ಮೈಸೂರು ಮೃಗಾಲಯದಲ್ಲಿ E ತರಬೇತಿ ಶಿಬಿರ

ಮೃಗಾಲದ ವತಿಯಿಂದ ಇ-ಬೇಸಿಗೆ ಶಿಬಿರ: ಮಕ್ಕಳಿಂದ ಅರ್ಜಿ ಆಹ್ವಾನ
ಮೈಸೂರು. ಮೇ.16.(ಕರ್ನಾಟಕ ವಾರ್ತೆ):- ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಮೇ 28 ರಿಂದ ಜೂನ್ 6 ರವರೆಗೆ 12 ರಿಂದ 18 ವಯೋಮಾನದ ವಿದ್ಯಾರ್ಥಿಗಳಿಗಾಗಾಗಿ ಇ-ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಮಕ್ಕಳಿಗೆ ಪ್ರಕೃತಿ ಮತ್ತು ವನ್ಯ ಪ್ರಾಣಿಗಳ ಸಂರಕ್ಷಣೆ ಹಾಗೂ ಜೈವಿಕ ವೈವಿಧ್ಯತೆಗಳ ಬಗ್ಗೆ ತಿಳಿಸಲಾಗುವುದು.

ಆಸಕ್ತಿಯುಳ್ಳವರು ಅರ್ಜಿಯನ್ನು ಮೇ 26 ರೊಳಗೆ ಮೃಗಾಲಯದ ವೆಬ್‍ಸೈಟ್ನಲ್ಲಿ ಅರ್ಜಿ ಸಲ್ಲಿಸುವುದು. ಶಿಬಿರದ ಶುಲ್ಕವು 500 ರೂ. ನಿಗದಿ ಮಾಡಿದ್ದು, ಸಂಗ್ರಹವಾದ ಶುಲ್ಕವನ್ನು ಮೃಗಾಲಯ ಪ್ರಾಣಿಗಳ ನಿರ್ವಹಣೆಗೆ ಉಪಯೋಗಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 0821-2520302/2440752 ಹಾಗೂ ಮೊಬೈಲ್ ಸಂಖ್ಯೆ 9686668099 ಅನ್ನು ಸಂಪರ್ಕಿಸುವಂತೆ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.