ಮೈಸೂರು -ಮಳೆ ರಸ್ತೆಗೆ ಉರಿಳಿದ ಮರಗಳು ವೀಕ್ಷಿಸಿ

387
Share

 

 


ಮೈಸೂರು-ಮೈಸೂರು ನಗರದಾದ್ಯಂತ ಇಂದು ಸಂಜೆ ಆಲಿ ಕಲ್ಲು ಮಳೆ ಸುರಿದು ನಗರವನ್ನು ಸ್ವಲ್ಪಮಟ್ಟಿಗೆ ತಂಪು ಮಾಡಿದೆ.

ಇಂದು ಸಂಜೆ 4:00 ನಂತರ ಮೈಸೂರು ನಗರದಲ್ಲಿ ಮಳೆ ಬಂದು ಸಾರ್ವಜನಿಕರು ಓಡಾಡುವುದಕ್ಕೆ ತೊಂದರೆಯನ್ನು ಉಂಟು ಮಾಡಿತು.

ನಗರದಾದ್ಯಂತ ಹಲವು ಕಡೆ ಮರಗಳು ರಸ್ತೆಗೆ ಹೊರಳಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದ ದೃಶ್ಯ ಕಂಡು ಬರುತ್ತಿತ್ತು

ಅರಮನೆ ಸುತ್ತಮುತ್ತ ಹಾಗೂ ಕೆ ಆರ್ ಉತ್ತರದ ಬಳಿ ಭಾರಿ ಮಳೆ ಬಂದು ರಸ್ತೆಯಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿದ್ದ ದೃಶ್ಯ ಕಂಡು ಬಂದಿತು

ದಿಡಿರನ್ ಎಂದು ಮಳೆ ಬಂದ ಹಿನ್ನೆಲೆಯಲ್ಲಿ ಆನ್ಲೈನ್ ನಲ್ಲಿ ಬುಕ್ಕು ಮಾಡಿದ ಪದಾರ್ಥಗಳನ್ನು ನೀಡಲು ಮಳೆಯನ್ನು ಲೆಕ್ಕಿಸದೆ ಬೈಕಿನಲ್ಲಿ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು

ಸುಮಾರು 30 ನಿಮಿಷಕ್ಕೆ ಹೆಚ್ಚು ಮಳೆ ಜೋರಾಗಿ ಬಂದಿದ್ದು ಹಲವು ಕಡೆ ಆಲಿ ಕಲ್ಲು ಬಿದ್ದಿರುವುದಾಗಿ ಹೇಳಲಾಗಿದೆ


Share