ಮೈಸೂರು ಮಾನವೀಯತೆ ಮೆರೆದ ಯುವ ಸಮೂಹ

” ಮಾನವೀಯತೆ ಮೆರೆದ ಯುವ ಸಮೂಹ “
ಇಂದು ಮುಂಜಾನೆ ಚಾಮುಂಡಿ ಬೆಟ್ಟದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ವೀಕ್ಷಣಾ ಗೋಪುರದ ಬಳಿ ಧ್ಯಾನ ಮಾಡುವ ಸಂಧರ್ಭದಲ್ಲಿ ಆಕಸ್ಮಿಕವಾಗಿ 60ಸಾವಿರ ಮೌಲ್ಯದ ಐ ಫೋನ್ ಮರೆತು ಬಂದಿದ್ದರು.ಇದನ್ನು ಗಮನಿಸಿದ ವಾಯುವಿಹಾರಕ್ಕೆ ಬಂದಿದ್ದ ಯುವಸಮೂಹ ಗಮನಿಸಿ ಕಟ್ಠೆಯ ಮೇಲೆ ಬಿದ್ದಿದ್ದ ಮೊಬೈಲ್ ಅನ್ನು ತೆಗೆದುಕೊಂಡು ಅಲ್ಲಿದ್ದ ಕಾಂಟ್ಯಾಕ್ಟ್ ನಂಬರ್ ಗಳನ್ನು ಬಳಸಿ ಎಂ ಕೆ ಸೋಮಶೇಖರ್ ರವರ ಮನೆಗೆ ತಂದುಕೊಟ್ಟಿರುವ ಕಾರಣ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಅಭಿನಂದಿಸಿ ಶಾಲು ಹಾರ ಹೊದಿಸಿ ಪುಸ್ತಕಗಳನ್ನು ನೀಡಿ ಡಾ.ಗೌತಮ್ ದೇವನೂರು,ಸಾಧನ ಸುಧಾಕರ್, ಪುನೀತ್ ರಾಜ್, ವಿಧುಷಿ ಶ್ರಾವಣಿ ಕೆ ಆರ್ ರವರನ್ನು ಗೌರವಿಸಿದರು.ಈ ಸಂಧರ್ಭದಲ್ಲಿ ಗುಣಶೇಖರ್,ಹರೀಶ್,ಮಹೇಂದ್ರ,ಪುಟ್ಟಸ್ವಾಮಿ ಹಾಜರಿದ್ದರು.