ಮೈಸೂರು ಮೇಯರ್ ಅವರ ಬೇಜವಾಬ್ದಾರಿತನ

744
Share

ಮೈಸೂರು ನಗರದ ಮಹಾಪೌರರ ಬೇಜವಾಬ್ದಾರಿ- ರಾಜ್ಯ ಸರ್ಕಾರವು ಈ ಬಾರಿಯ ರಂಜಾನ್ ದಿನದಂದು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲು ಅವಕಾಶ ನೀಡದೆ ಇರುವಾಗ ಮೈಸೂರು ನಗರದ ಮೇಯರ್ ಅವರು ರಾಜ್ಯ ಸರ್ಕಾರಕ್ಕೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಮೈಸೂರು ನಗರದ ಪ್ರಥಮ ಪ್ರಜೆಯಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು ಮಹಾಮಾರಿ ಕೊರೊನಾ ಸೋಂಕು ತಾಂಡವಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಈ ರೀತಿ ಸರ್ಕಾರಕ್ಕೆ ಪ್ರಾರ್ಥನೆಗೆ ಮನವಿ ಮಾಡಿರುವುದು ಅವರಿಗೆ ತಕ್ಕದ್ದಲ್ಲ .ಮುಸ್ಲಿಂ ಬಾಂಧವರಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ತಿಳಿಸಬೇಕಾದ ಅವರು ಸರ್ಕಾರಕ್ಕೆ ಪ್ರಾರ್ಥನೆ ಮಾಡಲು ಅವಕಾಶ ಕೇಳುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಬೇಕಾಗಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಯಾರು ಕೂಡ ದೇವಾಲಯವನ್ನು ತೆರೆಯಿರಿ ಎಂದು ಸರ್ಕಾರವದ ಮೊರೆ ಹೋಗಲಿಲ್ಲ ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿರುವವರು ಹೇಗೆ ಸರ್ಕಾರವನ್ನು ಮನವಿ ಮಾಡಿದರು? ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ , ಮುಸ್ಲಿಂ ಬಾಂಧವರ ನಾಯಕರಾದ ಇಬ್ರಾಹಿಂ ಸೇರಿದಂತೆ ಅನೇಕ ಮುಖಂಡರುಗಳು ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಯಾವ ರೀತಿ ಆದೇಶ ನೀಡುತ್ತದಯೊ ಅದಕ್ಕೆ ಸಂಪೂರ್ಣವಾಗಿ ನಾವು ಬೆಂಬಲ ಕೊಡುತ್ತೇವೆ ಎಂದು ತಿಳಿಸಿದ್ದಾರೆ .ಆದರೆ ಮೈಸೂರು ನಗರದ ಮೇಯರ್ ಅವರು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳದೆ ರಂಜಾನ್ ದಿನ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರವನ್ನು ಮನವಿ ಮಾಡಿರುವುದು ಮೂರ್ಖತನದ ಪರಮಾವಧಿ. ಮೈಸೂರು ನಗರದ ಮೇಯರ್ಗೆ ರಾಜಕೀಯದಲ್ಲಿ ಅನುಭವ ಸಾಲದು ಎನ್ನುವುದು ಇದರಿಂದ ಗೊತ್ತಾಗುತ್ತದೆ ,ಹಿರಿಯರ ಸಲಹೆ ಅಭಿಪ್ರಾಯಗಳನ್ನು ತಿಳಿದು ಅವರು ಸರ್ಕಾರಕ್ಕೆ ಮನವಿ ಮಾಡಬೇಕಾಗಿತ್ತು. ಇನ್ನುಮುಂದಾದರೂ ಮೈಸೂರು ನಗರದ ಮೇಯರ್ ಅವರು ಜವಾಬ್ದಾರಿಯಾಗಿ ನಡೆದುಕೊಳ್ಳಲಿ.


Share