ಮೈಸೂರು-ಮನಸೆಳೆದ ಮಕ್ಕಳ ಸಂತೆ

21
Share

 

ಜೆಎಸ್ಎಸ್ ಪ್ರಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ

ಮನಸೆಳೆದ ಮಕ್ಕಳ ಸಂತೆ

ಮೈಸೂರು: ಸರಸ್ವತಿಪುರಂನಲ್ಲಿರುವ
ಜೆ ಎಸ್ ಎಸ್ ಪ್ರಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ
ಮಕ್ಕಳ ಸಂತೆ ಆಯೋಜಿಸಲಾಗಿತ್ತು.
ಜೆಎಸ್ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯ ಸರಸ್ವತಿಪುರಂ ಇಲ್ಲಿನ ಮುಖ್ಯ ನಿಲಯ ಪಾಲಕರಾದ ಮಮತಾ ಸುರೇಶ್
ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳ ಸಂತೆಯನ್ನು ನಡೆಸು ವುದರಿಂದ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ವ್ಯಾಪಾರ ವ್ಯವಹಾರ ನಡೆಸುವ ಸಂದರ್ಭ ಪೂರಕ ವೇದಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳು ವ್ಯವಹಾರ ಜ್ಞಾನ ಅರಿಯಲು ಆಯೋಜಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ತರಕಾರಿ, ಸೊಪ್ಪು, ಗೆಡ್ಡೆ-ಗೆಣಸು, ಹಣ್ಣುಗಳನ್ನು
ಆಹಾರ ಮಳಿಗೆಗಳು, ಅಲಂಕಾರಿಕ ವಸ್ತುಗಳು, ಕರ್ನಾಟಕದ ವಿವಿಧ ಜಿಲ್ಲೆಗಳ ತಿನಿಸುಗಳು, ವಿವಿಧ ಮನೋರಂಜನ ಆಟಗಳು ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. . ಒಟ್ಟಾರೆ ಶಾಲೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ತಂದು ಮಾರಾಟ ಮಾಡಿದರು. ಪಾಲಕರು ಸಂತೆಯಲ್ಲಿ ವಸ್ತುಗಳನ್ನು ಕೊಂಡರು.

ಇದೆ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯಸ್ಥರಾದ ಮಹದೇವಪ್ಪ, ಡಿ ಎಲ್ ಇ ಡಿ ಪ್ರಾಂಶುಪಾಲರಾದ ಶಿವಮೂರ್ತಿ, ಹಾಗೂ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಎಂ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು


Share