ಮೈಸೂರು-ಭುವನೇಶ್ವರ ನಡುವೆ ವಿಶೇಷ ರೈಲು/ Special trains between Mysuru-Bhubaneswar

428
Share

ನೈರುತ್ಯ ರೈಲ್ವೆ

ಮೈಸೂರು-ಭುವನೇಶ್ವರ ನಡುವೆ ವಿಶೇಷ ರೈಲು

ಬೇಸಿಗೆಯಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ಬೇಡಿಕೆಯ ಮೇರೆಗೆ ಮೈಸೂರು-ಭುವನೇಶ್ವರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಾಗುವುದು. ಅವುಗಳ ಮಾಹಿತಿ ಈ ಕೆಳಗಿನಂತಿವೆ:

1. ಏಪ್ರಿಲ್ 9 ರಂದು ರೈಲು ಸಂಖ್ಯೆ 06215 ಮೈಸೂರು-ಭುವನೇಶ್ವರ ವಿಶೇಷ ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ಬೆಳಿಗ್ಗೆ 4:15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10:40 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.

2. ಏಪ್ರಿಲ್ 10 ರಂದು ರೈಲು ಸಂಖ್ಯೆ 06216 ಭುವನೇಶ್ವರ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಭುವನೇಶ್ವರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಸಂಜೆ 07:15 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ವೈಟ್ ಫೀಲ್ಡ್, ಬಂಗಾರಪೇಟೆ, ಜೋಲಾರಪೆಟ್ಟೈ , ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ತೆನಾಲಿ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮಲಕೋಟೆ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ, ಪಾಲಸಾ, ಬ್ರಹ್ಮಪುರ ಮತ್ತು ಖುರ್ದಾ ರೋಡ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್ ಬೋಗಿ-1, ಎಸಿ ತ್ರಿ ಟೈಯರ್-3, ಸ್ಲೀಪರ್ ಕ್ಲಾಸ್ ಬೋಗಿಗಳು-9, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು-3 ಮತ್ತು ಎಸ್ಎಲ್ಆರ್ / ಡಿ -2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.

ವಿಶೇಷ ಸೂಚನೆ: ಎಸಿ ಬೋಗಿಗಳಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SOUTH WESTERN RAILWAY

*Special trains between Mysuru-Bhubaneswar*

One trip of special trains will be run between Mysuru-Bhubaneswar stations on demand to clear the extra rush of passengers during the summer season. The details are as follows:

1. Train No. 06215 Mysuru-Bhubaneswar Express Special, will depart from Mysuru at 04:15 AM on 9th April, 2024 and arrive Bhubaneswar at 10:40 AM the following day.

2. Train No. 06216 Bhubaneswar-Mysuru Express Special, will depart from Bhubaneswar at 01:00 PM on 10th April, 2024, and arrive Mysuru at 07:15 PM the next day.

The special trains will halt at the following stations in both directions: Mandya, KSR Bengaluru, Bengaluru Cantt, Krishnarajapuram, Whitefield, Bangarapet, Jolarpettai, Katpadi, Renigunta, Gudur, Nellore, Ongole, Tenali, Vijayawada, Eluru, Rajahmundry, Samalkot, Duvvada, Kottavalasa, Vizianagaram, Srikakulam Road, Palasa, Brahmapur and Khurda Road.

The special trains will consist of a total of 18 coaches, including AC two-tier coach-1, AC three-tier coaches-3, Sleeper Class Coaches-9, General Second Class Coaches-3 & SLR/D-2.

*Note: Linen will not be supplied in AC Coaches.*

 

 


Share