ಮೈಸೂರು ಮೊಬೈಲ್ ಬಿಡಿ ಗಿಡ ನೆಡಿ ಕಾರ್ಯಕ್ರಮ

380
Share

ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯ ಅಂಗವಾಗಿ ಮೊಬೈಲ್ ಬಿಡಿ ಗಿಡ ನೆಡಿ ಎಂಬ ಕಾರ್ಯಕ್ರಮವನ್ನು ಪರಿಸರ ಸ್ನೇಹಿ ತಂಡದ ವತಿಯಿಂದ ಗಾಂಧಿನಗರದ ಮೈದಾನದಲ್ಲಿ ಸಸಿಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.ಬಿಜೆಪಿ ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ರವರು ಮಾತನಾಡಿ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಉಪಯೋಗಿಸುತ್ತ ತಮ್ಮ ಅಮೂಲ್ಯವಾದ ಓದುವ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಮತ್ತು ಮಕ್ಕಳು ಮೊಬೈಲ್ ಬಳಸಿ ಸ್ವದೇಶಿ ಕ್ರೀಡಾ ಆಟವಾಡುವುದನ್ನು ಸಹ ಮರೆತಿದ್ದಾರೆ ಹಾಗೂ ಪರಿಸರ ಕಾಳಜಿಯನ್ನು ಮರೆತರೆ ಅವರ ಮಕ್ಕಳ ಪೀಳಿಗೆಗೆ ತುಂಬಾ ತೊಂದರೆ ಯಾಗುತ್ತದೆ ಆದ್ದರಿಂದ ಮೊಬೈಲ್ ಬಿಟ್ಟು ಗಿಡ ನೆಟ್ಟರೆ ಪರಿಸರ ಬೆಳೆಸಿ ಉಳಿಸುವಂತಾಗುತ್ತದೆ ಎಂದರು ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಅಶ್ವಿನಿ ಶರತ್ ರವರ ಪತಿ ಶರತ್ ರವರು
ದೇಶದ ವಿದ್ಯಾರ್ಥಿಗಳಲ್ಲಿ , ಜ್ಞಾನ, ಶೀಲ,ಏಕತೆ ಮೂಲಕ ರಾಷ್ಟ್ರೀಯತೆ ,ಸ್ವಾಭಿಮಾನ, ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ.
” ವಿದ್ಯಾರ್ಥಿ ಶಕ್ತಿ ರಾಷ್ಟ್ರೀಯ ಶಕ್ತಿ”
ಎಂಬುದನ್ನು ಸಾಬಿತು ಪಡಿಸಿ ಕಳೆದ 7 ದಶಕಗಳಲ್ಲಿ ದೇಶದ ವಿವಿಧ ಜ್ವಲಂತ ಸಮಸ್ಯೆಗಳ ವಿರುದ್ದ ಧ್ವನಿಯನ್ನು ಎತ್ತಿ ಪರಿಹಾರವನ್ನು ಹುಡುಕಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ . ಎಲ್ಲ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು ಹಾಗೆಯೇ ಇಂದಿನ ಯುವಕರು
ಪರಿಸರ ಉಳಿಸಿದರೆ ಬಹಳ ಅನುಕೂಲವಾಗುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಗಿಡ ನೆಟ್ಟರೆ ಪರಿಸರ ಬೆಳೆಸಿ ಉಳಿಸುವಂತಾಗುತ್ತದೆ ಎಂದರು
ಈ ಕಾರ್ಯಕ್ರಮದಲ್ಲಿ ಬಿಜೆಪಿ ಎನ್.ಆರ್.ಕ್ಷೇತ್ರದ ಅಧ್ಯಕ್ಷರದಾ ಡಿ.ಲೋಹಿತ್ ರವರು ಮುಖಂಡರಾದ ಶರತ್ ರವರು ಪರಿಸರ ಸ್ನೇಹಿ ತಂಡದ ಕಾರ್ಯದರ್ಶಿ ಬಿ.ಜಯಂತ್ ಹಾಗೂ ಸಂತೋಷ್,ಪ್ರಮೋದ್,ರವಿ ತೇಜ,ದೀಪು,ನಂಜುಂಡ,
ಮುಂತಾದವರು ಭಾಗವಹಿಸಿದ್ದರು.


Share