುವಲು ರೂಪಿಸಿದ್ದು ಈ ಉನ್ನಾರ ಅತ್ಯಂತ ಖಂಡನೀಯ
ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿ ಹಾಕಿಸುವ ಗುಮಾನಿ ಇದೆ .
ಸದರಿ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಯುವಕರು ಕೂಡ ಶಾಮೀಲಾಗಿರುವ ವಿಚಾರವನ್ನು ಸಂತ್ರಸ್ತ ವಿದ್ಯಾರ್ಥಿನಿಯರು ತಿಳಿಸಿರುವುದಾಗಿ ತಿಳಿದು ಬಂದಿದೆ.
ಈ ಗಂಭೀರ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಲಘುವಾಗಿ ಪರಿಗಣಿಸಬಾರದು
ಏನಾದರೂ ಪ್ರಕರಣ ಮುಚ್ಚಿ ಹಾಕುವ ಉನ್ನಾರ ನಡೆದರೆ ಉಗ್ರ ಹೋರಾಟಕ್ಕೆ ರಾಜ್ಯದ ಮಹಿಳೆಯರು ಸಿದ್ದರಿದ್ದೇವೆ, ಎಂದು ಈ ಪ್ರತಿಭಟನೆಯ ಮುಖಾಂತರ ಎಚ್ಚರಿಕೆಯನ್ನು ಕೊಡುತ್ತಾ ಇದ್ದೇವೆ, ಕೂಡಲೇ ಆ ಮೂರು ವಿದ್ಯಾರ್ಥಿನಿಯರನ್ನು ಬಂಧಿಸಲೇಬೇಕು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು,

ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮ ನಂದೀಶ್, ಉಪ ಮಹಾಪೌರರಾದ ಡಾಕ್ಟರ್ ರೂಪ ಯೋಗೇಶ್, ಪ್ರಧಾನ ಕಾರ್ಯದರ್ಶಿಯಾದ ಎಚ್‍ ಜಿ ಗಿರಿಧರ್, ವಾಣಿಶ್ ಕುಮಾರ್ ,ನಗರ ಬಿಜೆಪಿ ಸಹ ವಕ್ತಾರ ಕೇಬಲ್ ಮಹೇಶ್, ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ವೇದಾವತಿ, ಛಾಯಾ, ಶಾಂತಮ್ಮ, ಶಾರದಮ್ಮ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, ನಾಗರತ್ನ ಗೌಡ, ಗೋಪಾಲ್ ರಾಜ್ ಅರಸ್, ಚಿಕ್ಕಮ್ಮ ಬಸವರಾಜು, ರಶ್ಮಿ, ನಾಗಮಣಿ, ಸರ್ವ ಮಂಗಳ, ಜ್ಯೋತಿರೇಚಣ್ಣ  ಹೆಚ್ಚು ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು