ಮೈಸೂರು ಮನೆಗಳನ್ನು ವಶಕ್ಕೆ ಪಡೆದ ಪ್ರಾಧಿಕಾರ.

421
Share

ಅತಿಕ್ರಮಣಗೊಂಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮನೆಗಳು ವಶಕ್ಕೆ
ಮೈಸೂರು, ಜೂನ್,30(ಕರ್ನಾಟಕ ವಾರ್ತೆ):- ದೇವನೂರು ಗ್ರಾಮ ಸರ್ವೆ ನಂ. 166/1, 166/2 ಮತ್ತು 164 ರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡು ರಚಿಸಲಾಗಿರುವ ದೇವನೂರು 2ನೇ ಹಂತ ಬಡಾವಣೆಯಲ್ಲಿ ಸೈಯದ್ ಹಸೀಬ್ ಎಂಬುವವರು ಅತಿಕ್ರಮ ಪ್ರವೇಶ ಮಾಡಲಾಗಿರುವ ಹಿನ್ನೆಲೆ ಮಂಗಳವಾರ ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸಿಬ್ಬಂದಿಗಳು ಹಾಗೂ ಉದಯಗಿರಿ ಪೊಲೀಸ್ ಠಾಣೆ ನೀರಿಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ವತ್ತುಗಳನ್ನು ವಶಕ್ಕೆ ಪಡೆದು ಪ್ರಾಧಿಕಾರದ ಆಸ್ತಿಯೆಂದು ನಾಮಫಲಕ ಅಳವಡಿಸಲಾಗಿದೆ.
ಸರ್ವೆ ನಂಬರ್ 166/1, 166/2 ಮತ್ತು 164 ರಲ್ಲಿ ರಚಿಸಲಾಗಿದ್ದ ಒಟ್ಟು 14 ನಿವೇಶನಗಳನ್ನು ಪ್ರಾಧಿಕಾರವು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 10.00 ಕೋಟಿಗಳಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share