ಮೈಸೂರು – ರಾಮೇಶ್ವರ ರೈಲು ಪ್ರಾರಂಭಕ್ಕೆ ಆಗ್ರಹ: ಪ್ರತಾಪ್ ಸಿಂಹ

Share

 

ಮೈಸೂರು-ಇಂದು  ಸಂಸದ ಪ್ರತಾಪ್ ಸಿಂಹ ರವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಬಾರ್ಮೆರ್ – ಯಶವಂತಪುರ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವಂತೆ ಹಾಗೂ ಮೈಸೂರಿನಿಂದ ರಾಮೇಶ್ವರಂ ಸಾಪ್ತಾಹಿಕ ರೈಲು (weekly train) ಪ್ರಾರಂಭಿಸುವಂತೆ ಕೋರಿ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಅನುಮೋದನೆ ನೀಡಲಿದ್ದಾರೆ. ಹಾಗೂ ರೈಲ್ವೆ ಹಾಗೂ ಟೆಲಿಕಾಂ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಮೈಸೂರು ನಗರದ ಈ ಕೆಳಕಂಡ ಮುಕ್ತಾಯಗೊಂಡಿರುವ ಕಾಮಗಾರಿಗಳನ್ನು ಉದ್ಘಾಟನೆ ಮಾಡಿಕೊಡುವಂತೆ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಆಹ್ವಾನಿಸಲಾಯಿತು.

1. ಕಡಕೊಳ ಬಳಿ 55 ಎಕರೆ ಜಾಗದಲ್ಲಿ ಕಂಟೈನರ್ ಕಾರ್ಪೋರೇಶನ್ ಆಫ್ ಇಂಡಿಯಾದ ವತಿಯಿಂದ ರೂ.102 ಕೋಟಿ ವೆಚ್ಚದಲ್ಲಿ ರೈಲ್ವೆ ಗೂಡ್ಸ್ ಟರ್ಮಿನಲ್.

2. ಸುಮಾರು ರೂ.30 ಕೋಟಿ ವೆಚ್ಚದಲ್ಲಿ ಮೈಸೂರು ನಗರದ ಆಶೋಕಪುರಂ ರೈಲ್ವೆ ಯಾರ್ಡ್ ಅನ್ನು ಒಂದು ಸುಸಜ್ಜಿತವಾದ ಸ್ಟೇಷನ್, ಪೂಟ್ ಓವರ್ ಬ್ರಿಡ್ಜ್, 02 ಪ್ಲಾಟ್ ಫಾರಂ, 02 ಸ್ಟೇಬಲಿಂಗ್ ಲೈನ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಂತೆ ಅಭಿವೃದ್ಧಿ ಪಡಿಸಲಾಗಿರುತ್ತದೆ.

3. ಮೈಸೂರು ನಗರ ಹೊರವಲಯದಲ್ಲಿರುವ ಹೆಬ್ಬಾಳ ಕೈಗಾರಿಕ ಪ್ರದೇಶಾದಲ್ಲಿ (ಇನ್ಪೋಸಿಸ್ ಬಳಿ) ರೂ.27.64 ಕೋಟಿ ವೆಚ್ಚದಲ್ಲಿ ಎಸ್ ಡಿ ಪಿ ಐ (ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ನಿರ್ಮಾಣಗೊಂಡಿರುತ್ತದೆ. ಸಂಸದ ಪ್ರತಾಪ್ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 


Share