ಮೈಸೂರು ಯುವಕರ ಕಲಾತ್ಮಕ ಪ್ರಯತ್ನ “ನಮೂನೆ”

ಚಿತ್ರ: ನಮೂನೆ.
ಕಲಾವಿದರು: ವಿಷ್ಣು, ವಿಂಧು, ಚೇತನ್, ನೀತಾನ್.
ಛಾಯಾಗ್ರಹಣ: ವಿಂಧು ಎಸ್‌.ಬಿ

‘ನಮೂನೆ’,ಇದು ಒಂದು ಕನ್ನಡ ಕಿರುಚಿತ್ರ. ಈ ಚಿತ್ರದಲ್ಲಿ ಒಂದು ಘಟನೆಯಲ್ಲಿ ಒಬ್ಬ ವ್ಯಕ್ತಿಯು ಆತುರದ ನಿರ್ಧಾರಗಳನ್ನು ತೆಗೆದುಕೊಂಡಾಗ, ಅದರಿಂದಾಗುವ ಪರಿಣಾಮಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ತೋರಿಸಲಾಗಿದೆ.ಅದರಿಂದ ಹೊರಗೆ ಬರಲು ಆತನಿಗೆ ಸಾಧ್ಯವಾಗುವುದೇ? ಹೊರಗೆ ಬರಲು ಯಾರಾದರೂ ಸಹಾಯ ಮಾಡುವರೆ? ಅಷ್ಟಕ್ಕೂ ಆ ವ್ಯಕ್ತಿ ಸಿಲುಕಿರುವ ತೊಂದರೆಯಾದರು ಏನು?
ಈ ಪ್ರಶ್ನೆಗಳಿಗೆ ಉತ್ತರ ನಮೂನೆ ಕಿರುಚಿತ್ರ ಬಿಡುಗಡೆಯಾದ ನಂತರ ತಮಗೆ ತಿಳಿಯುತ್ತದೆ. ಅಲ್ಲಿಯವರೆಗೂ ನಮ್ಮ ಚಿತ್ರದ ಬಿಡುಗುಡಿಗೆ ನಿರೀಕ್ಷಿಸಿ.

ಕಡೆಯದಾಗಿ ಓಂದು ವಿಷಯ, ಈ ವಿಡಿಯೋ ಪ್ರಾರಂಭದಲ್ಲಿ ಒಂದು ವಾಕ್ಯವಿದೆ, ಅದೇನೆಂದರೆ, ‘ ಕೃತಜ್ಞತೆಗಳನ್ನು ತಿಳಿಸಲು ನಮಗೆ ಯಾವ ಮಹಾನುಭಾವನು ಸಹಾಯ ಮಾಡಿಲ್ಲ, ಈ ಕಿರುಚಿತ್ರ ಕೇವಲ ನಮ್ಮ ಪ್ರಯತ್ನ…’ ಎಂದು. ಇದು ಸತ್ಯವು ಹೌದು. ಆದರೆ ನಮ್ಮ ನಮೂನೆ ಚಿತ್ರದ ಟೀಸರ್ ಬಿಡುಗಡೆಯಾದ ನಂತರ, ಇದನ್ನು ವೀಕ್ಷಿಸಿದ ‘ಮೈಸೂರು ಪತ್ರಿಕೆ’ ಸಂಸ್ಥೆಯ ಮುಖ್ಯಸ್ಥರು, ನಮ್ಮನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಲು ಮುಂದಾಗಿದ್ದಾರೆ. ಇದರಿಂದ ನಮ್ಮ ಚಿತ್ರತಂಡಕ್ಕೂ ಸಂತಸವಾಗಿದೆ. ‘ಮೈಸೂರು ಪತ್ರಿಕೆ’ಯ ಮುಖ್ಯಸ್ಥರಿಗೂ ಮತ್ತು ವ್ಯವಸ್ಥಾಪರಿಗೂ ನಮೂನೆ ಚಿತ್ರತಂಡದಿಂದ ಹೃದಯ ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತೇವೆ.