ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಅರ್ಜುನ ಆನೆಗೆ ಶ್ರದ್ಧಾಂಜಲಿ

22
Share

 

*ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಅರ್ಜುನ ಆನೆಗೆ ಶ್ರದ್ಧಾಂಜಲಿ*

ಮೈಸೂರು ದಸರಾ ಅಂಬಾರಿಯನ್ನು ಹೊತ್ತು ಜನರ ಮೆಚ್ಚುಗೆ ಹಾಗೂ ಪ್ರೀತಿಗೆ ಪಾತ್ರವಾಗಿದ್ದ ಅರ್ಜುನ ಅನೆಯ ಸಾವಿಗೆ ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಮೇಣದಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಕೋರಲಾಯಿತು.

ಮೈಸೂರು ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ ಮಾತನಾಡಿ ಕಳೆದ ನಾಲ್ಕೂವರೆ ದಶಕಗಳಿಂದ ನಾಡಿನ ಸೇವೆ ಮಾಡುತ್ತಲೇ ಬಂದಿದ್ದ ಅರ್ಜುನ ಸೇವೆ ಮಾಡುತ್ತಲೇ ಸಾವಿಗೀಡ್ ಆಗಿರುವುದು ನಿಜಕ್ಕೂ ಆಘಾತಕಾರಿ. ಬಹುಶಹ ಅರ್ಜುನ ಈ ಭೂಮಿ ಮೇಲೆ ಹುಟ್ಟಿದ್ದೇ ಸೇವೆಗಾಗಿಯೇ ಎಂಬ ಭಾವನೆ ನಮ್ಮಲ್ಲಿದ್ದು ಸಾರ್ಥಕ ಜೀವನ ನಡೆಸಿದ ಅರ್ಜುನನಿಗೆ ನಾಡಿನ ಜನರ ಪರವಾಗಿ ಭಾವುಕವಾದ ಶ್ರದ್ಧಾಂಜಲಿಯನ್ನು ನಾವಿಂದು ಸಲ್ಲಿಸುತ್ತಿದ್ದೇವೆ ಎಂದು ನುಡಿದರು.

ಮೈಸೂರು ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಅಜಯ್ ಶಾಸ್ತ್ರಿ, ಪ್ರತಾಪ್, ಮಧು ಏನ್ ಪೂಜಾರ್, ಟಿ ಎಸ್ ಅರುಣ್, ಶ್ರೀಕಾಂತ್
ಜಟ್ಟಿ ಹುಂಡಿ ಗೋಪಾಲ್, ಪಂಕಜ್, ಮಧು, ಸೂರಜ್, ಸದಾಶಿವ, ದಯಾನಂದ್, ಶಿವಲಿಂಗ ಸ್ವಾಮಿ, ವಕೀಲರಾದ ಹೇಮಂತ್, ಶಿವರಾಜ್, ಬಸವರಾಜ್ ಬಸಪ್ಪ ಹಾಗೂ ಇನ್ನಿತರರು ಹಾಜರಿದ್ದರು


Share