ಮೈಸೂರು ಮಹಾನಗರ ಪಾಲಿಕೆಯಿಂದ ಎಚ್ಚರಿಕೆ

ಪಾಲಿಕೆಯ ಎಚ್ಚರಿಕೆ -ಮೈಸೂರು ನಗರ ಪಾಲಿಕೆಯು ಸೀಲ್ ಡೌನ್ ಪ್ರದೇಶದಿಂದ ಹೊರ ಬಂದರೆ ಬಂಧಿಸಿ ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದೆ .ನಗರದ ಬಹುತೇಕ ವಾರ್ಡುಗಳು ದಿನೇ ದಿನೇ ಸೀಲ್ ಡೌನ್ಗೆ ಒಳಗಾಗುತ್ತಿದ್ದು ಅನೇಕ ಕಡೆ ಸೀಲ್ ಡೋನ್ ಪ್ರದೇಶದ ಒಳಗಿನ ಜನರು ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ.ಈ ಪ್ರದೇಶದಲ್ಲಿ ಹೊರಗೆ ಬಂದವರನ್ನು ಕಾನೂನಿನಂತೆ ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಮೊಬೈಲ್ ವ್ಯಾನ್ ಮುಖಾಂತರ ಅನೌನ್ಸ್ಮೆಂಟ್ ಮಾಡುತ್ತಿದೆ .ಸೀಲ್ ಡೋನ್ ಪ್ರದೇಶದ ಜನರಿಗೆ ತಮ್ಮ ಅಗತ್ಯತೆಗಳೇನಾರು ಬೇಕಾದರೆ ನಗರ ಪಾಲಿಕೆಯಿಂದ ನಿಯೋಜಿಸಲ್ಪಟ್ಟಿರುವ ಸೀಲ್ ಡೌನ್ ಬ್ಯಾರಿಕೇಡ್ ಬಳಿ ಇರುವ ಅಧಿಕಾರಿಗಳ ಮುಖಾಂತರ ತರಿಸಿಕೊಳ್ಳಬೇಕು ವಿನಾಕಾರಣ ಆಚೆ ಬರಬಾರದು ಎಂದು ಎಚ್ಚರ ನೀಡುತ್ತಿದೆ .