ಮೈಸೂರು ಬ್ರಾಹ್ಮಣ ಸಂಘ; ಸಚಿವ ಅಶೋಕ್ ಅವರಿಗೆ ಅಭಿನಂದನೆ

ಕರ್ನಾಟಕ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರವನ್ನು ನೀಡಲು ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ರವರನ್ನು ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಶಾಸಕರಾದ ಎಸ್ ಎ ರಾಮದಾಸ್ ರವರ ನೇತೃತ್ವದಲ್ಲಿ ಅಭಿನಂದಿಸಲಾಯಿತು

ಇದೇ ಸಂಧರ್ಭದಲ್ಲಿ ಶಾಸಕರಾದ ಎಸ್. ಎ ರಾಮದಾಸ್ ರವರು ಮಾತನಾಡಿ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸರ್ಕಾರಿ ಸವಲತ್ತು ಪಡೆಯಲು ಕಾನೂನಾತ್ಮಕವಾಗಿ ಬ್ರಾಹ್ಮಣ ಎಂದು ಧೃಡಿಕರಣ ಪಡೆಯಲು ಜಾತಿಪ್ರಮಾಣಪತ್ರ ಅವಶ್ಯಕವಿತ್ತು, ಅದರಂತೆಯೆ ಇಂದು ಕಂದಾಯ ಇಲಾಖೆಯ ಸಚಿವರಾದ ಆರ್. ಅಶೋಕ್ ರವರು ಆರ್ಥಿಕವಾಗಿ ಹಿಂದುಳಿದ ವರ್ಗದ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ವಿದ್ಯಾರ್ಥಿಗಳು ಯುವಕರಿಗೆ ಶಿಕ್ಷಣ ಉದ್ಯೋಗಕ್ಕೆ ಸಹಕಾರಿಯಾಗುವಂತೆ, ವಿಪ್ರ ಮಹಿಳೆಯರ ಸ್ವಉದ್ಯೋಗ ಯೋಜನೆ ಸೇರಿದಂತೆ, ಹಿರಿಯ ನಾಗರೀಕರಿಗೆ ಆರೋಗ್ಯ ಸಮಸ್ಯೆ ನಿವಾರಿಸಲು ವೈದ್ಯಕೀಯ ನೆರವು, ಹಾಗೂ ಸಾಲ ವಿಮೆ ಅನುದಾಬ ಯೋಜನೆ ರೂಪಿಸಲಾಗುವುದು ಎಂದರು