ಮೈಸೂರು ಮೃಗಾಲಯದಲ್ಲಿ ಹುಲಿ ಸಾವು

Share

ಬ್ರಹ್ಮ ಹುಲಿ ಮರಣ ಹೊಂದಿರುವ ಬಗ್ಗೆ
ಸುಮಾರು 20 ವರ್ಷ ವಯಸ್ಸಿನ ಬ್ರಹ್ಮ ಹೆಸರಿನ ಗಂಡು ಹುಲಿಯು ಮರಣ ಹೊಂದಿರುವ
ವಿಷಯವನ್ನು ತಿಳಿಸಲು ಮೈಸೂರು ಮೃಗಾಲಯವು ವಿಷಾಧಿಸಿದೆ. ಬ್ರಹ್ಮ ಹುಲಿಯನ್ನು ದಿನಾಂಕ
18/3/2008ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ
ಕಾರ್ಯಾಚರಣೆಯಡಿ ಮಡಿಕೇರಿ ಜೆಲ್ಲೆಯ ವಿರಾಜಪೇಟೆ ತಾಲೂಕಿನ ತೆರಳು ಗ್ರಾಮದಿಂದ ಸೆರೆಹಿಡಿದು
ರಕ್ಷಿಸಿ ಮೃಗಾಲಯಕ್ಕೆ ತರಲ್ಪಟ್ಟಿದು ್ದ, ಸದರಿ ಹುಲಿಯನ್ನು ಮೃಗಾಲಯದ ಪುನರ್ವಸತಿ ಕೇಂದ್ರದಲ್ಲಿ
ಇರಿಸಲಾಗಿತು ್ತ. ಬ್ರಹ್ಮ ಹುಲಿಯನ್ನು ದಿವಂಗತ ಯೋಗ ಗುರು ಶಿ ್ರೀ ಬಿ.ಕೆ.ಎಸ್. ಐಯ್ಯಂಗಾರ್ ರವರು
ಹುಲಿಯ ಜೀವಮಾನ ಪರ್ಯಂತರಕ್ಕೂ ದತ್ತು ಸ್ವೀಕರಿಸಿದ್ದರು.
ಇಂದು ಅಂದರೆ ದಿನಾಂಕ 24/7/2020ರಂದು ಮಧ್ಯಾಹ್ನ ಸುಮಾರು 3.00 ಘಂಟೆಗೆ ಬ್ರಹ್ಮ
ಹುಲಿಯು ವೃದ್ದಾಪ್ಯಕ್ಕೆ ಸಂಬಂಧಿಸಿದ ಕಾರಣಗಳ ಹಿನ್ನೆಲೆಯಲ್ಲಿ ಮೃತಪಟ್ಟಿರುತ್ತದೆ. ಹುಲಿಯ ಮರಣಕ್ಕೆ
ಮೃಗಾಲಯ ಪ್ರಾಧಿಕಾರವು ಸಂತಾಪ ವ್ಯಕಪಡಿಸುತ್ತದೆ. ಪ್ರಸು ್ತತ ಮೈಸೂರು ಮೃಗಾಲಯದಲ್ಲಿ 10:6 (10
ಗಂಡು : 6 ಹೆಣು ್ಣ) ಹುಲಿಗಳನ್ನು ಪಾಲನೆ ಮಾಡಲಾಗುತ್ತಿದೆ.
ಅಜೀತ್


Share